ಮೈಸೂರಿನಲ್ಲಿ 'ರೋಟಿ ಬ್ಯಾಂಕ್' ನಿಂದ ಹಸಿದವರಿಗೆ ಉಚಿತ ಊಟ

ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಬಡವರ ಹಸಿವನ್ನು ನೀಗಿಸಿದೆಯೋ ಇಲ್ಲ ಗೊತ್ತಿಲ್ಲ. ಆದರೆ ಮೈಸೂರಿನ ಚಾರಿಟಿಯೊಂದು ಮಾತ್ರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
ಮೈಸೂರು: ಕೇಂದ್ರ ಸರ್ಕಾರದ ಆಹಾರ ಭದ್ರತಾ ಕಾಯ್ದೆ ಬಡವರ ಹಸಿವನ್ನು ನೀಗಿಸಿದೆಯೋ ಇಲ್ಲ ಗೊತ್ತಿಲ್ಲ. ಆದರೆ ಮೈಸೂರಿನ ಚಾರಿಟಿಯೊಂದು ಮಾತ್ರ ಬಡವರ ಹಸಿವನ್ನು ನೀಗಿಸುತ್ತಿದೆ.
ಸಮಾನ ಮನಸ್ಕ ಉದ್ಯಮಿಗಳು ಸೇರಿ ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಮೀಪ ಚಂದ್ರಗುಪ್ತ ರಸ್ತೆಯಲ್ಲಿ ಆರಂಭಿಸಿರುವ ರೋಟಿ ಬ್ಯಾಂಕ್ ಪ್ರತಿನಿತ್ಯ ಸುಮಾರು 400 ಬಡವರಿಗೆ ಉಚಿತವಾಗಿ ರೋಟ್ಟಿ ನೀಡುತ್ತಿದೆ.
ಇತ್ತಿಚೀಗೆ ಔರಂಗಾಬಾದ್ ನ ಸಮಾಜ ಸೇವಾ ಸಂಸ್ಥೆಯೊಂದು ಆರಂಭಿಸಿದ್ದ ರೋಟಿ ಬ್ಯಾಂಕ್ ನಿಂದ ಪ್ರೇರಣೆ ಪಡೆದ ಬಡವರ ಬಂದು ಚಾರಿಟೇಬಲ್ ಟ್ರಸ್ಟ್(ಬಿಬಿಸಿ) ಜನವರಿ 26ರಿಂದ ಮೈಸೂರಿನಲ್ಲಿ ರೋಟ್ ಬ್ಯಾಂಕ್ ಆರಂಭಿಸಿದ್ದು, ಇದು ನಿತ್ಯ ಮಧ್ಯಾಹ್ನ 12ರಿಂದ 2ಗಂಟೆಯವರೆಗೆ ಹಸಿದು ಬಂದವರಿಗೆ ಮೂರು ರೋಟ್ಟಿ ಅಥವಾ ಚಪಾತಿ ಕರಿಯನ್ನು ಉಚಿತವಾಗಿ ನೀಡುತ್ತಿದೆ. ಅಲ್ಲದೆ ವರ್ಷದ 365 ದಿನಗಳು ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ.
ಇದರಿಂದ ಭಿಕ್ಷುಕರಿಗೆ, ನಿರ್ಗತಿಕರಿಗೆ, ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ ಹಾಗೂ ಆಟೋ ಚಾಲಕರಿಗೆ ತುಂಬಾ ಅನುಕೂಲವಾಗಿದೆ. ರೋಟಿ ಬ್ಯಾಂಕ್ ಜನರಿಗೆ ನಿಮ್ಮ ಬಡತನ ಸಾಬೀತು ಮಾಡಿ ಅಂತ ಕೇಳುವುದಿಲ್ಲ. ಯಾರೂ ಹಸಿವಿನಿಂದ ಬಳಲಬಾರದು ಮತ್ತು ಬಡವರಿಗೆ ಸಹಾಯವಾಗಲಿ ಎಂಬುದೇ ನಮ್ಮ ಉದ್ದೇಶ ಎಂದು ಟ್ರಸ್ಟ್ ನ ಪದಾಧಿಕಾರಿ ಅನಿಲ್ ಕೋಟಾರಿ ಅವರು ಹೇಳಿದ್ದಾರೆ.
ಬಡವರು ಗೌರವವದಿಂದ ತಮ್ಮ ಆಹಾರವನ್ನು ಪಡೆಯಬೇಕು ಮತ್ತು ನಮ್ಮ ಬಳಿ ಬರುವ ಬಡವರು ಯಾವುದೇ ಸಂಕೋಚ ಪಡದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
'ರೋಟಿ ಬ್ಯಾಂಕ್ ಸ್ಥಾಪಕರ ಬಗ್ಗೆ ತುಂಬಾ ಗೌರವ ಇದೆ. ಇಂದಿನ ದಿನಗಳಲ್ಲಿ ಆಹಾರದ ಬೆಲೆ ಗಗನಕ್ಕೇರುತ್ತಿದೆ. ಎಷ್ಟೋ ಬಾರಿ ಹೋಟೆಲ್ ಗೆ ಹೋಗಲು ಸಾಧ್ಯವಾಗದೇ ನಾನು ಹಸಿವಿನಿಂದ ಇಲ್ಲಿ ಬಂದು ರೋಟ್ಟಿ ಸೇವಿಸಿದ್ದೇನೆ' ಎಂದು ಉಚಿತ ರೋಟಿ ಊಟ ಮಾಡಿದ ರಾಜಣ್ಣ ಅವರು ಹೇಳಿದ್ದಾರೆ.
30 ಸದಸ್ಯರನ್ನೊಳಗೊಂಡ ಬಿಬಿಸಿ ಆರಂಭದಲ್ಲಿ ತಲಾ 5 ಸಾವಿರ ರುಪಾಯಿ ಬಂಡವಾಳ ಹಾಕಿ ಈ ಟ್ರಸ್ಟ್ ಅನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಇದನ್ನು ಬೇರೆ ನಗರಗಳಿಗೂ ವಿಸ್ತರಿಸುವ ಮತ್ತು ಬಟ್ಟೆ ಬ್ಯಾಂಕ್ ಅನ್ನು ಸ್ಥಾಪಿಸುವ ಉದ್ದೇಶ ಹೊಂದಿರುವುದಾಗಿ ಕೋಟಾರಿ ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com