ಜಿಲ್ಲಾ ಸುದ್ದಿ

ಕುತೂಹಲ ಕಥೆಗಳು ನಮ್ಮ ದೇಶದಲ್ಲಿ ಮಾತ್ರ ಸಾಧ್ಯ: ಡಾ.ಚಂದ್ರಶೇಖರ ಕಂಬಾರ

ಕುತೂಹಲ ಕಥೆಗಳು ನಮ್ಮ ದೇಶದಲ್ಲಿ ಮಾತ್ರ ಸಾಧ್ಯ: ಡಾ.ಚಂದ್ರಶೇಖರ ಕಂಬಾರ
ನಿವೃತ್ತ ಪೊಲೀಸ್ ಅಧಿಕಾರಿ ಡಿ.ಪಾಲಾಕ್ಷಯ್ಯ ಅವರ ಶಬ್ದದೊಳಗಣ ನಿಶ್ಯಬ್ದ ಪುಸ್ತಕದ ಇಂಗ್ಲಿಷ್ ಮತ್ತು ಹಿಂದಿಗೆ ಭಾಷಾಂತರಗೊಂಡ ಫೋರ್ಥ್ ಮರ್ಡರ್ ಹಾಗೂ ಚೌಥಾ ಖೂನ್ ಪುಸ್ತಕವನ್ನು ಜ್ಞಾನಪ
Published On :

ಬೆಂಗಳೂರು: ಕುತೂಹಲ ಕೆರಳಿಸುತ್ತಾ ಕಥೆಯ ಮೂಲಕ ಸಂದೇಶ ರವಾನಿಸಲು ನಮ್ಮ ದೇಶದ ಕಥೆಗಳಿಗೆ ಮಾತ್ರ ಸಾಧ್ಯವೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ ಕಂಬಾರ ಅವರು ಹೇಳಿದರು.

ಸಮತಾ ಕಲ್ಚರಲ್ ಫೌಂಡೇಷನ್ ನಗರದ ಯವನಿಕಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಡಿ.ಪಾಲಾಕ್ಷ ಅವರ `ಶಬ್ದದೊಳಗಣ ನಿಶ್ಶಬ್ಧ ಕೃತಿ'ಯ ಇಂಗ್ಲಿಷ್ ಹಾಗೂ ಹಿಂದಿಗೆ ಭಾಷಾಂತರಗೊಂಡ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬೇರೆ ದೇಶದಲ್ಲಿ ಗ್ರೀಕ್ ನಾಟಕಗಳಂತಹ ಹಲವಾರು ನಾಟಕಗಳಿವೆ. ಆದರೆ ಅವರಿಗೆ ನಮ್ಮ ರೀತಿ ಕಥೆ ಹೇಳಲು ಸಾಧ್ಯವಿಲ್ಲ. ಕಥೆ ಕುತೂಹಲ ಕೆರಳಿಸುವಂತಿರಬೇಕು, ಓದಿದ ಮೇಲೆ ಮನಸ್ಸಿಗೆ ತೃಪ್ತಿ ದೊರಕುವಂತಿರಬೇಕು ಎಂದರು.

ಈ ಕೃತಿಗಳು ಸಾಹಿತಿಗಳಿಗೂ ಕುತೂಹಲ ಕೆರಳಿಸುತ್ತಾ ಓದಿಸಿಕೊಂಡು ಹೋಗುತ್ತದೆ. ಪತ್ತೆದಾರಿ ಕಾದಂಬರಿಯನ್ನೇ ಓದದ ನನ್ನನ್ನೂ ಇನ್ನುಮುಂದೆ ಓದುವಂತೆ ಓರೆಹಚ್ಚಿದೆ. ಪೊಲೀಸರೆಂದರೆ ಭಯದ ದೃಷ್ಟಿಯಿಂದಲೇ ಕಾಣುತ್ತೇವೆ. ಅವರದ್ದು ವಿಚಿತ್ರ ಪ್ರಪಂಚವಾಗಿರುತ್ತದೆ.ನಮ್ಮ ನಡುವೆಯೇ ಇದ್ದರೂ ಸಾಮಾನ್ಯ ಆಲೋಚನೆ ಅವರದ್ದಾಗಿರುವುದಿಲ್ಲ. ಆದ್ದರಿಂದಲೇ ಕಳ್ಳರು, ಕೊಲೆಗಾರರನ್ನು ಹಿಡಿಯಲು ಅದು ಸಹಾಯವಾಗುತ್ತದೆ ಎಂದು ಕಂಬಾರರು ಹೇಳಿದರು.

ಕನ್ನಡದಲ್ಲಿ ವೃತ್ತಿ ಸಾಹಿತ್ಯದ ಕೊರತೆಯಿದೆ. ಎಲ್ಲರೂ ಬೇರೆ ಬೇರೆ ವೃತ್ತಿಯಲ್ಲಿರುತ್ತಾರೆ. ಹಾಗೆಯೇ ಅವರಲ್ಲಿ ಒಬ್ಬ ಸಾಹಿತಿಯಿರುತ್ತಾನೆ. ಆದರೂ ಆತನಿಗೆ ತನ್ನ ಸಾಹಿತ್ಯದ ಬಗ್ಗೆ ಪರಿಚಯವಿರುವುದಿಲ್ಲ. ಬೇರೆ ಬೇರೆ ವೃತ್ತಿಯಲ್ಲಿರುವವರಿಂದ ಉತ್ತಮ ಸಾಹಿತ್ಯ ನಿರ್ಮಾಣವಾಗಬಹುದಿತ್ತು. ವೈದ್ಯರು, ಶಿಕ್ಷಕರು, ಎಂಜಿನಿಯರ್‍ಗಳು, ಟೆಕ್ಕಿಗಳು ಹೀಗೆ ಅವರವರ ಸುತ್ತಮುತ್ತಲಿನ ಆಗುಹೋಗುಗಳನ್ನು ತಾವು ಗಮನಿಸಿದ ವಿಷಯಗಳನ್ನು ಬರೆಯುತ್ತಾ ಹೋದರೆ ಸಮಾಜಕ್ಕೆ ಒಂದು ಕೊಡುಗೆ ನೀಡಿದಂತಾಗುತ್ತದೆ ಎಂದು ಅನುವಾದಕ ಶ್ರೀನಿವಾಸ್ ಸಿರ್ನೂರ್ಕರ್ ಹೇಳಿದರು.

ಖಾದಿ ಹಾಕಿದವರೆಲ್ಲ ದೇಶಪ್ರೇಮಿಗಳಲ್ಲ, ಖಾವಿ ಹಾಕಿದವರೆಲ್ಲ ಸ್ವಾಮೀಜಿಗಳಲ್ಲ. ಹಾಗೆಯೇ ಖಾಕಿ ಹಾಕಿದವರೆಲ್ಲರೂ ಕೂಡ ಪೊಲೀಸರಾಗಿರುವುದಿಲ್ಲ. ಕಾದಂಬರಿ, ಕಥೆ, ಕವನ, ಲೇಖನಗಳಲ್ಲೂ ಪೊಲೀಸ್ ಇರ್ತಾರೆ. ಅವರು ಪೊಲೀಸ್ ಇಲಾಖೆಯಲ್ಲಿದ್ದರೂ ಲೇಖನಗಳಿಗೆ ಒತ್ತು ನೀಡುತ್ತಿರುತ್ತಾರೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.