

ಬೆಂಗಳೂರು, ಅಕ್ಟೋಬರ್ 31, 2015: ಪರಿಸರ ಸಂರಕ್ಷಣೆಯ ತನ್ನ ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿಯ ಅಂಗವಾಗಿ ಮಾಡಿಕೊಂಡಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಬೆಂಗಳೂರಿನ ಪೀಣ್ಯ ಮೆಟ್ರೋ ನಿಲ್ದಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿತು. ಮಿಟ್ಸುಬಿಷಿ ಎಲೆಕ್ಟ್ರಿಕ್ ಸಮೂಹ ಕಂಪನಿಗಳ ನೌಕರರ ಜತೆ ಸ್ಥಳೀಯ ಯುವ ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳಾದ ಸೇ -ಟ್ರೀಸ್ ಮತ್ತು ರೋಟರಿ ಕ್ಲಬ್ ಆಫ್ ಬೆಂಗಳೂರಿನ ಸದಸ್ಯರು ಕೈಗೂಡಿಸಿದರು. ತಂಡ ಸುಮಾರು 40 ಸಸಿಗಳನ್ನು - ಮಹೋಗನಿ ಮತ್ತು ಟಬುಬಿಯ ರೊಸಿಯ ಸೇರಿದಂತೆ ಸ್ಥಳೀಯ ಸಸಿಗಳನ್ನು ನೆಡುವ ಮೂಲಕ ಪ್ರದೇಶವನ್ನು ಸುಂದರವಾಗಿರಿಸುವ ಹಾಗೂ ಇಂಗಾಲವನ್ನು ಸಾಕಷ್ಟು ಕಡಿಮೆ ಮಾಡುವ ಯತ್ನ ಮಾಡಿತು.
ಹಮ್ಮಿಕೊಂಡಿದ್ದ ಕಾರ್ಯಕ್ರಮ ಕುರಿತು ಮಾತನಾಡಿದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಮಕೊಟೊ ಕಿಟೈ ಹೇಳಿದ್ದು, ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮದಲ್ಲಿ ಸ್ಥಳೀಯ ಯುವಕರ ಜತೆಗೂಡಿ ಸಂಸ್ಥೆಯ ನೌಕರರು ಸಸಿ ನೆಟ್ಟಿದ್ದು ಸಂತಸ ನೀಡಿದೆ. ಪ್ರತಿ ವ್ಯಕ್ತಿ ಕನಿಷ್ಠ ಒಂದು ಸಸಿ ನೆಡಲು ಯತ್ನಿಸಬೇಕು. ನಮ್ಮ ಪ್ರಕøತಿ ಮಾತೆಯನ್ನು ರಕ್ಷಿಸಲು ಇದು ಪ್ರಮುಖ ಹೆಜ್ಜೆಯಾಗುತ್ತದೆ. ಇಂದಿನ ಯುವಕರಲ್ಲಿ ಪರಿಸರ ಕುರಿತಂತೆ ಅರಿವು ಮೂಡಿಸಲು, ಒಲಮ ಮೂಡಿಸುವ ನಮ್ಮ ಪ್ರಯತ್ನ ನಿಜಕ್ಕೂ ಸಂತೋಷದಾಯಕವಾಗಿದೆ ಎಂದರು.
2021, ಅಂದರೆ ಇನ್ನು ಆರು ವರ್ಷದಲ್ಲಿ ಮಿಟ್ಸುಬಿಷಿ ಎಲೆಕ್ಟ್ರಿಕ್ ತನ್ನ 100 ನೇ ವಾರ್ಷಿಕೋತ್ಸವ ಆಚರಿಕೊಳ್ಳಲಿದೆ. ಮಿಟ್ಸುಬಿಷಿ ಎಲೆಕ್ಟ್ರಿಕ್ ಸಮೂಹ ಎನ್ವಿರಾನ್ಮೆಂಟಲ್ ವಿಜನ್ 2021 ಪ್ರಾರಂಭಿಸಿದೆ. ಈ ಮೂಲಕ ಸಮಾಜದ ಅಭಿವøದ್ಧಿಗೆ ಮುಂದಾಗಿದೆ. ಯೋಜನೆ ಪರಿಸರ ನಿರ್ವಹಣೆಗೆ ಸಂಬಂಧಿಸಿದ ದೀರ್ಘ ಅವಧಿಗೆ ಸಂಬಂಧಿಸಿದ್ದಾಗಿದೆ. ಭೂಮಿಗೆ ಸಕಾರಾತ್ಮಕ ಕೊಡುಗೆ ನೀಡುವುದಕ್ಕೆ ಅನುಸರಿಸಬೇಕಾದ ಮಾರ್ಗದರ್ಶನ ಅದು ಒಳಗೊಂಡಿದೆ. 2021 ಸಂಸ್ಥೆಯ ಟಾರ್ಗೆಟ್ ವರ್ಷ ಆಗಿದ್ದು ಅದೇ ಸಮಯದಲ್ಲಿ ಮಿಟ್ಸುಬಿಷಿ ಎಲೆಕ್ಟ್ರಿಕ್ ಸ್ಥಾಪನೆಯಾಗಿ 100 ವರ್ಷ ಸಹ ಆಗುತ್ತಿದೆ ಎಂದರು. ಜಾಗತಿಕವಾಗಿ ಹಸಿರು ಕಂಪನಿಗಳ ಪಟ್ಟಿಯಲ್ಲಿ ತಾನು ವೊದಲು ಇರಬೇಕು ಎಂಬುದು ಸಂಸ್ಥೆಯ ಗುರಿ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ತಾನು ಕಾರ್ಯನಿರ್ವಹಿಸುತ್ತಿರುವ ಪ್ರತಿ ರಾಷ್ಟ್ರದಲ್ಲಿ ಅದು ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.