ರಾಜ್ಯದಲ್ಲಿ ಸುಮಾರು 46,000 ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳಿಗೆ ಸರ್ಕಾರ ಪ್ರತೀ ವರ್ಷ ರು. 15,000 ವನ್ನು ವಾರ್ಷಿಕ ದುರಸ್ಥಿಗಾಗಿ ನೀಡಿದರೆ, ರು. 7000 ವನ್ನು ಪ್ರೈಮರಿ ಶಾಲೆಗಳಿಗೆ ಪ್ರಾಥಮಿಕ ಅನುದಾನವಾಗಿ ನೀಡುತ್ತದೆ. ಅದೇ ವೇಳೆ ಎಲ್‌ಪಿ ಶಾಲೆಗಳಿಗೆ ರು. 15,000 ದುರಸ್ಥಿ ಅನುದಾನ ಮತ್ತು ರು. 5000 ವನ್ನು ಪ್ರಾಥಮಿಕ ಅನುದಾನನಾಗಿ ನೀಡುತ್ತದೆ.