

ಕೂಡ್ಲಿಗಿ : ಹಾಲು ತರಲು ಹೋಗಿದ್ದ 14 ವರ್ಷದ ಅಪ್ರಾಪ್ತೆ ಮೇಲೆ ಅದೇ ಗ್ರಾಮದ ಯುವಕ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಹುಬ್ಬಳಿಯ ನಾಣ್ಯಾಪುರ ಗ್ರಾಮದಲ್ಲಿ ನಡೆದಿದ್ದು, ಬುಧವಾರ ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಣ್ಯಾಪುರ ಗ್ರಾಮದ ಬಸವರಾಜ (21) ಅದೇ ಗ್ರಾಮದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಹಾಲು ತರಲು ಹೋದಾಗ ಬಸವರಾಜ ಅತ್ಯಾಚಾರ ಮಾಡಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ. ಬಸವರಾಜ ಹಿಂದೆಯೂ ಆಕೆಯನ್ನು ಚುಡಾಯಿಸಿದ್ದ ಆರೋಪವಿದ್ದು, ಮಂಗಳವಾರ ರಾತ್ರಿ ಗ್ರಾಮದಲ್ಲಿ ಜಗಳೂರುಸ್ವಾಮಿ ದೇವರ ಕಾರ್ಯಕ್ರಮವಿತ್ತು. ಹೀಗಾಗಿ ಮನೆಗೆ ಬಾಲಕಿ ಹಾಲು ತರಲು ರಾತ್ರಿ ಹೋದಾಗ ಬಸವರಾಜ ಕೈ ಹಿಡಿದು ಎಳೆದಾಡಿದ್ದಾನೆ ಜತೆಗೆ ಮನೆಯೊಂರಲ್ಲಿ ಕೂಡಿಹಾಕಿ ಅತ್ಯಾಚಾರ ವೆಸಗಿದ್ದಾನೆ. ಹಾಗೂ ಜೀವ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಆತನ ಸ್ನೇಹಿತ ಮಹೇಶ್ ಸಹಕಾ ನೀಡಿದ್ದರಿಂದ ಆತನ ಮೇಲೂ ಪ್ರಕರಣ ದಾಖಲಾಗಿದೆ.