ಪತಿಯನ್ನು ಹುಡುಕಿಕೊಡಬೇಕೆಂದು ಮಹಿಳೆಯೊಬ್ಬರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ. ಜಯಲಕ್ಷ್ಮಿ ಎಂಬುವವರೆ ಮನವಿ ಮಾಡಿದ ಮಹಿಳೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ಗ್ರಾಮದ ಶ್ರೀರಾಮ 1995ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮೈಸೂರು ಘಟಕದಲ್ಲಿ ತಾತ್ಕಾಲಿಕ ಚಾಲಕ ಹುದ್ದೆಗೆ ಸೇರಿದ್ದರು. ಕಳೆದ 19 ವರ್ಷಗಳಿಂದ ಚಾಲಕನಾಗಿ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನಡುವೆ 40 ಮಂದಿ ತಾತ್ಕಾಲಿಕ ಚಾಲಕರು 2003ರಲ್ಲಿ ಹುದ್ದೆ ಖಾಯಂಗೆ ಅರ್ಜಿಸಲ್ಲಿಸಿದ್ದರು. ಈ ವೇಳೆ ಸಾರಿಗೆ ಅ„ಕಾರಿಗಳು 20 ಸಾವಿರ ಲಂಚ ಕೇಳಿದ್ದರು. ಪತಿ ಬಡವನಾಗಿದ್ದರಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಲಂಚ ನೀಡಲಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಪತ್ರ(ಟಿಸಿ)ದಲ್ಲಿವಲೋಪವಿದೆ ಎಂದು ಹೇಳಿ ಹುದ್ದೆ ಖಾಯಂಮಾತಿಗೆ ನಿರಾಕರಿಸಿದ್ದರು. ಆಗ 40 ಮಂದಿ ಪೈಕಿ 39 ಮಂದಿಗೆ ಹುದ್ದೆ ಖಾಯಂ ಆಗಿದ್ದು, ಪತಿ ಶ್ರೀರಾಮಗೆ ಆಗಲಿಲ್ಲ. ನಂತರ ಬಳಿಕ ಸಾರ್ವಜನಿಕ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಲೋಪ ರಹಿತ ಟಿಸಿ ತಂದರೂ ಅಧಿಕಾರಿಗಳು ಖಾಯಂ ಮಾಡದೆ ಸತಾಯಿಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ. ಪತಿಯನ್ನು ಹುಡುಕಿಕೊಡಬೇಕು ಮತ್ತು ನ.30ರೊಳಗೆ ಅವರ ಹುದ್ದೆ ಖಾಯಂ ಮಾಡಬೇಕು. ಇಲ್ಲದಿದ್ದರೆ ಸಾರಿಗೆ ಇಲಾಖೆ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಹಿಳೆ ಎಚ್ಚರಿಸಿದ್ದಾಳೆ.