ಖಾಸ್ಮಿ ಬಂಧನಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಮೌಲ್ವಿ ಅನ್ವರ್ ಷಾ ಖಾಸ್ಮಿ ಕುರಿತು ಕರ್ನಾಟಕ ಮುಸ್ಲಿಂ ಸಂಘ, ಸಂಸ್ಥೆಗಳು ಭಾನುವಾರ ಬೆಂಗಳೂರಿನ ಜೆ.ಸಿ.ನಗರದ ಹಜ್ ಕ್ಯಾಂಪ್ ನಲ್ಲಿ ಸಭೆ ನಡೆಸಿವೆ...
ಖಾಸ್ಮಿ ಬಂಧನಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ
ಖಾಸ್ಮಿ ಬಂಧನಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧ

ಬೆಂಗಳೂರು: ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೊಳಗಾದ ಮೌಲ್ವಿ ಅನ್ವರ್ ಷಾ ಖಾಸ್ಮಿ ಕುರಿತು ಕರ್ನಾಟಕ ಮುಸ್ಲಿಂ ಸಂಘ, ಸಂಸ್ಥೆಗಳು ಭಾನುವಾರ ಬೆಂಗಳೂರಿನ ಜೆ.ಸಿ.ನಗರದ ಹಜ್ ಕ್ಯಾಂಪ್ ನಲ್ಲಿ ಸಭೆ ನಡೆಸಿವೆ.

ಮೌಲ್ವಿ ಖಾಸ್ಮಿ ಬಂಧನ ಸಂಬಂಧ ಕಾನೂನು ಹೋರಾಟ ನಡೆಸುವುದು, ಈ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವದು ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.

ಸಭೆಯಲ್ಲಿ ಏನಾಯ್ತು?
ಒಬ್ಬ ಧಾರ್ಮಿಕ ಮುಖಂಡನನ್ನು ರಾತ್ರೋರಾತ್ರಿ ಬಂಧಿಸಿರುವುದು ಸರಿಯಲ್ಲ. ಖಾಸ್ಮಿ ಧಾರ್ಮಿಕ ಪ್ರವಚಕರು, ಅವರು ಉಗ್ರರೊಂದಿಗೆ ಸಂಪರ್ಕ ಹೊಂದಿದ್ದರು, ರಾಷ್ಟ್ರ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು ಎಂದರೆ ನಂಬಲಸಾಧ್ಯ. ಯಾವ ಆರೋಪದಡಿ ಖಾಸ್ಮಿ ಅವರನ್ನು ಬಂಧಿಸಲಾಗಿದೆ ಎಂಬ ವಿವರ ಪಡೆಯುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅಲ್ಲದೇ ರಾಜ್ಯ ಪೊಲೀಸರು, ಸ್ಥಳೀಯ ಸರ್ಕಾರ ಇದ್ದರೂ ದೆಹಲಿ ಪೊಲೀಸರು ಖಾಸ್ಮಿಯನ್ನು ಅಕ್ರಮವಾಗಿ ಬಂಧಿಸಿರುವುದು ಸರಿಯಲ್ಲ ಎಂಬ ಆರೋಪಗಳು ಸಭೆಯಲ್ಲಿ ಕೇಳಿ ಬಂದವು. ಈಗಾಗಲೇ ದೆಹಲಿಯಲ್ಲಿರುವ ಸಮಾಜದ ಮುಖಂಡರು ಖಾಸ್ಮಿ ಜಾಮೀನಿನ ಬಗ್ಗೆ ಚರ್ಚೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ.

ಸಭೆಯಲ್ಲಿ ಭಾಗಿಯಾದ ಎಲ್ಲಾ ಮುಖಂಡರಿಗೂ, ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಅಶಾಂತಿಗೆ ಅವಕಾಶ ಮಾಡಿಕೊಡ ಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮೌಲ್ವಿ ಖಾಸ್ಮಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಧರ್ಮಕ್ಕೆ ಸಂಬಂಧಿಸಿದ ಕೆಲ ವಿಷಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿದರೆ ಅದನ್ನು ಪ್ರಚೋದನಕಾರಿ ಹೇಳಿಕೆ ಎಂದು ತಪ್ಪಾಗಿ ತಿಳಿದು ಅವರನ್ನು ಕೆಲವು ಕಡೆ ಉಚ್ಚಾಟನೆ ಮಾಡಿದ್ದಾರೆ. ಯಾವುದೇ ಮಸೀದಿಯ ಕಮಿಟಿ ಪ್ರಚೋದ ನಕಾರಿ ಹೇಳಿಕೆಗೆ ಅವಕಾಶ ನೀಡುವುದಿಲ್ಲ. ಅದನ್ನು ಎಲ್ಲರೂ ವಿರೋಧಿಸುತ್ತಾರೆ. ದೆಹಲಿ ಪೊಲೀಸರ ವರ್ತನೆ ವಿರುದಟಛಿ ಕಾನೂನು ರೀತಿಯ ಹೋರಾಟವೇ ಮಾರ್ಗ ಎಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

ಅಲ್ ಖೈದಾ ಉಗ್ರ ಸಂಘಟನೆಗಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಯುವಕರನ್ನು ಸಳೆದು ಅವರನ್ನು ಉಗ್ರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುತ್ತಿದ್ದ ಆರೋಪದ ಮೇಲೆ ಅನ್ಜರ್ ಷಾ ಖಾಸ್ಮಿಯನ್ನು ಗುರುವಾರ ರಾತ್ರಿ ದೆಹಲಿಯ ವಿಶೇಷ ಪೊಲೀಸ್ ಘಟಕ ಬಂಧಿಸಿ, ದೆಹಲಿಗೆ ಕರೆದೊಯ್ದಿದಿತ್ತು. ಕೋರ್ಟ್ ಹಾಜರು ಪಡಿಸಿ, ವಿಚಾರಣೆಗಾಗಿ ಜ.20ವರಗೆ ದೆಹಲಿ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಸಭೆಯಲ್ಲಿ ಜಮಾತೆ ಇಸ್ಲಾಂ, ತಬ್ಲೀಕ್ ಜಮಾತೆ, ಜಮಾತೆ ಉಲ್ಮಾ, ಸುನ್ನಿ ಜಮಾತ್, ಊದಾ ಮುಸ್ಲಿಂ, ಹಾಲ್ ಹದ್ದೀಫ್ ಮತ್ತು ಶಿಯಾ ಜಮಾತೆ ಸೇರಿದಂತೆ ರಾಜ್ಯದ ಹಲವು
ಸಂಘಟನೆಗಳ ಸುಮಾರು 70ಕ್ಕೂ ಹೆಚ್ಚು ಮುಖಂಡರು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com