ದೇಶದಲ್ಲಿ ಪರದೇಸಿ ಸಂಸ್ಕೃತಿಯ ತಾಂಡವ ವೆಂಕಟೇಶಮೂರ್ತಿ ವಿಷಾದ

ನಮ್ಮಲ್ಲಿ ದೇಸಿ ಸಂಸ್ಕೃತಿ ಎಂಬುದು ಇಂದು ಮಾಯವಾಗಿದೆ. ಪರದೇಸಿ ಸಂಸ್ಕೃತಿ ನಮ್ಮಲ್ಲಿ ತಾಂಡವವಾಡುತ್ತಿದೆ. ಅದನ್ನು ತೊಡೆದುಹಾಕುವಲ್ಲಿ ಬುದ್ಧಿಜೀವಿಗಳೂ ವಿಫಲ ರಾಗಿದ್ದು, ಪೋಷಿಸುವ ಕೆಲಸ ನಡೆ ಯುತ್ತಿದೆ ಎಂದು ಸಾಹಿತಿ ಡಾ.ಎಚ್. ಎಸ್.ವೆಂಕಟೇಶಮೂರ್ತಿ ವಿಷಾದಿಸಿದರು...
ಸಾಹಿತಿ ಡಾ.ಹೆಚ್.ಎಸ್.ವೆಂಕಟಮೂರ್ತಿ ಅವರು ಭಾರತ-ಭಾರತಿ ಪುಸ್ತಕ ಸಂಪದ 2ನೇ ಸರಣಿಯ ಐವತ್ತು ಪುಸ್ತಕಗಳನ್ನು ಲೋಕಾಪ್ರಣೆ ಮಾಡಿದರು.
ಸಾಹಿತಿ ಡಾ.ಹೆಚ್.ಎಸ್.ವೆಂಕಟಮೂರ್ತಿ ಅವರು ಭಾರತ-ಭಾರತಿ ಪುಸ್ತಕ ಸಂಪದ 2ನೇ ಸರಣಿಯ ಐವತ್ತು ಪುಸ್ತಕಗಳನ್ನು ಲೋಕಾಪ್ರಣೆ ಮಾಡಿದರು.
Updated on: 

ಬೆಂಗಳೂರು: ನಮ್ಮಲ್ಲಿ ದೇಸಿ ಸಂಸ್ಕೃತಿ ಎಂಬುದು ಇಂದು ಮಾಯವಾಗಿದೆ. ಪರದೇಸಿ ಸಂಸ್ಕೃತಿ ನಮ್ಮಲ್ಲಿ ತಾಂಡವವಾಡುತ್ತಿದೆ. ಅದನ್ನು ತೊಡೆದುಹಾಕುವಲ್ಲಿ ಬುದ್ಧಿಜೀವಿಗಳೂ ವಿಫಲ ರಾಗಿದ್ದು, ಪೋಷಿಸುವ ಕೆಲಸ ನಡೆ ಯುತ್ತಿದೆ ಎಂದು ಸಾಹಿತಿ ಡಾ.ಎಚ್. ಎಸ್.ವೆಂಕಟೇಶಮೂರ್ತಿ ವಿಷಾದಿಸಿದರು.

ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯ ಕ್ರಮದಲ್ಲಿ ಭಾರತ-ಭಾರತಿ ಪುಸ್ತಕ ಸಂಪದ-2ನೇ ಸರಣಿಯ 50 ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. 50ರ ದಶಕದ ನಂತರದ ನವ್ಯ ಸಾಹಿತ್ಯ ಗಮನಿಸಿದರೆ ಕಿಂಚಿತ್ತೂ ರಾಷ್ಟ್ರಭಕ್ತಿಯ ಸಾಹಿತ್ಯವಿಲ್ಲ. ಇನ್ನು ಕೆಲ ಸಾಹಿತಿಗಳು ಪಾಶ್ಚಾತ್ಯ ಸಂಸ್ಕೃತಿಯತ್ತ ವಾಲುತ್ತಿದ್ದು, ತಮ್ಮ ನಾಲ್ಕೈದು ಕೃತಿಗಳು ಪ್ರಕಟವಾದರೆ ಸಾಕು ಅವರು ಇಂಗ್ಲಿಷ್ ಸಾಹಿತ್ಯದತ್ತ ವಾಲುತ್ತಾರೆ ಎಂದು ವಿಷಾದಿಸಿದ ಅವರು, ಸಾಹಿತಿಗಳು ರಾಷ್ಟ್ರಭಕ್ತಿಯ ಸಾಹಿತ್ಯಕ್ಕೆ ಹಾಗೂ ವಿಸ್ತೃತವಾದ ಅಖಂಡ ಭಾರತ ಕಟ್ಟುವ ನಿಟ್ಟಿನ ಸಾಹಿತ್ಯಕ್ಕೆ ಒತ್ತುನೀಡಬೇಕು ಎಂದರು.

ಇಂದು ರಾಜಕಾರಣಿ, ಸಾಹಿತಿಗಳು, ಬುದ್ಧಿಜೀವಿಗಳು ಎನಿಸಿಕೊಂಡ ಕೆಲವರು ರಾಷ್ಟ್ರೀಯತೆ ಬಗ್ಗೆ ಮಾತನಾಡಲೂ ಹಿಂಜರಿಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಪಾದಕ ಎಸ್.ಆರ್. ರಾಮಸ್ವಾಮಿ, ಭಾರತ-ಭಾರತಿ ಪುಸ್ತಕ ಸಂಪದ-2ರ ಪ್ರಧಾನ ಸಂಪಾದಕ ಚಿರಂಜೀವಿ, ಕೆ.ಕೇಶವ ಭಟ್, ದಿನೇಶ್ ಹೆಗ್ಡೆ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com