ಹಾವೇರಿ: ಮಾದಿಗ ಎಂಬ ಕಾರಣಕ್ಕೆ ಹಾವೇರಿ ತಾಲೂಕಿನ ಕಳ್ಳಿಹಾಳ ಗ್ರಾಪಂ ಬಿಲ್ ಕಲೆಕ್ಟರ್ ಹುದ್ದೆಯಿಂದ ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಪಂ ಅಧ್ಯಕ್ಷ, ಪಿಡಿಒ ಸೇರಿ 21 ಜನರನ್ನು ಪೊಲೀಸರುಗುರುವಾರ ಬಂಧಿಸಿದ್ದಾರೆ. ಗುಡ್ಡಪ್ಪ ರಾಮಣ್ಣನವರ ಅವರನ್ನು ಕೆಲಸ ದಿಂದ ವಜಾ ಗೊಳಿಸಿದ್ದಲ್ಲದೆ, ವಿಷ ಸೇವನೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದಲ್ಲಿ ಗ್ರಾಪಂ ಅಧ್ಯಕ್ಷ ಹೊನ್ನಮ್ಮ ಗೋಣೆಪ್ಪನವರ, ಪಿಡಿಒ ಗುಡ್ಡಪ್ಪ ಸಂಗೂರ ಸೇರಿ 21 ಮಂದಿ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಗುಡ್ಡಪ್ಪ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.