ಪೇ ಟಿಎಂ ವಂಚನೆ

ಮೊಬೈಲ್ ಫೋನ್ ರಿಚಾರ್ಜ್, ಮೊಬೈಲ್ ಬಿಲ್ ಪಾವತಿ, ಟಿಕೆಟ್ ಬುಕ್ಕಿಂಗ್ ಮುಂತಾದ...
ಪೇ ಟಿಎಂ ವಂಚನೆ
Updated on: 

ಬೆಂಗಳೂರು: ಮೊಬೈಲ್ ಫೋನ್ ರಿಚಾರ್ಜ್, ಮೊಬೈಲ್ ಬಿಲ್ ಪಾವತಿ, ಟಿಕೆಟ್ ಬುಕ್ಕಿಂಗ್ ಮುಂತಾದ ಸೌಲಭ್ಯ ಒದಗಿಸುವ ಸ್ಮಾರ್ಟ್ ಫೋನ್ ಮೊಬೈಲ್ ಅಪ್ಲಿಕೇಶನ್ 'ಪೇ ಟಿಎಂ' ಮೂಲಕ ಬೆಸ್ಕಾಂ ಬಿಲ್ ಪಾವತಿ ಮಾಡಿದ ಗ್ರಾಹಕರಿಬ್ಬರು ವಂಚನೆಗೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ, ಸಂಸ್ಥೆ ತಿಳಿಸಿರುವ ಅಧಿಕೃತ ವ್ಯವಸ್ಥೆ ಮೂಲಕವೇ ಬಿಲ್ ಪಾವತಿಸುವಂತೆ ಗ್ರಾಹಕರಿಗೆ ಬೆಸ್ಕಾಂ ಮನವಿ ಮಾಡಿದೆ. ವಂಚನೆ ಪ್ರಕರಣ ಸಂಬಂಧ ಸೈಬರ್ ಠಾಣೆಗೆ ದೂರು ನೀಡಲು ನಿರ್ಧರಿಸುವುದಾಗಿ ಬೆಸ್ಕಾಂ ವ್ಯವಸ್ಥಾಪಕ ಶಿವಕುಮಾರ್ ಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನ ಗ್ರಾಹಕರಿಬ್ಬರು ಪೇ ಟಿಎಂ ಮೂಲಕ ತಮ್ಮ ಮನೆಯ ವಿದ್ಯುತ್ ಬಿಲ್ ರು.1320 ಹಾಗೂ 1000 ಪಾವತಿಸಿದ್ದರು. ಆದರೆ, ಒಂದು ತಿಂಗಳಲ್ಲಿ ಅವರ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಸಂಬಂಧಪಟ್ಟ ಬೆಸ್ಕಾಂ ಕಚೇರಿಗೆ ತೆರಳಿ ವಿಚಾರಿಸಿದ್ದಾರೆ.

ಬಿಲ್ ಪಾವತಿಯಾಗಿಲ್ಲ ಎಂದು ಕಚೇರಿ ಸಿಬ್ಬಂದಿ ಹೇಳಿದ್ದಾರೆ. ಆಗ ಗ್ರಾಹಕರು ತಾವು ಪೇ ಟಿಎಂ ಮೂಲಕ ಪಾವತಿಸಿರುವುದಾಗಿ ಹೇಳಿದ್ದಾರೆ. ಅಂತಹ ಹೆಸರಿನ ಗೇಟ್‌ವೇ ಅನ್ನು ಸೃಷ್ಟಿಸಿಯೇ ಇಲ್ಲ ಎಂದು ಬೆಸ್ಕಾಂ ಹೇಳಿದೆ.

ಹೀಗಾಗಿ ಗ್ರಾಹಕರು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದರು. ಅಲ್ಲಿಯೂ ಅದೇ ಉತ್ತರ ಬಂದಾಗ ಪೇ ಟಿಎಂನಿಂದ ವಂಚನೆಯಾಗಿರುವುದು ತಿಳಿದು ಬಂದಿದೆ. ಪೇ ಟಿಎಂ ಮೂಲಕ ಬಿಲ್ ಪಾವತಿ ಲಿಂಕ್ ಪರಿಶೀಲಿಸಿದಾಗ ಅಂತಹ ಲಿಂಕ್ ಕಂಡುಬಂದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲೇ ಪಾವತಿಸಿ: ಬೆಸ್ಕಾಂ ಗ್ರಾಹಕರು ವಂಚಕ ತಾಣಗಳ ಬಗ್ಗೆ ಎಚ್ಚರದಿಂದ ಇರಬೇಕು. ಉಪ ವಿಭಾಗದ ಎಟಿಪಿ ಕೌಂಟರ್, ಬೆಂಗಳೂರು ಒನ್, ಮೇ.ಈಸಿ ಬಿಲ್, ಬೆಸ್ಕಾಂ ಆನ್‌ಲೈನ್, ಬಿಲ್ ಜಂಕ್ಷನ್, ಬಿಲ್ ಡೆಸ್ಕ್, ಮೊಬೈಲ್ ಮೂಲಕ ಅಥವಾ ಇಸಿಎಸ್ ಹಾಗೂ ಸಿಟಿ ಯೂನಿಯನ್ ಬ್ಯಾಂಕ್ ಶಾಖೆಗಳಲ್ಲಿ ಬಿಲ್ ವಾಪತಿಸಬೇಕು. ಬೆಸ್ಕಾಂ ಏಜೆಂಟರು ಎಂದು ಪಚಿಚಯಿಸಿಕೊಳ್ಳುವವರಲ್ಲಿ, ವಂಚಕ ಜಾಲ ತಾಣಗಳಲ್ಲಿ ಬಿಲ್ ಪಾವತಿಸಿದರೆ ಅದಕ್ಕೆ ಗ್ರಾಹಕರೇ ಹೊಣೆಯಾಗಬೇಕಾಗುತ್ತದೆ ಎಂದು ಬೆಸ್ಕಾಂ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com