ಜಿಲ್ಲಾ ಸುದ್ದಿ

ಡಾ.ವಾಲೀಕಾರ್ ನಿರಾಳ

ಡಾ.ವಾಲೀಕಾರ್ ನಿರಾಳ
ಹೈಕೋರ್ಟ್
Published On :
ಬೆಂಗಳೂರು: ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ ಮತ್ತು ಭ್ರಷ್ಟಾಚಾರ ಆರೋಪದಲ್ಲಿ ವಿವಿಯ ವಿಶ್ರಾಂತ ಕುಲಪತಿ ಫ್ರೊ.ಡಾ.ವಾಲೀಕಾರ್ ವಿರುದ್ಧ ಪ್ರಕರಣಗಳನ್ನು ರದ್ದುಗೊಳಿಸಿ ಆದೇಶ ನೀಡಿದ್ದ ಏಕಸದಸ್ಯ ಪೀಠದ ತೀರ್ಪನ್ನು ದ್ವಿ ಸದಸ್ಯ ಪೀಠ ಎತ್ತಿಹಿಡಿದಿದೆ. ವಾಲೀಕಾರ್‍ ವಿರುದ್ಧ ಪ್ರಕರಣವನ್ನು ರದ್ದುಗೊಳಿಸಿ ದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯಪಾಲರ ಕಚೇರಿ ಹಾಗೂ ವಿವಿಯ ರಿಜಿಸ್ಟ್ರಾರ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆನಂದಭೈರಾರೆಡ್ಡಿ ಮತ್ತು ನ್ಯಾ.ಎಸ್.ಸುಜಾತ ಅವರಿದ್ದ ನ್ಯಾಯಪೀಠ ಧಾರವಾಡದಲ್ಲಿ ವಿಚಾರಣೆ ಪೂರ್ಣಗೊಳಿಸಿ ಮಂಗಳವಾರ ಆದೇಶ ಪ್ರಕಟಿಸಿತು.
ಕುಲಪತಿಗಳು ಸರಕಾರ ಇಲ್ಲವೆ ವಿಶ್ವವಿದ್ಯಾಲಯದ ಸಿಬ್ಬಂದಿಯಾಗಿರುವುದಿಲ್ಲ. ವಿಶ್ವವಿದ್ಯಾಲಯದ ಕಾರ್ಯನಿರ್ವಹಣಾಧಿಕಾರಿಯಾಗಿರುತ್ತಾ ರೆ. ಅವರ ವಿರುದ್ಧ ತನಿಖೆಗೆ ಸರಕಾರವೇ ಆದೇಶ ನೀಡಬೇಕು. ಆದರೆ, ವಾಲೀಕಾರ್ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿರುವುದು  ಕಾನೂನು ಬಾಹಿರ. ಅಲ್ಲದೆ, ವಿಶ್ವವಿದ್ಯಾಲಯಗಳ ಕಾಯಿದೆಯ ಪ್ರಕಾರ ಕುಲಪತಿಗಳ ವಿರುದ್ಧ ಆರೋಪಗಳಿಗೆ ಏಕ ಸದಸ್ಯ ಸಮಿತಿ ರಚಿಸುವ ಅಧಿಕಾರವಿಲ್ಲ. ಆದರೆ, ರಾಜ್ಯಪಾಲರು ನಿವೃತ್ತ ನ್ಯಾ.ಪದ್ಮರಾಜ್ ನೇತೃತ್ವದ ಏಕಸದಸ್ಯ ಸಮಿತಿ ನೇಮಿಸಿ ತನಿಖೆ ನಡೆಸಿರುವುದು ಸಹ ಕಾನೂನಿಗೆ ವಿರುದ್ಧ ವಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣವೇನು?
ವಿವಿ ನೇಮಕಾತಿಗಳಲ್ಲಿ ಅವ್ಯವಹಾರ  ಆರೋಪ ಎದುರಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆಸಿದ ಸಮಿತಿ ಆರೋಪ ಸಾಬೀತಾಗಿರುವ ಬಗ್ಗೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ವಿವಿಯ ರಿಜಿಸ್ಟ್ರಾರ್ ಮೂಲಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.