ಜಿಲ್ಲಾ ಸುದ್ದಿ

ನಕಲಿ ಐಟಿ ಇನ್ಸ್ ಪೆಕ್ಟರ್ ಬಂಧನ

ನಕಲಿ ಐಟಿ ಇನ್ಸ್ ಪೆಕ್ಟರ್ ಬಂಧನ
ಬಂಧನ(ಸಾಂಕೇತಿಕ ಚಿತ್ರ)
Published On :

ಬೆಂಗಳೂರು: ಆದಾಯ ತೆರಿಗೆ ಇನ್ಸ್ ಪೆಕ್ಟರ್ ಎಂದು ಪರಿಚಯಿಸಿಕೊಂಡು ಚಾಲಕನನ್ನು ಯಮಾರಿಸಿ ಐ-ಕ್ಯಾಬ್ ಕಂಪನಿಯ ಟೊಯೋಟ ಇಟಿಯೋಸ್ ಕಾರ್ ಕಳವು ಮಾಡಿದ್ದ ಚಾಲಾಕಿ ಕಳ್ಳನನ್ನು ಬಂಧಿಸಿರುವ ಗಿರಿನಗರ ಪೊಲೀಸರು ಆತನಿಂದ ರೂ 5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬನಶಂಕರಿ 3ನೇ ಹಂತದ ನಿವಾಸಿ ದೀಪಕ್‍ಕುಮಾರ್ ಅಲಿಯಾಸ್ ರಾಜಕುಮಾರ್ (32) ಬಂಧಿತ ಆರೋಪಿ. ನ.3ರಂದು ಜಸ್ಟ್ ಡಯಲ್‍ಗೆ ಕರೆ ಮಾಡಿದ್ದ ಈತ, ತನ್ನನ್ನು ಇನ್‍ಕಂ ಟ್ಯಾಕ್ಸ್ ಇನ್ಸ್‍ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ. ದೇವನಹಳ್ಳಿಗೆ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದು ಬಾಡಿಗೆಗೆ ಟ್ಯಾಕ್ಸಿ ಬೇಕಾಗಿದೆ. ಕೂಡಲೇ ಪುಟ್ಟೇನಹಳ್ಳಿ ಬಿಗ್‍ಬಜಾರ್ ಬಳಿ ಕಾರು ಕಳುಹಿಸುವಂತೆ ಕೇಳಿದ್ದಾನೆ. ಅದರಂತೆ ಐ-ಕ್ಯಾಬ್ ಕಂಪನಿಯು ಈತ ತಿಳಿಸಿದ್ದ ಜಾಗಕ್ಕೆ ಟೊಯೋಟ ಇಟಿಯೋಸ್ ಕಾರು ಕಳುಹಿಸಿದೆ ಕಾರಿನಲ್ಲಿ ಕುಳಿತ ಆರೋಪಿ ನಾನು ಇನ್‍ಕಂ ಟ್ಯಾಕ್ಸ್ ಅಧಿಕಾರಿ, ನಾನು ಮತ್ತು ನನ್ನ ಸ್ನೇಹಿತ ಇಂದು ಹೈದರಾಬಾದಿಗೆ ಹೋಗುತ್ತಿದ್ದೇವೆ. ಹಾಗಾಗಿ ಆತನನ್ನು ವುಡ್‍ಲ್ಯಾಂಡ್ ಹೋಟೆಲ್ ಬಳಿ ಪಿಕ್‍ಅಪ್ ಮಾಡಬೇಕು ಎಂದು ಮೆಜೆಸ್ಟಿಕ್, ರಿಚ್‍ಮಂಡ್ ಸರ್ಕಲ್ ಸೇರಿದಂತೆ ನಗರದ ಇತರೆಡೆ ಸುತ್ತಾಡಿಸಿದ್ದಾನೆ. ಬಳಿಕ ಹೈದರಾಬಾದ್‍ಗೆ ಹೋಗುವುದು ರದ್ದಾಗಿದೆ ಎಂದು ಹೇಳಿ, ಪುಟ್ಟೇನಹಳ್ಳಿ ಹಾಗೂ ಸುತ್ತಲ ಸ್ಥಳಗಳಲ್ಲಿ ಸುತ್ತಾಡಿಸಿದ್ದಾನೆ. ನಂತರ, ರಾತ್ರಿ 10.45ರ ವೇಳೆಗೆ ಹೊಸಕೆರೆ ಹಳ್ಳಿ ರಿಂಗ್ ರಸ್ತೆ ಸಮೀಪವಿರುವ ತನ್ನ ತಂಗಿ ಮನೆಗೆ ತೆರಳಬೇಕೆಂದು ಹೇಳಿರಿಂಗ್ ರಸ್ತೆಯಲ್ಲಿರುವ ಎಸ್‍ಎಲ್‍ಎನ್ ಬಾರ್ ಬಳಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾನೆ. ಈ ವೇಳೆ ಸಿಗರೇಟ್ ತರುವಂತೆ ಚಾಲಕನಿಗೆ ಹೇಳಿದ್ದಾನೆ.
ಕಾರು ಚಾಲಕ ಸಿಗರೇಟ್ ತರುವುದಕ್ಕೆ ಅತ್ತ ಹೋಗುತ್ತಿದ್ದಂತೆ ಆರೋಪಿ ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದ. ಈ ಸಂಬಂಧ ಕಾರಿನ ಮಾಲೀಕ ಪುಟ್ಟಸ್ವಾಮಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಾರ್ಯಾಚರಣೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.