

ಬೆಂಗಳೂರು: ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‍ಗೆ ಸೆ.24 ಮತ್ತು 25ರಂದು ರಜೆ ಘೋಷಿಸಲಾಗಿದೆ. ಬಕ್ರಿದ್‍ಗೆ ಈ ಮೊದಲು ಗುರುವಾರ ರಜೆ ಘೋಷಣೆ ಆಗಿತ್ತು.
ಬಳಿಕ ರಾಜ್ಯ ಸರ್ಕಾರ ಆ ರಜೆಯನ್ನು ಶುಕ್ರವಾರಕ್ಕೆ ಮುಂದೂಡಿರುವ ಕಾರಣ ಎರಡೂ ದಿನ ರಜೆ ಘೋಷಿಸಲಾಗಿದೆ. ಗುರುವಾರ ಪಡೆಯುವ ರಜೆಗೆ ಪರಿಹಾರವಾಗಿ ಯಾವುದಾದರೂ ಶನಿವಾರದಂದು ಹೈಕೋರ್ಟ್ ಕಾರ್ಯ ನಿರ್ವಹಿಸಲಿದೆ.
ಈ ಕುರಿತು ಫುಲ್ ಕೋರ್ಟ್ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಒಂದು ದಿನ ಪಡೆದಿದ್ದ ರಜೆಗೆ ಪರಿಹಾರವಾಗಿ ಶನಿವಾರ (ಸೆ.26ರಂದು) ಹೈಕೋರ್ಟ್ ಕಾರ್ಯ ನಿರ್ವಹಿಸಲಿದೆ.