ಚುನಾವಣೆ ಚಟುವಟಿಕೆ ಶುರು

ಬಿಬಿಎಂಪಿ ಚುನಾವಣೆ ನಡೆಯುವುದು ಖಚಿತವಾಗುತ್ತಿ ದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಆ.3ರಂದು ಅಧಿಸೂಚನೆ ಹೊರಡಲಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಪ್ರಣಾಳಿಕೆ ಸಿದಟಛಿತೆ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on: 

ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಯುವುದು ಖಚಿತವಾಗುತ್ತಿ ದ್ದಂತೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಆ.3ರಂದು ಅಧಿಸೂಚನೆ ಹೊರಡಲಿರುವುದರಿಂದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ, ಪ್ರಣಾಳಿಕೆ ಸಿದಟಛಿತೆ ಹಾಗೂ ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಸಿದ್ಧತೆ ನಡೆಸಲಾಗಿದೆ.

ನಗರದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಹಾಗೂ ಪ್ರಸ್ತುತದ ಸಮಸ್ಯೆಗಳನ್ನು ಗಮನದಲ್ಲಿರಿಸಿ ಮೂರು ಪಕ್ಷಗಳು ಪ್ರಣಾಳಿಕೆ ಸಿದಟಛಿಪಡಿಸುತ್ತಿವೆ. ಪ್ರತಿಪಕ್ಷಗಳ ಹುಳುಕು ಹಾಗೂ ತಮ ಪಕ್ಷದ ಸಕಾರಾತ್ಮಕ ಅಂಶಗಳನ್ನು ಪ್ರಮುಖವಾಗಿ ಎತ್ತಿ ತೋರಿಸಿ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್ ಹಾಗೂ ಜೆಡಿಎಸ್, ಕಳೆದ 5 ವರ್ಷಗಳ ಬಿಜೆಪಿಯ ಆಡಳಿತದಲ್ಲಿ ನಡೆದ ಅಕ್ರಮ, ಅವಾಸ್ತವ ಬಜೆಟ್‍ಗಳು, ಸಾಲದ ಹೊರೆ, ಕಸದಿಂದ ಜಾಗತಿಕ ಮಟ್ಟದಲ್ಲಿ ನಾಚಿಕೆಗೀಡಾಗಿರುವುದು ಸೇರಿದಂತೆ ಹಲವು ಅಂಶಗಳನ್ನು ಪಟ್ಟಿ ಮಾಡಿವೆ. ಇವೇ
ಅಂಶಗಳನ್ನು ಜನರ ಮುಂದಿಟ್ಟು ಮತ ಕೇಳಲು ಪಕ್ಷಗಳು ತಯಾರಾಗಿವೆ. ಇತ್ತ ಬಿಜೆಪಿ ಮುಖ್ಯವಾಗಿ ರಾಜ್ಯ ಸರ್ಕಾರದ ವೈಫಲ್ಯಗಳು ಹಾಗೂ ಕೇಂದ್ರ ಸರ್ಕಾರದ ಹೊಸ ಯೋಜನೆಗಳನ್ನು ಮುಂದಿಟ್ಟುಕೊಂಡು ಮತ ಕೇಳಲು ಸಿದಟಛಿವಾಗಿದೆ.

ರಾಜ್ಯ ಸರ್ಕಾರದಿಂದಾಗಿಯೇ ಬಿಬಿಎಂಪಿ ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದು, ಕಳೆದ 5 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯ ಬಿಜೆಪಿ ಆಡಳಿತಕ್ಕೆ ಸಹಕಾರ ನೀಡದಿರುವುದನ್ನೇ ಮುಖ್ಯವಾಗಿ ಜನರ ಮುಂದಿಡಲಿದೆ. ಇದಲ್ಲದೆ ಜೆಡಿಎಸ್ ಪಕ್ಷದಿಂದ ಕಳೆದ ಬಿಬಿಎಂಪಿ ಆಡಳಿತ ಹಾಗೂ ರಾಜ್ಯಮಟ್ಟದಲ್ಲಿ ಯಾವುದೇ ಸಾಧನೆಯಾಗಿಲ್ಲ ಎಂದು
ತೋರಿಸಹೊರಟಿದೆ. ಪ್ರತಿಪಕ್ಷಗಳ ಕುರಿತು ಜನರಲ್ಲಿ ನಕಾರಾತ್ಮಕ ಭಾವನೆ ಮೂಡಿಸುವುದರ ಜೊತೆಗೆ ಪ್ರಣಾಳಿಕೆ ಹಾಗೂ ಅಭ್ಯರ್ಥಿಗಳ ಆಯ್ಕೆಗೂ ಆದ್ಯತೆ ನೀಡಲಾಗಿದೆ. ಪ್ರಣಾಳಿಕೆಗೆ ಸಿದಟಛಿತೆ: ಬಿಜೆಪಿಯಲ್ಲಿ ಈಗಾಗಲೇ ಪ್ರಣಾಳಿಕೆಗೆ ಸಿದ್ಧತೆ ನಡೆದಿದೆ. ರಸ್ತೆಗಳ ಅಭಿವೃದ್ಧಿ, ಕೆರೆಗಳ ಪುನರುಜ್ಜೀವನ, ಉದ್ಯಾನಗಳ ನಿರ್ವಹಣೆ ಹಾಗೂ ಅಭಿವೃದ್ಧಿ, ಓಎಫ್ ಸಿ ಹಾಗೂ ಜಾಹೀರಾತುಗಳಿಗೆ ಕಡಿವಾಣ ಹೇರಿ ಆರ್ಥಿಕ ಲಾಭ ಬರುವಂತೆ ಮಾಡುವ ವಿಧಾನ, ಮಾರುಕಟ್ಟೆಗಳ ಅಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲು ನಿರ್ಧರಿಸಿದೆ. ಕಾಂಗ್ರೆಸ್‍ನಲ್ಲಿ ಕಸ ವಿಲೇವಾರಿ ಸಮಸ್ಯೆ ಹಾಗೂ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಗ್ರಾಮಗಳ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಹೆಚ್ಚಿನ ಅವಕಾಶ ನೀಡಲು ಚರ್ಚೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಈಗಾಗಲೇ ಚುನಾವಣಾ ರಚನಾ ಸಮಿತಿ ರೂಪಿಸಿದ್ದು, ನಗರದ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆ ತಯಾರಿಸಲಾಗುತ್ತಿದೆ.

ಅಭ್ಯರ್ಥಿಗಳ ಆಯ್ಕೆ: ಅಭ್ಯರ್ಥಿಗಳ ಆಯ್ಕೆಯನ್ನು ಪ್ರತಿ ವಾರ್ಡ್‍ಗಳಲ್ಲಿ ಮುಖಂಡರೇ ಸೂಚಿಸುತ್ತಿದ್ದು, ಪಕ್ಷದಲ್ಲಿ ಅಂತಿಮವಾಗಿ ನಿರ್ಧರಿಸಲಾಗುತ್ತದೆ. ವಾರ್ಡ್‍ಗಳಲ್ಲಿ ಮಾಜಿ ಕಾರ್ಪೋರೇಟರ್‍ಗಳು ಹಾಗೂ ಕಾರ್ಯಕರ್ತರು 2 ಅಥವಾ ಮೂರು ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲು ಮೂರು ಪಕ್ಷಗಳು ಸೂಚಿಸಿವೆ. ಬಿಜೆಪಿ ವತಿಯಿಂದ ಪ್ರತಿ ವಾರ್ಡ್‍ಗಳಲ್ಲಿ ಸಮಿತಿ ರಚಿಸಿದ್ದು, ಈ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮಟ್ಟದಲ್ಲಿ ಕೆಲಸ ಮಾಡಿರುವ ಅಭ್ಯರ್ಥಿಗಳನ್ನು ಮಾತ್ರ ಗುರುತಿಸುತ್ತಿದ್ದರೆ, ಬಿಜೆಪಿಯಲ್ಲಿ ಯುವ ಹಾಗೂ ಉನ್ನತ ಶಿಕ್ಷಣ ಪಡೆದ ಪದವೀಧರ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುತ್ತಿದೆ. ಪಕ್ಷಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗುತ್ತಿದೆ. ಕಳೆದ ಬಾರಿ ಚುನಾವಣೆ ಘೋಷಣೆಯಾದಾಗಲೇ ಕಾಂಗ್ರೆಸ್‍ನಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗಿತ್ತು. ಕೆಲವು ವಾರ್ಡ್‍ಗಳಲ್ಲಿ ಟಿಕೆಟ್ ಸಿಗುವುದು ಖಾತರಿ ಯಾದ ಹೊಸ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ಆದರೆ, ಚುನಾವಣೆ ಮತ್ತೆ ಮುಂದೂಡಲ್ಪಟ್ಟಿದ್ದರಿಂದ ಸದ್ಯಕ್ಕೆ ಪ್ರಚಾರಕ್ಕೆ ಬಿಡುವು ದೊರೆತಿತ್ತು.

ಈಗ ಚುನಾವಣೆ ಖಾತರಿಯಾಗಿರುವುದರಿಂದ ಪ್ರಚಾರ ಕಾರ್ಯ ಆರಂಭವಾಗಿದೆ. ಮೂರೂ ಪಕ್ಷಗಳ ನಗರಾಧ್ಯಕ್ಷರು ಹಾಗೂ ಮಾಜಿ ಕಾರ್ಪೊರೇಟ್‍ಗಳು ಹಿರಿಯ ಮುಖಂಡರ, ತಮ್ಮ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳ ಹಾಗೂ ಶಾಸಕರಿಗೆ ಮನವಿ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರಗಳನ್ನು ಆರಿಸಿಕೊಂಡು ಪ್ರಚಾರಕ್ಕೆ ನೆರವಾಗುವಂತೆ ನಗರ ಮುಖಂಡರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com