ಜುಗಲ್‍ಬಂದಿ ಚಿತ್ರಕಲೆ ಛಾಯಾಚಿತ್ರ ಪ್ರದರ್ಶನ

ಬೆಂಗಳೂರು: ಬದುಕು, ಪರಿಸರ ಹಾಗೂ ಜೀವನದ ಹಲವು ಆಯಾಮಗಳ ಕುರಿತ `ಜುಗಲ್‍ಬಂದಿ' ಚಿತ್ರಕಲೆ ಹಾಗೂ ಛಾಯಾಚಿತ್ರ ಪ್ರದರ್ಶನ ಕಲಾರಸಿಕರನ್ನು ಸೆಳೆಯುತ್ತಿದೆ.
ಚಿತ್ರಕಲಾ ಪರಿಷತ್ತಿನಲ್ಲಿ ಏರ್ಪಡಿಸಿರುವ ಈ ಪ್ರದರ್ಶನದಲ್ಲಿ ಪತ್ರಕರ್ತ ಪಿ. ಶ್ರೀಧರ್ ನಾಯಕ್ ತಮ್ಮ ಛಾಯಾಗ್ರಹಣದ ನೆರಳು ಬೆಳಕಿನಾಟದಲ್ಲಿ ಛಾಯಾಚಿತ್ರಕ್ಕೆ ಸಹಜ ಸೊಬಗು ನೀಡುವ ಮೂಲಕ ತಮ್ಮ ಕೈಚಳಕ ತೋರಿಸಿದ್ದಾರೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ವ್ಯಕ್ತಿಯು ಬದುಕಿನ ಹಲವು ಮುಖಗಳನ್ನು ಬಿಂಬಿಸಿದರೆ, ಹಿಂಡಿನಲ್ಲಿರುವ ಸಾಂಬಾರ್‍ನ ನೋಟ, ಗಿಳಿಯೊಂದರ ಛಾಯಾಚಿತ್ರ ಸಹಜ ಚೆಲುವಿಗೆ
ಇಂಬು ನೀಡುವುದರೊಂದಿಗೆ ಅದರ ಭಾವವನ್ನೂ ಸೆರೆ ಹಿಡಿದಿದೆ. ಇದೇ ಪ್ರದರ್ಶನದಲ್ಲಿ ಸುನಿಲ್ ಮಿಶ್ರಾ ಅವರು ತಮ್ಮ ಕಲಾಕೃತಿಗಳಲ್ಲಿ ಮಹಿಳೆಯರ ವಿರುದ್ಧ ದೌರ್ಜನ್ಯ, ಆಧುನಿಕ ಜೀವನದ ತಲ್ಲಣ ಹಾಗೂ ಕುಟುಂಬ ಪ್ರೇಮ ಬಿಂಬಿಸುವ ಚಿತ್ರಗಳಿಗೆ ದನಿಯಾಗಿದ್ದಾರೆ.
ಈ ವರ್ಣಚಿತ್ರಗಳಿಗೆ ಎಂಬೋಸಿಂಗ್ ತಂತ್ರ ಬಳಸಿದ್ದಾರೆ. ಮಿಶ್ರಾ ಅವರು ಟೆರ್ರಾಕೋಟಾ, ಮರ, ಗ್ರಾನೈಟ್‍ಗಳ ಮೇಲೂ ಕಲೆಯನ್ನು ಬಿಂಬಿಸುವಲ್ಲಿ ಯಶಸ್ಸು ಕಂಡವರು. ಪ್ರದರ್ಶನ ಇಂದು ಕೊನೆಯಾಗಲಿದ್ದು ಬೆಳಗ್ಗೆ 10ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


