ಜಿಲ್ಲಾ ಸುದ್ದಿ

ಮತಾಂತರ ವಿರುದ್ಧ ಜಾಗೃತಿಯೇ ಪರಿವರ್ತನ

ಮತಾಂತರ ವಿರುದ್ಧ  ಜಾಗೃತಿಯೇ ಪರಿವರ್ತನ
ಮಂಗೇಶ್ ಭೇಂಡೆ
Published On :

ಶಿವಮೊಗ್ಗ: ರಾಷ್ಟ್ರವಾದಿ ಚಿಂತನೆ ಯಿಂದ ದೇಶ ಕಟ್ಟುವ ಯೋಚನೆ ಸಂಘಕ್ಕಿತ್ತು. ಆದರೆ ಅಂದಿನ ಪ್ರಧಾನಿ ನೆಹರೂ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಾಶ ಮಾಡಲು ಮುಂದಾದರು. ಜತೆಗೆ ಗಾಂಧಿ ಅವರನ್ನು ಹತ್ಯೆ ಮಾಡಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದು ಜಗತ್ತಿಗೆ ಸುಳ್ಳು ಹೇಳಿದರು ಎಂದು ಆರೆಸ್ಸೆಸ್ ಅಖಿಲ ಭಾರತ ಸಹ ವ್ಯವಸ್ಥಾ ಪ್ರಮುಖ್ ಹಾಗೂ ದಕ್ಷಿಣ ಮಧ್ಯ ಕ್ಷೇತ್ರೀಯ  ಪ್ರಚಾರಕ ಮಂಗೇಶ್ ಭೇಂಡೆ ಹೇಳಿದರು.ನಗರದ ರಾಷ್ಟ್ರೀಯ ಶಿಕ್ಷ ಣ ಸಮಿತಿ ಮೈದಾನದಲ್ಲಿ ಭಾನುವಾರ ಆಯೋ ಜಿಸಿದ್ದ `ಪರಿವರ್ತನ' ಜಿಲ್ಲಾ ತರುಣ ಸಮಾವೇಶದಲ್ಲಿ ಅವರು ಗಣವೇಶಧಾರಿಗಳನ್ನುದ್ದೇಶಿಸಿ,ಇದೆಲ್ಲದರ ನಡುವೆಯೂ ಸಂಘ ಜಗತ್ತಿನ ದೊಡ್ಡ ಶಕ್ತಿಯಾಗಿ ನಿಂತಿದೆ. ಜಗತ್ತು ನಮ್ಮ ಕಡೆ ನೋಡುತ್ತಿದೆ ಎಂದರು.

ಮತಾಂತರ ವಿರುದ್ಧ ಜಾಗೃತಿ: ಇಂದು ಮುಸ್ಲಿಮರು ಲವ್ ಜೆಹಾದ್ ಮೂಲಕ ಮತಾಂತರ ಮಾಡುತ್ತಿದ್ದಾರೆ . ಕ್ರಿಶ್ಚಿಯ ನ್ನರು ಸೇವೆಯ ಮೂಲಕ ಮತಾಂತರ ಮಾಡುತ್ತಿದ್ದಾರೆ. ಇದರ ಬಗ್ಗೆ ಜಾಗೃತಿ ಮೂಡಿಸುವುದೇ ಪರಿವರ್ತನ ಸಮಾವೇಶದ ಉದ್ದೇಶ ಎಂದರು.ಮಾಜಿ ಮುಖ್ಯಮಂತ್ರಿ,ಸಂಸದ ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಶಾಸಕ ಬಿ.ವೈ.ರಾಘವೇಂದ್ರ, ಸಿ.ಟಿ. ರವಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.