ರು. 85 ಕೋಟಿ ಮೌಲ್ಯದ ಭೂ ಒತ್ತುವರಿ ತೆರವು

ಬೆಂಗಳೂರು: ಜಿಲ್ಲಾಡಳಿತದಿಂದ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದು, ಶನಿವಾರ ರು. 85.50 ಕೋಟಿ ಮೌಲ್ಯದ 66.17 ಎಕರೆ ಭೂ ಒತ್ತುವರಿ ತೆರವು ಮಾಡಲಾಗಿದೆ.
ಉತ್ತರ ತಾಲೂಕು ಹೆಸರಘಟ್ಟ ಹೋಬಳಿಯ ಕಡತನಮಲೆ ಗ್ರಾಮದ ಸರ್ವೆ ನಂ.20 ರಲ್ಲಿ 48 ಎಕರೆ ಸರ್ಕಾರಿ ಕೆರೆ ಜಾಗವನ್ನು ಶಿವರುದ್ರಯ್ಯ, ಬಚ್ಚೇಗೌಡ, ಸಂಜೀವಯ್ಯ, ಪಾಪಣ್ಣ ಎಂಬುವರು ಒತ್ತುವರಿ ಮಾಡಿದ್ದರು. ತಹಸೀಲ್ದಾರ್ ಬಾಳಪ್ಪ ಹಂದಿಗುಂದ ನೇತೃತ್ವದಲ್ಲಿ ಅಂದಾಜು ರು30 ಕೋಟಿ ಮೌಲ್ಯದ ಸರ್ಕಾರಿ ಜಮೀನು ತೆರವುಗೊಳಿಸಲಾಯಿತು. ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿಯ ಪುನಗಮಾರನಹಳ್ಳಿಯಸರ್ವೆ ನಂ.15 ರಲ್ಲಿ ಸರ್ಕಾರಿ ಜಾಗದಲ್ಲಿ ಎಲ್.ಆರ್.ಅಸೋಸಿಯೇಟ್ಸ್, ಹರಾಜಿನಲ್ಲಿ ಖರೀದಿಸಿದ ಜಾಗಕ್ಕಿಂತ 1.30 ಎಕರೆ ಒತ್ತುವರಿ ಮಾಡಿಕೊಂಡಿತ್ತು. ರು.5 ಕೋಟಿ ಮೌಲ್ಯದ ಈ ಜಮೀನನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಪೂರ್ವ ತಾಲೂಕು, ಕೆ.ಆರ್.ಪುರ ಹೋಬಳಿಯ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ.124 ರಲ್ಲಿ 1.7 ಎಕರೆ, ನಾಗೊಂಡನಹಳ್ಳಿಯ ಸರ್ವೆ ನಂ.120 ರಲ್ಲಿ 1.32 ಎಕರೆ, ಬಿದರಹಳ್ಳಿ ಹೋಬಳಿಯ ಕಾಟನಲ್ಲೂರು ಗ್ರಾಮದ ಸರ್ವೆ ನಂ.56 ರಲ್ಲಿ 10 ಗುಂಟೆ, ಕನ್ನಮಂಗಲ ಗ್ರಾಮದ ಸರ್ವೆ ನಂ.31 ರಲ್ಲಿ 6 ಎಕರೆ, ಕಣ್ಣೂರು ಗ್ರಾಮದ ಸರ್ವೆ ನಂ.35 ರಲ್ಲಿ 2 ಎಕರೆ, ಚಿಕ್ಕಗುಬ್ಬಿ ಗ್ರಾಮದ ಸರ್ವೆ ನಂ.73 ರಲ್ಲಿ 31 ಗುಂಟೆ ಒತ್ತುವರಿ ತೆರವುಗೊಳಿಸಲಾಯಿತು. ತಹಶೀಲ್ದಾರ್ ಡಾ.ಹರೀಶ್ನಾಯ್ಕ್ ನೇತೃತ್ವದಲ್ಲಿ ರು 45 ಕೋಟಿ ಮೌಲ್ಯದ ಭೂಮಿ ವಶಪಡಿಸಿಕೊಳ್ಳಲಾಯಿತು.
ಆನೇಕಲ್ ತಾಲೂಕು ಸರ್ಜಾಪುರ ಹೋಬಳಿಯ ಕೂಗೂರು ಗ್ರಾಮದ ಸರ್ವೆ ನಂ.169 ರಲ್ಲಿ 2.35 ಎಕರೆ, ಸರ್ವೆ ನಂ.138 ರಲ್ಲಿ 15 ಗುಂಟೆ, ಸರ್ವೆ ನಂ.183 ರಲ್ಲಿ 1.17 ಎಕರೆ ಜಮೀನನ್ನು ತಹಸೀಲ್ದಾರ್ ಅನಿಲ್‍ಕುಮಾರ್ ನೇತೃತ್ವದಲ್ಲಿ ವಶಕ್ಕೆ ಪಡೆಯಲಾಯಿತು. ಈ ಜಮೀನು ರು 5.50 ಕೋಟಿ ಮೌಲ್ಯ ಹೊಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


