ಜಿಲ್ಲಾ ಸುದ್ದಿ

ಆಸ್ತಿ ವಿವರ ಸಲ್ಲಿಸದ 26 ಶಾಸಕರು

ಆಸ್ತಿ ವಿವರ ಸಲ್ಲಿಸದ 26 ಶಾಸಕರು
Published On :

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ, ವಿಧಾನಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ ಸೇರಿದಂತೆ ಆಸ್ತಿ ವಿವರ ಸಲ್ಲಿಸದ 26 ಶಾಸಕರ ಹೆಸರುಗಳನ್ನು ಲೋಕಾಯುಕ್ತರು ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಲೋಕಾಯುಕ್ತ ಕಾಯ್ದೆ 1984 ಕಲಂ 22, ಕಲಂ 7(1)ರ ಅನ್ವಯ ತನ್ನ ಹಾಗೂ ಕುಟುಂಬ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಜೂ.30ರ ಒಳಗೆ ಲೋಕಾಯುಕ್ತಕ್ಕೆ ಸಲ್ಲಿಸಬೇಕಿತ್ತು. ಆದರೆ, ವಿಧಾನಸಭೆಯ 20 ಸದಸ್ಯರು ಹಾಗೂ ವಿಧಾನ ಪರಿಷತ್‌ನ 6 ಸದಸ್ಯರು ಈವರೆಗೆ ಆಸ್ತಿ ವಿವರ ಸಲ್ಲಿಸಿಲ್ಲ. ಆದ್ದರಿಂದ ಅವರ ಹೆಸರನ್ನು ಲೋಕಾಯುಕ್ತರು ಬಹಿರಂಗಗೊಳಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸದ ಶಾಸಕರು

ಅರವಿಂದ ಚಂದ್ರಕಾಂತ ಪಾಟೀಲ್, ಖಾನಾಪುರ
ಅಶೋಕ ಖೇಣಿ-ಬೀದರ್ ದಕ್ಷಿಣ
ಎಚ್.ಸಿ.ಬಾಲಕೃಷ್ಣ- ಮಾಗಡಿ
ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ-ಕುಂದಗೋಳ
ಗೋಪಾಲ ಪುಜಾರಿ-ಬೈಂದೂರು
ಕೆ.ಗೋಪಾಲಯ್ಯ-ಮಹಾಲಕ್ಷ್ಮಿ ಬಡಾವಣೆ
ಗುರು ಪಾಟೀಲ್ ಶಿರವಾಳ-ಶಹಾಪುರ
ಡಾ.ಗುರುಪಾದಪ್ಪ ನಾಗಮಾರಪಲ್ಲಿ, ಬೀದರ್
ವಿಜಯಾನಂದ ಕಾಶಪ್ಪನವರ್- ಹುನಗುಂದ
ಕೋನರೆಡ್ಡಿ ಎನ್.ಎಚ್-ನವಲಗುಂದ
ಎಚ್.ಡಿ ಕುಮಾರಸ್ವಾಮಿ-ರಾಮನಗರ
ಮಲ್ಲಿಕಾರ್ಜುನ ಖೂಬಾ-ಬಸವಕಲ್ಯಾಣ
ಮಂಜುನಾಥ ಗೌಡ-ಮಾಲೂರು
ಎಸ್.ರಘು-ಸಿ.ವಿ.ರಾಮನ್‌ನಗರ
ಜಿ.ರಾಮಕೃಷ್ಣ-ಗುಲ್ಬರ್ಗ ಗ್ರಾಮೀಣ
ಎಂ.ಪಿ ರವೀಂದ್ರ- ಹರಪನಹಳ್ಳಿ
ಎಸ್.ಭೀಮಾನಾಯಕ್- ಹಗರಿಬೊಮ್ಮನಹಳ್ಳಿ
ಸತೀಶ್ ಸೈಲ್- ಕಾರವಾರ
ಡಾ.ಶಿವರಾಜ ಪಾಟೀಲ್- ರಾಯಚೂರು
ಸುಧಾಕರ್ ಲಾಲ್- ಕೊರಟಗೆರೆ

ವಿಧಾನ್ ಪರಿಷತ್ ಸದಸ್ಯರು

ವಿ.ಎಸ್ ಉಗ್ರಪ್ಪ, ಇಕ್ಬಾಲ್ ಅಹಮದ್ ಸರಡಗಿ, ಐವಾನ್ ಡಿಸೋಜಾ, ಜಯಮಾಲಾ ರಾಮಚಂದ್ರ ಹಾಗೂ ರಘ ಆಚಾರ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.