ವೈದ್ಯರಿಂದ ಜಯಲಲಿತಾ ಆರೋಗ್ಯ ತಪಾಸಣೆ

ಬೆಂಗಳೂರು: ಕಳೆದ ಮೂರು ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಾಮಾನ್ಯ ಕೈದಿಗಳ ಕೊಠಡಿಯಲ್ಲಿ ಇರುವ ಜಯಲಲಿತಾ ಅವರನ್ನು ಪ್ರತಿ2 ಗಂಟೆಗಳಿಗೊಮ್ಮೆ ನುರಿತ ವೈದ್ಯರಿಂದ ತಪಾಸಣೆಗೊಳಪಡಿಸಲಾಗುತ್ತಿದೆ.
ಜಯಲಲಿತಾ ಅವರಿಗೆ ಈ ಮೊದಲೇ ಬೆನ್ನುನೋವು, ಡಯಾಬಿಟೀಸ್, ರಕ್ತದೊತ್ತಡ ಇದ್ದ ಕಾರಣ ಅವರು ತೆಗೆದುಕೊಳ್ಳುತ್ತಿರುವ ಔಷಧಿಗಳ ಜೊತೆಗೆ ಜೈಲಿನ ಆಸ್ಪತ್ರೆಯಲ್ಲಿರುವ ಪರಿಣತ ತಜ್ಞ ವೈದ್ಯರು ವೈದ್ಯಕೀಯ ತಪಾಸಣೆ ನಡೆಸುತ್ತಿದ್ದಾರೆ.
ಹೊಟ್ಟೆ ನೋವು ಸೇರಿದಂತೆ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣ ಅಪೋಲೋ ಆಸ್ಪತ್ರೆಯಿಂದ ಅಗತ್ಯ ಮಾತ್ರೆಗಳು, ಇಂಜೆಕ್ಷನ್ ತರಿಸಿ ನೀಡಲಾಗಿದೆ.
ಹಿರಿಯ ವೈದ್ಯಾಧಿಕಾರಿ ವಿಜಯಕುಮಾರ್ ಜಯಲಲಿತಾ ಅವರಿಗೆ ಮೊದಲು ತೆಗೆದುಕೊಳ್ಳುತ್ತಿದ್ದ ಔಷಧಿಗಳನ್ನೇ ನೀಡುತ್ತಿದ್ದಾರೆ. ಜಯಲಲಿತಾ ಅವರ ಕುಟಂಬದ ವೈದ್ಯ ಶಾಂತಾರಾಮ್ ಅವರ ಸಲಹೆ ಮೇರೆಗೆ ಜೈಲಿನ ಆಸ್ಪತ್ರೆಯಲ್ಲಿರುವ ಐದು ಮಂದಿ ನುರಿತ ವೈದ್ಯರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡುತ್ತಿದ್ದಾರೆ.
ಅಪೋಲೋ ಆಸ್ಪತ್ರೆ ವೈದ್ಯರು ಸಹ ಬೆಳಗ್ಗೆ ಭೇಟಿ ನೀಡಿ ಅಮ್ಮನ ಆರೋಗ್ಯ ಪರಿಶೀಲನೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


