ಮಹಿಳಾ ಮೀಸಲಿಗೆ ಜೆಡಿಎಸ್ ನಿರ್ಣಯ

ದಶಕಗಳಿಂದಲೂ ನನೆಗುದಿಗೆ ಬಿದ್ದಿರುವ `ಸಂಸತ್‍ನಲ್ಲಿ ಮಹಿಳಾ ಮೀಸಲು' ಜಾರಿಗೊಳಿಸಬೇಕೆಂದು ಜೆಡಿಎಸ್ ಮಹಿಳಾ ಸಮಾವೇಶ...
ಬೆಂಗಳೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಮಹಿಳಾ ಸಮಾವೇಶ
ಬೆಂಗಳೂರಿನಲ್ಲಿ ಭಾನುವಾರ ನಡೆದ ಜೆಡಿಎಸ್ ಮಹಿಳಾ ಸಮಾವೇಶ
Updated on: 

ಬೆಂಗಳೂರು:ದಶಕಗಳಿಂದಲೂ ನೆನೆಗುದಿಗೆ ಬಿದ್ದಿರುವ `ಸಂಸತ್‍ನಲ್ಲಿ ಮಹಿಳಾ ಮೀಸಲು'  ಜಾರಿಗೊಳಿಸಬೇಕೆಂದು ಜೆಡಿಎಸ್ ಮಹಿಳಾ ಸಮಾವೇಶ ನಿರ್ಣಯ ಅಂಗೀಕರಿಸಿದೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ  ಸಮಾವೇಶದಲ್ಲಿ ಜೆಡಿಎಸ್ ಮಹಿಳಾ ಅಧ್ಯಕ್ಷೆ ಶೀಲಾ ನಾಯಕ್ ಮಂಡಿಸಿದ ನಿರ್ಣಯವನ್ನು ಮಾಜಿ ಸಚಿವೆ, ಪಕ್ಷದ ಹಿರಿಯ ನಾಯಕಿ ಲೀಲಾದೇವಿ ಆರ್. ಪ್ರಸಾದ್ ಅಂಗೀಕರಿಸಿದರು. ನಂತರ ಈ ನಿರ್ಣಯವನ್ನು ಪ್ರಧಾನಿ ಮೋದಿ ಅವರಿಗೆ ಸಲ್ಲಿಸಿ ವಿಧೇಯಕ ಮಂಡಿಸುವಂತೆ  ಗ್ರಹಿಸುವುದಾಗಿ ದೇವೇಗೌಡ ವಿವರಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, 1996ರಲ್ಲಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲು ವಿಧೇಯಕ ಮಂಡಿಸಿದ್ದರು. ಆಗ ಅಂಗೀಕಾರ ಆಗಲಿಲ್ಲ. ಆನಂತರ ಬಿಜೆಪಿ, ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಈ ಬಗ್ಗೆ  ಚಕಾರ ಎತ್ತಲಿಲ್ಲ. ಇವೆರಡೂ ರಾಷ್ಟ್ರೀಯ ಪಕ್ಷಗಳಿಗೆ ಮಹಿಳಾ ಪರ ಕಾಳಜಿ ಇಲ್ಲ ಎಂದರು. ಉಪ ಮೇಯರ್ ಹೇಮಲತಾ ಸೇರಿದಂತೆ ಬಿಬಿಎಂಪಿಯ ಜೆಡಿಎಸ್‍ನ ಮಹಿಳಾ ಸದಸ್ಯರನ್ನು  ಸನ್ಮಾನಿಸಿದ ಅವರು, ಮಹಿಳೆಯರು ತಮ್ಮ ಅಧಿಕಾರದಲ್ಲಿ ಪತಿರಾಯರು  ಹಸ್ತಕ್ಷೇಪ ಮಾಡದಂತೆ  ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಬಿಬಿಎಂಪಿಯಲ್ಲಿ ಮಹಿಳೆಯರು ನೆಪಕ್ಕೆ ಮಾತ್ರವಿದ್ದು, ಅವರ ಅಧಿಕಾರಗಳನ್ನು ಅವರ ಪತಿ  ನಿರ್ವಹಿಸುತ್ತಾರೆ ಎನ್ನುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದನ್ನು ಸುಳ್ಳು ಮಾಡಬೇಕು.  ಎಲ್ಲರೂ ಹುಟ್ಟಿದ ಕೂಡಲೇ ಬೃಹಸ್ಪತಿಯಾಗುವುದಿಲ್ಲ.  ನಾನು ಮೊದಲು 2 ನಿಮಿಷ  ಮಾತನಾಡಲು ಹೆದರುತ್ತಿದ್ದೆ. ಈಗ ಸತತ 4 ಗಂಟೆ ಮಾತನಾಡುತ್ತೇನೆ.ಆದ್ದರಿಂದ ಮಹಿಳೆಯರು ಪುರುಷರ ಅಕ್ರಮಗಳನ್ನು ತಡೆಯಬೇಕು ಎಂದರು. ಆತ್ಮಹತ್ಯೆ ಮಾಡಿಕೊಂಡ  ರೈತರ ಕುಟುಂಬಗಳಿಗೆ ಇದೇ ವೇಳೆ 11 ಲಕ್ಷ ರೂಪಾಯಿ ಪರಿಹಾರ ವಿತರಿಸಲಾಯಿತು. ಮುಖಂಡ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಗೋಪಾಲಯ್ಯ, ಜಮೀರ್ ಅಹಮ್ಮದ್,  ಶ್ರೀನಿವಾಸಮೂರ್ತಿ, ಶರವಣ ಹಾಜರಿದ್ದರು.

ತಪ್ಪೊಪ್ಪಿಗೆಗೂ ರೆಡಿ: ಪಕ್ಷದಲ್ಲಿನ ಅಸಮಾಧಾನದ ಚರ್ಚಿಸಿ ಪರಿಹರಿಸಿಕೊಳ್ಳಲು ಸಿದ್ಧನಿದ್ದೇನೆ. ನನ್ನ ತಪ್ಪಾಗಿದ್ದರೂ ಸರಿ, ಕುಮಾರಸ್ವಾಮಿ ತಪ್ಪಿದ್ದರೂ ಸರಿ. ಮಾತುಕತೆ  ಮೂಲಕ ಬಗೆಹರಿಸಿಕೊಳ್ಳಲು ಸಿದ್ಧ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಅವರು ಪಕ್ಷದೊಳಗಿನ ಕೆಲವು ಶಾಸಕರ ಅಸಮಾಧಾನವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ, ಅತೃಪ್ತರಿಗೆ ಚರ್ಚೆಗೆ ಆಹ್ವಾನ ನೀಡಿದರು.  ಸದ್ಯದಲ್ಲೇ ಎಲ್ಲ ಶಾಸಕರೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಪ್ರಧಾನಿ ಮೋದಿ  ಆರಂಭದಲ್ಲಿ ಮಹಿಳಾ ಸಬಲೀಕರಣದ ಮಾತನಾಡುತಿದ್ದರು. ಈಗ ಅದು ಎಲ್ಲಿ ಹೋಯ್ತು. ಸಹಿಷ್ಣುತೆ ಎಲ್ಲಿದೆ? ಎಲ್ಲರೂ ಪ್ರಶಸ್ತಿಗಳನ್ನು ವಾಪಸ್ ನೀಡುತ್ತಿದ್ದಾರೆ. ಆದ್ದರಿಂದ ಬಿಜೆಪಿಗೆ  ಧಿಕಾರ ಸಿಕ್ಕರೆ ಏನೂ ಪ್ರಯೋಜನ ಆಗುವುದಿಲ್ಲ ಎಂದು ದೇವೇಗೌಡ ಟೀಕಿಸಿದರು.

ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಾಗ ಗೃಹ ಸಚಿವ ಪರಮೇಶ್ವರ್, ಮಹಿಳೆಯರು ರಾತ್ರಿ ಸಮಯದಲ್ಲಿ ಏಕೆ ಸಂಚರಿಸಬೇಕೆಂದು ಕೇಳುತ್ತಾರೆ. ಅವರಿಗೆ ನನ್ನ  ಧಿಕ್ಕಾರ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ತಮ್ಮದು ಎನ್ನುವ ಇವರು ಮಹಿಳೆಗೆ ರಾತ್ರಿ ಸಂಚಾರ ಬೇಡ ಅಂತ ಏಕೆ ಅನ್ನಬೇಕು?
 ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com