ಜಿಲ್ಲಾ ಸುದ್ದಿ

ಪರಿವರ್ತಿತ ನಿವೇಶನಗಳಿಗೆ ಎ ಖಾತಾ: ಸರ್ಕಾರಕ್ಕೆ ಬಿಬಿಎಂಪಿ ಮನವಿ

ಪರಿವರ್ತಿತ ನಿವೇಶನಗಳಿಗೆ ಎ ಖಾತಾ: ಸರ್ಕಾರಕ್ಕೆ ಬಿಬಿಎಂಪಿ ಮನವಿ
Published On :

ಬೆಂಗಳೂರು: ಪರಿವರ್ತನೆಯಾಗಿರುವ ನಿವೇಶನಗಳಿಗೆ ಎ ಖಾತಾ ನೀಡಲು ಅನುವು ಮಾಡಿಕೊಡಬೇಕೆಂದು ಬಿಬಿಎಂಪಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ನೂತನ ಮೇಯರ್ ಶಾಂತಕುಮಾರಿ ಮತ್ತು ಉಪ ಮೇಯರ್ ರಂಗಣ್ಣ ಅವರು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಾಂಪ್ರದಾಯಿಕವಾಗಿ ಭೇಟಿ ಮಾಡಿ, ಸಂತಸ ಹಂಚಿಕೊಂಡರುಯ ಹಾಗೆಯೇ ಬಿಬಿಎಂಪಿ ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಲುವಾಗಿ ನೆನೆಗುದಿಗೆ ಬಿದ್ದಿರುವ ಅನುದಾನ ಬಿಡುಗಡೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿದರು.

ಪರಿವರ್ತನೆಯಾಗಿರುವ ಕಂದಾಯ ನಿವೇಶನಗಳಿಗೆ ಎ ಖಾತಾ ನೀಡುವುದಕ್ಕೆ ಬಿಬಿಎಂಪಿ ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಆದರೆ ಅದಕ್ಕೆ ಸರ್ಕಾರದ ಅನುಮೋದನೆ ದೊರೆತಿಲ್ಲ. ಹೀಗಾಗಿ ಪರಿವರ್ತನೆಯಾಗಿರುವ ನಿವೇಶನಗಳಲ್ಲಿ ಬಿಬಿಎಂಪಿ ಯಾವುದೇ ತೆರಿಗೆ ವಸೂಲಿ ಮಾಡಲಾಗುತ್ತಿಲ್ಲ ಎಂದು ಮೇಯರ್ ಸಮಸ್ಯೆ ಹೇಳಿಕೊಂಡರು.

ಇದೇವೇಳೆ 13ನೇ ಹಣಸಾಕು ಆಯೋಗದ ಅನುದಾನ ಮತ್ತು ಮುಖ್ಯಮಂತ್ರಿಗಳ ನಗರೋತ್ಥಾನಾ ಯೋಜನೆಯಲ್ಲಿ ಬಿಬಿಎಂಪಿ ಕೆಲವು ಯೋಜನೆಗಳನ್ನು ಕೈಗೊಂಡಿದೆ. ಇದಕ್ಕೆ ಪೂರಕವಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗದೇ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ಮೇಯರ್ ವಿನಂತಿಸಿದರು. ಇದೆಲ್ಲವನ್ನೂ ಆಲಿಸಿದ ಸಿಎಂ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಸಭೆ ನಡೆಸೋಣ. ಅಲ್ಲಿ ಈ ಎಲ್ಲಾ ವಿಚಾರಗಳನ್ನು ಚರ್ಚಿಸಿ ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳೋಣ ಎಂದು ಹೇಳಿರುವುದಾಗಿ ಶಾಂತಕುಮಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.