ಉತ್ತರ ಅಮೆರಿಕ ಮೌಂಟ್ ಡಿನೈಲ್ ಶಿಖರ ಏರಿದ ಬೆಂಗಳೂರು ಟೆಕಿ

ಕನ್ನಡಪ್ರಭ ವಾರ್ತೆ, ಬೆಂಗಳೂರು ಸೆ.6:
ಬೆಂಗಳೂರು ಮೂಲದ ಸಾಫ್ಟ್ವೇರ್ ಎಂಜಿನಿಯರ ್ ಸತ್ಯರೂಪ್ ಸಿದ್ಧಾಂತ ಅವರು ಉತ್ತರ ಅಮೆರಿಕ ಮೌಂಟ್ ಡಿನೈಲ್ ಪರ್ವತವನ್ನು 9 ದಿನಗಳ ಅವಧಿಯಲ್ಲಿ ಏರಿದ್ದಾರೆ. ಈ ಮೂಲಕ ಸಮುದ್ರ ಮಟ್ಟಕ್ಕಿಂತಲೂ 20,322 ಅಡಿ ಎತ್ತರದ ಈ ಶಿಖರವನ್ನು ಅತಿ ವೇಗವಾಗಿ ಏರಿದ ಮೊದಲ ಭಾರತೀಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಯಾವುದೇ ಮಾರ್ಗದರ್ಶಕರ ನೆರವಿಲ್ಲದೇ ಪರ್ವತಾರೋಹಣ ಮಾಡಿರುವುದು ಸತ್ಯರೂಪ್ ಸಿದ್ಧಾಂತ ಅವರ ಮತ್ತೊಂದು ಸಾಹಸ. ನೇಪಾಳ, ಕೆನಡಾ, ಅಮೆರಿಕ ಮತ್ತು ಬಾಂಗ್ಲಾದೇಶದ ಸ್ನೇಹಿತರ ನೆರವಿಂದ ಪರ್ವತಾರೋಹಣ ಆರಂಭಿಸಿ. ಜು.23ರ ರಾತ್ರಿ 8.10ಕ್ಕೆ ಡಿನೈಲ್ ಪರ್ವತದ 22,841 ಅಡಿ ಎತ್ತರವನ್ನು ತಲುಪಿದರು. ತಂಡದಲ್ಲಿ ಸತ್ಯರೂಪ್ ಸಿದ್ಧಾಂತ ಕೆನಡಾದ ಕ್ರಿಸ್ಟೋಫರ್ ಮ್ಯಾನಿಂಗ್, ನೇಪಾಳದ ಸುಷ್ಮಿತಾ ಮ್ಯಾಸ್ಕೀ, ಬಾಂಗ್ಲಾದೇಶದ ಮೂಸಾ ಇಬ್ರಾಹಿಮ್ ಹಾಗೂ ಅಮೆರಿಕದ ರಯಾನ್ ಫ್ರಾಂಕೊಯಿಸ್ ಇದ್ದರು.
ಪರ್ವತಾರೋಹಣದ ಅನುಭವ ಕುರಿತಾಗಿ ಮಾತನಾಡಿದ ಸತ್ಯ ರೂಪ್ ಸಿದ್ಧಾಂತ, ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು. ನಮ್ಮ ಕೈ ಬೆರಳುಗಳು ಶೀತದಿಂದಾಗಿ ಮರಗಟ್ಟಿದ್ದವು. ಒಂದು ಹಂತದಲ್ಲಿ ನಮ್ಮ ಕೈ ಬೆರಳುಗಳನ್ನು ಸಂಪೂರ್ಣ ಕಳೆದುಕೊಳ್ಳುವಂತಾಗುತ್ತದೆ ಎಂದನಿಸಿತ್ತು. ಅಲ್ಲದೆ ಮುಂದಿನ ದಾರಿ ಕಾಣದಷ್ಟು ಮಂಜು. ಹೀಗಾಗಿ ನಾವಿಟ್ಟ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸಾವಿನೊಡನೆ ಚೆಲ್ಲಾಟವಾಡುತ್ತಿರುವ ಅನುಭವವಾ ಗುತ್ತಿತ್ತು ಎಂದರು.
ಇಂತಹದ್ದೊಂದು ಅಮೋಘ ಸಾಹಸದ ಮೂಲಕ ಸಿದ್ಧಾಂತ ಅವರು ಮೌಂಟ್ ಡಿನೈಲ್ ಏರಿದ ಮೊಟ್ಟ ಮೊದಲ ಕರ್ನಾಟಕ ಮೂಲದ ವ್ಯಕ್ತಿ ಎನಿಸಿದ್ದಾರೆ. ಇದಲ್ಲದೆ ಅವರು ಆಫ್ರಿಕಾದ ಅತ್ಯಂತ ಎತ್ತರದ ಶಿಖರವಾರ ಮೌಂಟ್ ಕಿಲಿಮಂಜಾರೋ, ಯುರೋಪ್ನ ಮೌಂಟ್ ಎಲಸ್. ದಕ್ಷಿಣ ಅಮೇರಿಕದ ಮೌಂಟ್ ಅಕೊನಾಗುವಾ ಏರಿದ ಸಾಧನೆ ಕೂಡ ಮಾಡಿದಾರೆ. ಸಿದ್ಧಾಂತ ಅವರು ತಮ್ಮ ಈವರೆಗಿನ ಎಲ್ಲ ಸಾಹಸ ಕಾರ್ಯಗಳಿಗೆ ಬ್ಯಾಂಕಿನಿಂದ ವೈಯಕ್ತಿಕ ಸಾಲ ಪಡೆದು ಹಣ ಹೊಂದಿಸಿದ್ದಾರೆ.
ಅವರು ಇತ್ತೀಚೆಗೆ ಆನ್ಲೈನ್ ಟ್ಯಾಲೆಂಟ್ ಹಂಟ್ ಸ್ಫರ್ಧೆಯಾದ ಗ್ರ್ಯಾಬ್ ಯುವರ್ ಡ್ರೀಮ್ ಅಡ್ವೆಂಚರ್ ಸ್ಪರ್ಧೆಯಲ್ಲಿಯೂ ಜಯಿಸಿದ್ದಾರೆ. ಈ ಮೂಲಕ ಫ್ರಾನ್ಸ್ನ ಮೌಂಟ್ ಬ್ಲಾಂಕ್ ಏರುವ ಅವಕಾಶ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


