

ಬೆಂಗಳೂರು: ಕಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಆಡಳಿತ ಮಂಡಳಿ ಮೂವರು ನರ್ಸ್ ಗಳನ್ನು ಅಮಾನತುಗೊಳಿಸಿ, 30 ಮಂದಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಜುಲೈ 28ರಂದು 24ಗಂಟೆಗಳ ಅವಧಿಯಲ್ಲಿ ನಾಲ್ಕು ನವಜಾತ ಶಿಶುಗಳು ನಿಗೂಢವಾಗಿ ಸಾವನ್ನಪ್ಪಿದ್ದವು. ಬೆಳಿಗ್ಗೆ 9.30ಕ್ಕೆ ಒಂದು ಮಗ ಸಾವನ್ನಪ್ಪಿತ್ತು. ಈ ಸಮಯದಲ್ಲಿ ನರ್ಸ್ ಗಳು ಆಸ್ಪತ್ರೆ ಹಾಗೂ ಹಿರಿಯ ವೈದ್ಯರಿಗೆ ಮಾಹಿತಿ ನೀಡಿರಲಿಲ್ಲ. ಅಲ್ಲದೇ ಎನ್ ಐಸಿಯುನಲ್ಲಿ ಪೋಷಕರು ಗಲಾಟೆ ನಡೆಸಿದ್ದರು.
ಈ ಹಿನ್ನಲೆಯಲ್ಲಿ ಎನ್ ಐಸಿಯುನ ಫ್ಲೋರ್ ಇನ್ ಚಾರ್ಜ್, ವಾರ್ಡ್ ಇನ್ ಚಾರ್ಜ್ ಸೇರಿದಂತೆ ಮೂವರು ನರ್ಸ್ ಗಳನ್ನು ಅಮಾನತುಗೊಳಿಸಿದ್ದಾರೆ. ಇನ್ನು ಸರ್ಕಾರ ಈ ಪ್ರರಕಣದ ತನಿಖೆಗೆ ವಿಶೇಷ ತಂಡ ರಚಿಸಿದ್ದು, ಈ ತನಿಖಾ ವರದಿ ಬರುವ ಮುನ್ನವೇ ಕಿಮ್ಸ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿದೆ.