ಪ್ರವಾಸಿ ಮಿತ್ರ ಯೋಜನೆಗೆ ಚಾಲನೆ

ಪ್ರವಾಸಿಗರನ್ನು ಆಕರ್ಷಿಸಲು ನಾವು ವಿಫಲರಾಗಿದ್ದೇವೆ. ದೇಶ ಮತ್ತು ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ...
ಪ್ರವಾಸಿ ಮಿತ್ರ ಯೋಜನೆಗೆ ಚಾಲನೆ ನೀಡಿದ ಸಚಿವ ಆರ್ ವಿ ದೇಶಪಾಂಡೆ ಅವರು ತರಬೇತಿ ಪಡೆದು, ಪ್ರವಾಸಿ ತಾಣಗಳಲ್ಲಿ ಕರ್ತವ್ಯಕ್ಕೆ ಸಜ್ಜಾಗಿರುವ ಹೋಂ ಗಾರ್ಡ್ ಗಳ ಜತೆ ಕುಶಲೋಪರಿ ನಡೆಸಿದರು
ಪ್ರವಾಸಿ ಮಿತ್ರ ಯೋಜನೆಗೆ ಚಾಲನೆ ನೀಡಿದ ಸಚಿವ ಆರ್ ವಿ ದೇಶಪಾಂಡೆ ಅವರು ತರಬೇತಿ ಪಡೆದು, ಪ್ರವಾಸಿ ತಾಣಗಳಲ್ಲಿ ಕರ್ತವ್ಯಕ್ಕೆ ಸಜ್ಜಾಗಿರುವ ಹೋಂ ಗಾರ್ಡ್ ಗಳ ಜತೆ ಕುಶಲೋಪರಿ ನಡೆಸಿದರು
Updated on: 
ಬೆಂಗಳೂರು: ಪ್ರವಾಸಿಗರನ್ನು ಆಕರ್ಷಿಸಲು ನಾವು ವಿಫಲರಾಗಿದ್ದೇವೆ. ದೇಶ ಮತ್ತು ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಕುಸಿದಿದ್ದು, ನಿರೀಕ್ಷಿಸಿದ ಪ್ರಮಾಣದಲ್ಲಿ ಬೆಳೆದಿಲ್ಲ ಎಂದು ಪ್ರವಾಸೋದ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. 
ಪ್ರವಾಸೋದ್ಯಮ ಇಲಾಖೆ ಹಾಗೂ ಗೃಹ ಇಲಾಖೆಯ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಪ್ರವಾಸಿ ಮಿತ್ರ' ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. 
ದುಬೈ, ಕಾಂಬೋಡಿಯಾ, ಮಲೇಷ್ಯಾ ಮತ್ತು ಯುರೋಪ್ ದೇಶಗಳ ಆರ್ಥಿಕತೆ ಪ್ರವಾಸೋದ್ಯಮವನ್ನೇ ಅವಲಂಬಿಸಿವೆ. ಆದರೆ ನಮ್ಮಲ್ಲಿ ಜಿಡಿಪಿಗೆ ಈ ಕ್ಷೇತ್ರ ಕೇವಲ ಶೇ.6.5ರಷ್ಟು ಕೊಡುಗೆ ನೀಡುತ್ತಿದೆ. ಪ್ರವಾಸಿ ತಾಣಗಳ ಅಭಿವೃದ್ಧಿಗೆ ಹಣದ ಕೊರತೆ ಇಲ್ಲ.
ಬದ್ಧತೆ ಮತ್ತು ಕಾಳಜಿ ಇದ್ದರೆ ನಾವು ಗುರಿ ಮುಟ್ಟಲು ಸಾಧ್ಯ. ಕರ್ನಾಟಕವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಪ್ರಸಕ್ತ 3ನೇ ಸ್ಥಾನದಲ್ಲಿದೆ. ಅಗತ್ಯ ಬೆಂಬಲ ಹಾಗೂ ಸಹಕಾರ ದೊರೆತರೆ ಮುಂದಿನ ಎಱಡು ವರ್ಷಗಳಲ್ಲಿ ಈ ಕ್ಷೇತ್ರವನ್ನು ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಏರಿಸಲಾಗುವುದು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com