

ಬೆಂಗಳೂರು: ರೈತರ ಸರಣಿ ಆತ್ಮಹತ್ಯೆ ಮುಖ್ಯಮಂತ್ರಿಗಳ ತವರು ಜಿಲ್ಲೆಗೂ ವ್ಯಾಪಿಸಿದೆ. ಕೆ.ಆರ್.ನಗರ ತಾಲೂಕು ಅಡಗೂರು ಗ್ರಾಮದಲ್ಲಿ ಭಾನುವಾರ ರೈತರೊಬ್ಬರು ನೇಣು ಹಾಕಿಕೊಂಡಿದ್ದು, ರಾಜ್ಯದ ವಿವಿಧೆಡೆ ಒಟ್ಟು ನಾಲ್ವರು ಕೃಷಿಕರು ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಶ್ರೀನಿವಾಸ್ (55) ಗಳಿಗೆಕೆರೆ ಎಸ್‍ಎಸ್‍ಎನ್ ಬ್ಯಾಂಕ್‍ನಲ್ಲಿ ರು. ಮ 1.5 ಲಕ್ಷ, ಗಿರವಿ ಅಂಗಡಿಯಲ್ಲಿ ರು. 2 ಲಕ್ಷ ಕೈಸಾಲ ಸೇರಿದಂತೆ ಒಟ್ಟು ರು. 5 ಲಕ್ಷ ಸಾಲಮಾಡಿದ್ದರು. 2 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ಕಬ್ಬನ್ನು ಕೆ.ಆರ್.ಪೇಟೆ ತಾಲೂಕಿನ ಐಸಿಎಲ್ ಕಾರ್ಖಾನೆಗೆ 130 ಟನ್ ಸರಬ ರಾಜು ಮಾಡಿದ್ದರು.
ಕಾರ್ಖಾನೆಯಿಂದ ಈವರೆಗೆ ಹಣ ಬಾರದ ಹಿನ್ನೆಲೆಯಲ್ಲಿ ಸಾಲಗಾರ ಒತ್ತಡಕ್ಕೆ ಸಿಲುಕಿ ಭಯದಿಂದ ನೇಣುಹಾಕಿಕೊಂಡಿದ್ದಾರೆಂದು ಕುಟುಂಬದ ವರು ತಿಳಿಸಿದ್ದಾ ಅಡಗೂರು ಮಾಜಿ ಸಂಸದ ಎಚ್. ವಿಶ್ವನಾಥ್ ಅವರ ಸ್ವಗ್ರಾಮ. ಸಿಎಂ ಸಿದ್ಧರಾಮಯ್ಯ ಅವರ ಸ್ವಂತ ಜಿಲ್ಲೆಯಾದ ಮೈಸೂರಲ್ಲಿ ಈ ವಾರದಲ್ಲಿ ರೈತರ ಆತ್ಮಹತ್ಯೆಯ 2ನೇ ಪ್ರಕರಣ. ಪಾಂಡವಪುರ ತಾಲೂಕಿನ ಆಗನ ಹಳ್ಳಿಯ ರೈತ ಬಸವರಾಜು (55) ಮನೆಯ ತೊಲೆಗೆ ನೇಣು ಬಿಗಿದು ಕೊಂಡಿದ್ದಾರೆ. ಹೈನುಗಾರಿಕೆಯಿಂದ ಅವರು ಜೀವನ ನಡೆಸುತ್ತಿದ್ದರು. 15 ದಿನ ಹಿಂದೆ ನಾಲ್ಕೂ ಹಸುಗಳು ಮೃತಪಟ್ಟಿದ್ದವು. ತಾಲೂಕಿನ ಹರವು ಗ್ರಾಮದ ರೈತ ಶಿವಕುಮಾರ್ (50) ಸಾಲ ಬಾಧೆ ತಾಳದೆ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ದ್ದಾರೆ. ಇವರಿಗೆ 15 ಗುಂಟೆ ಜಮೀನು ಇದೆ. ಗುತ್ತಿಗೆ ಆಧಾರದಲ್ಲಿ ಬೇರೆ ಯವರ 6 ಎಕರೆ ಜಮೀನಿಲ್ಲಿ ಬತ್ತ, ಕಬ್ಬು ಬೆಳೆದಿದ್ದರು. ಚನ್ನರಾಯಪಟ್ಟಣ ತಾಲೂಕು ಶ್ರವಣಬೆಳಗೊಳ ಹೋಬಳಿ ಅರುವನಹಳ್ಳಿಯಲ್ಲಿ ವಿಷ ಸೇವಿಸಿದ್ದ ರೈತ ಪುಟ್ಟಸ್ವಾಮಿ(60) ಶನಿವಾರ ಸಂಜೆ ಮೃತಪಟ್ಟಿದ್ದಾರೆ. ಪುಟ್ಟಸ್ವಾಮಿತನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ಕೈಸಾಲ ಮಾಡಿಕೊಂಡಿದ್ದು, ಸಾಲತೀರಿಸಲಾಗಿದೆ ಸಾವಿಗೆ ಶರಣಾಗಿ ದ್ದಾರೆ. ಗೋಕಾಕ ತಾಲೂಕು ಗಣೇ ಶವಾಡಿ ಗ್ರಾಮದ ಕಬ್ಬು ಬೆಳೆಗಾರ ಬಸಪ್ಪಾ ಸಂಪಗಾಂವಿ (35) ವಿಷ ಸೇವಿಸಿ ಸಾವನ್ನಪ್ಪಿದ್ದಾರೆ.