

ಬೆಂಗಳೂರು: ಯಲಹಂಕದ ವಿವಿಧ ಸಂಘ ಸಂಸ್ಥೆಗಳ ಒಕ್ಕೂಟವು ಲೌಡ್‍ಶೌಟ್ ಎಂಬ ವಿನೂತನ ಅಭಿಯಾನ ಆರಂಭಿಸಿದ್ದು, ಈ ಬಾರಿಯ ಬಿಬಿಎಂಪಿ ಚುನಾವಣೆಗೆ ಹಣ, ಜಾತಿ, ಪಕ್ಷ ಬಲವಿಲ್ಲದ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಇದಕ್ಕಾಗಿ ಪ್ರಾಮಾಣಿಕ ಅಭ್ಯರ್ಥಿಗಳಿಗಾಗಿ ಕರೆ ನೀಡಿದೆ.
ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ವಿ. ವಿಶ್ವನಾಥ್ ಮಾಹಿತಿ ನೀಡಿದರು. ಚುನಾವಣೆಗಳಲ್ಲಿ ಜಾತಿ, ಹಣ ಬಲವೇ ಪ್ರಧಾನವಾಗುತ್ತಿದ್ದು, ಇವುಗಳ ಹೊರತಾಗಿ ಸಾಮಾನ್ಯ ಜನರಿಗೂ ಅವಕಾಶ ದೊರಕಿಸುವ ಉದ್ದೇಶ ಇಲ್ಲಿದೆ ಎಂದರು.50 ಸಂಘಟನೆಗಳ ಸಹಕಾರದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಜು. 5 ರಂದು
ಯಲಹಂಕದ 1-4ನೇ ವಾರ್ಡ್‍ಗಳಲ್ಲಿ ಪ್ರಾಯೋಗಿಕ ಅಭಿಯಾನ ನಡೆಸಲಾಗುತ್ತದೆ.
ಅಭ್ಯರ್ಥಿಗೆ ಆಮಿಷಗಳಿಗೆ ಬಲಿಯಾಗದಿರುವ, ಗೆದ್ದ ನಂತರ ವಾರ್ಷಿಕ ಆಸ್ತಿ ಪ್ರಮಾಣ ಘೋಷಿಸುವ, ಸಮಾಜಮುಖಿ, ಪ್ರಾಮಾಣಿಕವಾಗಿರುವ ಷರತ್ತುಗಳನ್ನು ವಿಧಿಸಲಾಗಿದೆ. ಆಸಕ್ತರು ಕಚೇರಿಗೆ ಸಂಪರ್ಕಿ ಸಬಹುದು ಎಂದು ಹೇಳಿದರು. ಕಾರ್ಯದರ್ಶಿ ಸಿ.ಮುರುಳೀಧರ್,ಸಂಚಾಲಕ ಬೆಟ್ಟಿಕೋಟೆ ಎಂ. ವೆಂಕಟೇಶ್, ಉಪಾಧ್ಯಕ್ಷ ಅಟ್ಟೂರು ಶ್ರೀನಿವಾಸ್, ಶಶಿಕಾಂತ್, ರಷೀಕ್ ಪಾಷಾ, ಬಿ.ಕೆ. ಸಂದೀಪ್, ಮಾಲತೇಶ್ ಜೋಯಿಸ್, ಮುಖೇಶ್ ಉಪಸ್ಥಿತರಿದ್ದರು.