ಇಂಡೋನೇಷ್ಯಾ ಉತ್ಸವಕ್ಕೆ ಬಳ್ಳಾರಿಯ ತೊಗಲುಬೊಂಬೆ ತಂಡ

ಇಂಡೋನೇಷ್ಯಾದಲ್ಲಿ ಮೇ 25ರಿಂದ `ಭಾರತ ಉತ್ಸವ'ದ ಅಂಗವಾಗಿ ನಡೆಯಲಿರುವ ಪಾರಂಪರಿಕ ತೊಗಲು ಗೊಂಬೆಯಾಟ ಉತ್ಸವದಲ್ಲಿ ಬಳ್ಳಾರಿಯ ರಾಮಾಂಜನೇಯ ತೊಗಲು ಬೊಂಬೆ ಮೇಳ ಟ್ರಸ್ಟ್ ತಂಡ ಭಾಗವಹಿಸಲಿದೆ ಎಂದು ಸಾಹಿತಿ ಗಂಗಾಧರ ಪತ್ತಾರ ತಿಳಿಸಿದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬಳ್ಳಾರಿ: ಇಂಡೋನೇಷ್ಯಾದಲ್ಲಿ ಮೇ 25ರಿಂದ `ಭಾರತ ಉತ್ಸವ'ದ ಅಂಗವಾಗಿ ನಡೆಯಲಿರುವ ಪಾರಂಪರಿಕ ತೊಗಲು ಗೊಂಬೆಯಾಟ  ಉತ್ಸವದಲ್ಲಿ ಬಳ್ಳಾರಿಯ ರಾಮಾಂಜನೇಯ ತೊಗಲು ಬೊಂಬೆ ಮೇಳ ಟ್ರಸ್ಟ್ ತಂಡ ಭಾಗವಹಿಸಲಿದೆ ಎಂದು ಸಾಹಿತಿ ಗಂಗಾಧರ ಪತ್ತಾರ  ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ, ಹಿರಿಯ ಕಲಾವಿದ ಬೆಳಗಲ್ಲು ವೀರಣ್ಣ  ನೇತೃತ್ವದಲ್ಲಿ ಎಂಟು ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಂಸ್ಕೃತಿ ಇಲಾಖೆ ಆಹ್ವಾನದ ಮೇರೆ ತಂಡ ಉತ್ಸವದಲ್ಲಿ  ಪಾರಂಪರಿಕ ತೊಗಲು ಗೊಂಬೆಯಾಟ ಪ್ರದರ್ಶಿಸಲಿದೆ.

ಮೇ25, 26 ರಂದು ಇಂಡೋನೇಷ್ಯಾದ ಯೋಗ್ಯ ಕರ್ತದಲ್ಲಿ, ಮೇ.27, 28 ರಂದು ಸುರಕರ್ತ, ಮೇ 30,31 ರಂದು ಡೆನಪಾಸರ್ ನ ನಾಟ್ಯ  ಮಂಡಲ ಆಡಿಟೋರಿಯಂನಲ್ಲಿ ಒಟ್ಟು 6 ಪ್ರದರ್ಶನಗಳನ್ನು ತಂಡವು ನೀಡಲಿದೆ. ಭಾರತದ ಅತ್ಯಂತ ಜನಪ್ರಿಯ ಆದಿ ಕಾವ್ಯವಾಗಿರುವ  ರಾಮಾಯಣದ ಪಂಚವಟಿ ಪ್ರಸಂಗವನ್ನು ತೊಗಲು ಗೊಂಬೆಯಾಟದ ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com