

ಬೆಂಗಳೂರು: ಬಿಬಿಎಂಪಿ ಚುನಾವಣೆ ಘೋಷಣೆಯಾಗುವುದು ಖಾತರಿಯಾಗುತ್ತಿದ್ದಂತೆ, ಟಿಕೆಟ್‍ಗಾಗಿ ಮಾಜಿ ಕಾರ್ಪೊರೇಟರ್‍ಗಳು ಹಾಗೂ ಹೊಸದಾಗಿ ಕಣಕ್ಕಿಳಿಯಲು ಬಯಸಿರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ಹೆಚ್ಚಿದೆ.
ರಾಜ್ಯ ಸರ್ಕಾರ ಏ.13 ರಂದು ಪ್ರಕಟಿಸಿದ್ದ ಮೀಸಲು ಪಟ್ಟಿಯನ್ನೇ ಆಧರಿಸಿ ಚುನಾವಣೆ ನಡೆಯುವುದಾದರೆ, ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಮೊದಲ ಆದ್ಯತೆ ಸಿಗುವ
ಅವಕಾಶವೂ ಇದೆ. ಈ ಮೀಸಲು ಪಟ್ಟಿ ಪ್ರಕಾರ 74 ವಾರ್ಡ್ ಗಳಲ್ಲಿ ಮಾಜಿ ಕಾರ್ಪೊರೇಟರ್‍ಗಳು ಸ್ಪರ್ಧಿಸಲು ಅವಕಾಶವೇ ಇಲ್ಲ. ಮಹಿಳಾ ಮೀಸಲು ಸೇರಿದಂತೆ ವಿವಿಧ ವರ್ಗಗಳಡಿ ಮೀಸಲು ನೀಡಿದ ಸರ್ಕಾರ, ಮಾಜಿ ಕಾರ್ಪೊರೇಟರ್ ಹಾಗೂ ಪ್ರಭಾವಶಾಲಿ ನಾಯಕರು ತಮ್ಮ ವಾರ್ಡ್‍ಗಳಲ್ಲಿ ಸ್ಪರ್ಧಿಸದಂತೆ ತಂತ್ರ ಹೂಡಿತ್ತು. ಮಾಜಿ ಕಾರ್ಪೊರೇಟರ್‍ಗಳು ಪಕ್ಕದ ವಾರ್ಡ್‍ಗಳಲ್ಲಿ ಸ್ಪರ್ಧೆಗೆ ನಿಲ್ಲಲು ತಯಾರಿ ನಡೆಸಿದ್ದಾರೆ.
ಸಿದ್ಧತೆಯೂ ಜೋರು: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪ್ರಚಾರದ ಸಿದಟಛಿತೆ ಆರಂಭವಾಗಿದ್ದು, ಮಾಜಿ ಕಾರ್ಪೊರೇಟರ್‍ಗಳು ವೈಯಕ್ತಿಕವಾಗಿಯೂ ಸಿದ್ಧತೆ ನಡೆಸಿದ್ದಾರೆ.
ದೇವಾಲಯಗಳು, ಶಾಲೆಗಳು ಸೇರಿದಂತೆ ಸಾರ್ವಜನಿಕರ ಸಂಪರ್ಕ ಹೆಚ್ಚಿರುವ ಸ್ಥಳಗಳಲ್ಲಿ ಮಾಜಿ ಕಾರ್ಪೊರೇಟರ್‍ಗಳ ಸಿದಟಛಿತೆ ಭರದಿಂದ ಸಾಗಿದೆ. ಸ್ಥಳೀಯ ಜಾತ್ರೆ, ಹಬ್ಬಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ, ವಸ್ತ್ರ ದಾನ ಕಾರ್ಯಕ್ರಮ, ಕ್ರಿಕೆಟ್, ಕಬಡ್ಡಿ ಪಂದ್ಯಾವಳಿ ಸೇರಿದಂತೆ ಸ್ಥಳೀಯವಾಗಿ ನಡೆಯುವ ವಿವಿಧ ಕಾರ್ಯಕ್ರಮಗಳು ಮಾಜಿಗಳಿಗೆ ಸಾಕಷ್ಟು ಪ್ರಚಾರ ನೀಡುತ್ತಿವೆ. ಸರ್ಕಾರಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆಗಳಲ್ಲಿ ಮುಂದೆ ನಿಂತು ಕಾರ್ಯಕ್ರಮ ನಡೆಸುತ್ತಿದ್ದಾರೆ. ಹೀಗಾಗಿ ಬಿಬಿಎಂಪಿ ವಿಸರ್ಜನೆ ಬಳಿಕ ನಡೆದ ಎಲ್ಲ
ಸ್ಥಳೀಯ ಕಾರ್ಯಕ್ರಮಗಳು ಈ ಬಾರಿಯ ಚುನಾವಣೆಯ ಮೇಲೆ ಪರಿಣಾಮ ಬೀರಲಿವೆ.