ಅತ್ತಿಗುಪ್ಪೆ ನಿವಾಸಿ ನಿವೃತ್ತ ಇನ್ಸ್‍ಪೆಕ್ಟರ್ ಐಸಾಕ್ ಸ್ಟೀಫನ್ ಅವರ ಪುತ್ರಿ ಸ್ವರ್ಣಲತಾ (26) ಮೃತರು. ಸೋಮವಾರ ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಸಾಕ್ ಸ್ಟೀಫನ್ ದಂಪತಿಗೆ 7 ಹೆಣ್ಣು ಮಕ್ಕಳಿದ್ದು, ಈ ಪೈಕಿ ಐವರಿಗೆ ವಿವಾಹವಾಗಿದೆ. ಕೊನೆಯ ಪುತ್ರಿ ಸ್ವರ್ಣಲತಾ, ಬಿ.ಎ, ಎಲ್‍ಎಲ್‍ಬಿ ಮುಗಿಸಿ ಖಾಸಗಿ ಕಂಪನಿಯಲ್ಲಿ ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.