ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ

ಸರ್ಕಾರ ರೈತರ ಮನೆಬಾಗಿಲಿಗೆ ಹೋಗುತ್ತಿದ್ದರೂ, ರೈತ ಮಾತ್ರ ಸಾವಿನಕದ ತಟ್ಟುವುದು ನಿಲ್ಲುತ್ತಿಲ್ಲ. ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಮಾಡಿಕೊಂಡಿದ್ದು, ಬೆಳಗಾವಿಯಲ್ಲಿ ಒಬ್ಬರು ಸಾವಿಗೆ ಯತ್ನಿಸುದ್ದಾರೆ...
ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
ಸಾಲಬಾಧೆಗೆ ಇಬ್ಬರು ರೈತರ ಆತ್ಮಹತ್ಯೆ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಸರ್ಕಾರ ರೈತರ ಮನೆಬಾಗಿಲಿಗೆ ಹೋಗುತ್ತಿದ್ದರೂ, ರೈತ ಮಾತ್ರ ಸಾವಿನಕದ ತಟ್ಟುವುದು ನಿಲ್ಲುತ್ತಿಲ್ಲ. ಹಾವೇರಿ, ಧಾರವಾಡ ಜಿಲ್ಲೆಯಲ್ಲಿ ಇಬ್ಬರು ರೈತರು ಆತ್ಮಹತ್ಯೆಮಾಡಿಕೊಂಡಿದ್ದು, ಬೆಳಗಾವಿಯಲ್ಲಿ ಒಬ್ಬರು ಸಾವಿಗೆ ಯತ್ನಿಸುದ್ದಾರೆ.

ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ಗ್ರಾಮದ ರೈತ ರಾಮಪ್ಪ ಲೋಕಪ್ಪ ಲಮಾಣಿ (55) ವಿಷ ಸೇವಿಸಿದ್ದಾರೆ. ಅವರು ಬ್ಯಾಂಕಿನಲ್ಲಿ ರು.2 ಲಕ್ಷ ಹಾಗೂ ಕೈಸಾಲವಾಗಿ ರು.1 ಲಕ್ಷ ಸಾಲ ಮಾಡಿದ್ದರು. ಅಲ್ಲದೇ ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೂಕೋಸು ಬೆಳೆಯ ಬೆಲೆ ಕುಸಿದಿತ್ತು. ಕೆಜಿಗೆ ರು.1ರಂತೆ ಮಾರಾಟವಾಗಿತ್ತು. ಇದರಿಂದ ಬೇಸತ್ತು ಶನಿವಾರ ರಾತ್ರಿಯೇ ವಿಷ ಸೇವಿಸಿದ್ದರು. ಕಲಘಟಗಿ ತಾಲೂಕಿನ ತಾವರಗೇರಿ ಗ್ರಾಮದ ರೈತ ನಿಂಗಪ್ಪ ದ್ಯಾಮಣ್ಣ ಗುಡಿಹಾಳ (22) ತಮ್ಮ ಹೊಲದಲ್ಲಿಯೇ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳೆ ಅಭಾವದಿಂದ ತನ್ನ 6 ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಹತ್ತಿ, ಗೋವಿನಜೋಳ ಕೈ ಕೊಡುವ ಭಯದಿಂದಾಗಿ ಈ ನಿರ್ಧಾರಕ್ಕೆ ಬಂದಿದ್ದಾರೆ. ವಿಷ ಸೇವಿಸಿರುವ ಕುರಿತು ಸ್ನೇಹಿತನಿಗೆ ಮೊಬೈಲ್ ಮೂಲಕ ಕರೆ ಮಾಡಿ ತಿಳಿಸಿದ್ದಾರೆ.

ಕೂಡಲೇ ನಿಂಗಪ್ಪ ಅವರ ಕುಟುಂಬದೊಂದಿಗೆ ಹೊಲಕ್ಕೆ ಬಂದ ಅವರ ಸ್ನೇಹಿತ ತಾಲೂಕು ಆಸ್ಪತ್ರೆಗೆ ಸೇರಿಸಿದರು. ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿದ ಹುಬ್ಬಳ್ಳಿಯ ಕಿಮ್ಸ್ ಗೆ ಸೇರಿಸಲಾಗಿತ್ತು. ಆದರೆ, ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ತಾವರಗೇರಿ ಬಳಿಯ ಬಮ್ಮಿಗಟ್ಟಿ ಗ್ರಾಮದ ಕೆವಿಜಿ ಬ್ಯಾಂಕಿನಲ್ಲಿ ರು.1.50 ಲಕ್ಷ ಬೆಳೆಸಾಲ, ಗ್ರಾಮದ ವಿಎಸ್ಎಸ್ ಬ್ಯಾಂಕಿನಲ್ಲಿ ರು.50 ಸಾವಿರ ಹಾಗೂ ಟ್ರ್ಯಾಕ್ಟರ್ ಸಾಲವಿತ್ತು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಕ್ಕನಾಯಕನಕೊಪ್ಪ ಗ್ರಾಮದ ಬಸವರಾಜ ಮಾವಿನಕಟ್ಟಿ (30) ಶನಿವಾರ ಮಧ್ಯಾಹ್ನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ಇವರನ್ನು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಗೆ 4 ಎಕರೆ ಜಮೀನಿದ್ದು, 2 ವರ್ಷಗಳ ಹಿಂದೆ ಬೈಲಹೊಂಗಲ ತಾಲೂಕಿನ ಸಂಪಗಾಂವಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೇ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com