ಜಿಲ್ಲಾ ಸುದ್ದಿ

ಫೋರಂ ಮಾಲ್‌ನಲ್ಲಿ ಶಾಪ್ ಮಾಡಿ, ಜಗತ್ತಿನ 10 ಅದ್ಭುತ ಸ್ಥಳಗಳಿಗೆ ಪ್ರವಾಸ ಮಾಡಿ!

ಫೋರಂ ಮಾಲ್‌ನಲ್ಲಿ ಶಾಪ್ ಮಾಡಿ, ಜಗತ್ತಿನ 10 ಅದ್ಭುತ ಸ್ಥಳಗಳಿಗೆ ಪ್ರವಾಸ ಮಾಡಿ!
Published On :

ಬೆಂಗಳೂರು: ಕಳೆದ ವರ್ಷದ ಆವೋ ದುಬೈ ಜಾವೋ ಶಾಪಿಂಗ್ ಫೆಸ್ಟಿವಲ್ ನಿಮಗೆ ನೆನಪಾಗಿರಬಹುದು. ಈ ವರ್ಷ ಫೋರಂ ಮಾಲ್ ಜಗತ್ತಿನ 10 ಅದ್ಭುತ ಸ್ಥಳಗಳಿಗೆ ನಿಮ್ಮನ್ನು ಕಳುಹಿಸುತ್ತಿದೆ. ಅಕ್ಟೋಬರ್ 2ರಿಂದ ಶಾಪಿಂಗ್ ಫೆಸ್ಟಿವಲ್ ಆರಂಭವಾಗುತ್ತಿದೆ. ಫೋರಮ್ ಮಾಲ್ ಕೋರಮಂಗಲ ಮತ್ತು ಫೋರಮ್ ವ್ಯಾಲ್ಯೂ ಮಾಲ್ ವೈಟ್ಫೀಲ್ಡ್ನಲ್ಲಿ ಒಂದು ತಿಂಗಳ ಕಾಲ ಈ ಫೆಸ್ಟಿವಲ್ ನಡೆಯಲಿದೆ. ಕುತೂಹಲಕಾರಿ ಪ್ರೊಮೋಶನ್ಗಳು, ಖುಷಿ ತುಂಬಿದ ಮನರಂಜನೆ, ಉಡುಗೊರೆ ಹಾಗೂ ಇನ್ನೂ ಹಲವು ಖುಷಿ ನಿಮ್ಮದಾಗಲಿದೆ.

ಒಂದು ತಿಂಗಳ ಸುದೀರ್ಘ ಈ ಫೆಸ್ಟಿವಲ್ನಲ್ಲಿ ಭಾಗವಹಿಸಲು 10 ಸಾವಿರ ರೂ. ನೀಡಬೇಕಿರುತ್ತದೆ. ಪ್ರತಿ ಮಾಲ್ನಿಂದ ಮೂರು ದಂಪತಿಗಳು ಯುರೋಪ್, ಆಸ್ಟ್ರೇಲಿಯಾ ಮತ್ತು ಏಷ್ಯಾದ ವಿವಿಧ ನಗರಗಳಿಗೆ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಪಡೆಯುತ್ತಾರೆ.
ಇನ್ನೇನು ಬೇಕು! ಆಯಾ ಮಾಲ್ಗಳಲ್ಲಿ ಫೆಸ್ಟಿವಲ್ ಅವಧಿಯಲ್ಲಿ ಯಾವುದೇ ಸ್ಟೋರ್ಗಳಲ್ಲಿ ಖರೀದಿ ಮಾಡಬಹುದು. ಇನ್ನು ಮುಂದೆ, ಇಡೀ ಹಬ್ಬದ ಅವಧಿಯಲ್ಲಿ ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶ ಮತ್ತು ಮನರಂಜನಾ ಚಟುವಟಿಕೆಗಳನ್ನು ನಿಮಗಾಗಿ ರೂಪಿಸಲಾಗಿದೆ.

ಹೀಗಾಗಿ ಬನ್ನಿ, ನಿಮ್ಮ ಇಷ್ಟದ ಬ್ರಾಂಡ್ ಖರೀದಿಸಿ ಮತ್ತು ನಿಮ್ಮ ಇಷ್ಟದವರ ಜತೆ ಜಗತ್ತಿನ 10 ಅದ್ಭುತಗಳನ್ನು ನೋಡುವ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.