ರೌಡಿ ಬ್ರಿಗೇಡ್ ಅಜಂ ಸಾವು

ಕಳೆದ ಲೋಕಸಭಾ ಚುನಾವಣೆಯಲ್ಲಿ ಗೃಹ ಹಾಗೂ ವಾರ್ತಾ ಸಚಿವರ ಜತೆ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿದ್ದ ಕುಖ್ಯಾತ ರೌಡಿ ಬ್ರಿಗೇಡ್ ಅಜಂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ...
ರೌಡಿ ಬ್ರಿಗೇಡ್ ಅಜಂ ಸಾವು (ಸಾಂದರ್ಭಿಕ ಚಿತ್ರ)
ರೌಡಿ ಬ್ರಿಗೇಡ್ ಅಜಂ ಸಾವು (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಗೃಹ ಹಾಗೂ ವಾರ್ತಾ ಸಚಿವರ ಜತೆ ಕಾಣಿಸಿಕೊಂಡು ವಿವಾದಕ್ಕೆ ಕಾರಣವಾಗಿದ್ದ ಕುಖ್ಯಾತ ರೌಡಿ ಬ್ರಿಗೇಡ್ ಅಜಂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಶುಕ್ರವಾರ ಸಂಜೆ ಹೃದಯಾಘಾತಕ್ಕೆ ಒಳಗಾದ ತಕ್ಷಣ ಆತನನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ. ಪುಲಿಕೇಶಿ ನಗರದ ನಿವಾಸಿಯಾಗಿದ್ದ ಅಜಂ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರವಾಗಿ ಗೃಹ ಸಚಿವ ಕೆ.ಜೆ.ಜಾರ್ಜ್ ಹಾಗೂ ವಾರ್ತಾ ಸಚಿವ ರೋಷನ್ ಬೇಗ್ ಅವರು ಶಿವಾಜಿನಗರದಲ್ಲಿ ಪ್ರಚಾರ ನಡೆಸುವಾಗ ಅವರ ವಾಹನದಲ್ಲಿ ಕಾಣಿಸಿಕೊಂಡಿದ್ದ. ಆ ಘಟನೆ ತೀವ್ರ ವಿವಾದ ಪಡೆದುಕೊಂಡು ಬಿಜೆಪಿಯು ಈ ಸಚಿವರಿಬ್ಬರ ರಾಜಿನಾಮೆಗೂ ಆಗ್ರಹಿಸಿತ್ತು. ಬಳಿಕ ಆತನನ್ನು ಪೊಲೀಸರು ಬಂಧಿಸಿದ್ದರು.

ಕೊಲೆ, ಕೊಲೆ ಯತ್ನ, ಸುಲಿಗೆ, ಬೆದರಿಕೆ, ಒತ್ತೆ ಹಣಕ್ಕೆ ಬೇಡಿಕೆ, ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದು ಸೇರಿದಂತೆ 15ಕ್ಕೂ ಹೆಚ್ಚು ಪ್ರಕರಣಗಳು ಆತನ ವಿರುದಟಛಿ ದಾಖಲಾಗಿದ್ದವು.
ಪುಲಿಕೇಶಿ ನಗರ ಠಾಣೆಯಲ್ಲಿ ಈತನ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು. ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ ಈತನಿಗೆ ಪೂರ್ವ ವಿಭಾಗದ ಡಿಸಿಪಿ ರೌಡಿಗಳ ಪೆರೇಡ್ ವೇಳೆ ರೌಡಿ ಚಟುವಟಿಕೆಯಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು. 2012 ರಲ್ಲಿ ಶಿವಾಜಿನಗರ ಪೊಲೀಸರು ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿದ್ದರಿಂದ 12 ತಿಂಗಳ ಕಾಲ
ಪರಪ್ಪನ ಅಗ್ರಹಾರ ಜೈಲು ಅನುಭವಿಸಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com