ಇಂದಿನಿಂದ ವಿವಿಧ ಕಾರ್ಯಕ್ರಮ (ಸುದ್ದಿ ಸಂಕ್ಷೇಪ)
ಬಾಗಲಕೋಟೆ: ಸೋಮವಾರ ಮಹಾಶಿವರಾತ್ರಿ ನಿಮಿತ್ತ ನಗರದ ಎಂ.ಜಿ. ರಸ್ತೆಯಲ್ಲಿರುವ ನೂತನ ಮಲ್ಲಯ್ಯನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರದಿಂದ ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ. ಮಾ. 10ರಂದು ಶ್ರೀ ಮಲ್ಲಯ್ಯನ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಮತ್ತು ಸೋಮವಾರ ಬೆಳಗ್ಗೆ ರುದ್ರಾಭಿಷೇಕ, ಸಂಜೆ ಮಹಾಪೂಜೆ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಲ್ಲಯ್ಯನ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.
ಇಂದು ಧಾರ್ಮಿಕ ಕಾರ್ಯಕ್ರಮ
ಬಾಗಲಕೋಟೆ: ಬವಿವಿ ಸಂಘದ ಎಸ್. ನಿಜಲಿಂಗಪ್ಪ ವೈದ್ಯಕೀಯ ಕಾಲೇಜು ಹಾಗೂ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಆವರಣದಲ್ಲಿರುವ ಶಿವಾಲಯದಲ್ಲಿ ಮಹಾಶಿವರಾತ್ರಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಾನುವಾರ ಸಂಜೆ ಜರುಗಲಿವೆ. ಸಂಜೆ ದೇವಸ್ಥಾನದಲ್ಲಿ ಶಿವಲಿಂಗದ ಮಹಾಪೂಜೆ ಕಾರ್ಯಕ್ರಮ ಜರಗಲಿದ್ದು, ಬಸವೇಶ್ವರ ಕಲಾ ಕಾಲೇಜಿನ ಸಂಗೀತ ಉಪನ್ಯಾಸಕ ಪ್ರೊ. ಕಾಶಿಲಿಂಗ ಮಠ ಅವರಿಂದ ಸಂಗೀತ ಶಿವರಾತ್ರಿ ಭಜನೆ ಸಂಧ್ಯಾ ಕಾರ್ಯಕ್ರಮ ಜರುಗಲಿದೆ. ಭಕ್ತಿ ಸುಧೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಠಪತಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ನಂತರ ಶಿವಭಜನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಬನ್ನಿಹಟ್ಟಿಯಲ್ಲಿ ತಂದೆ-ತಾಯಿ ಪಾದ ಪೂಜೆ
ಹುನಗುಂದ: ಮಕ್ಕಳಲ್ಲಿ ಮೌಲ್ಯಯುತ ಬದುಕನ್ನು ನೀಡುವಲ್ಲಿ ತಾಯಿ ಪ್ರಮುಖ ಪಾತ್ರವಹಿಸುವಳು ಎಂದು ವಿವೃತ್ತ ಶಿಕ್ಷಕ ಕೂಡ್ಲಪ್ಪಮಾಸ್ತರ ಕೊನೆಸಾಗರ ಹೇಳಿದರು. ಅವರು ಬನ್ನಿಹಟ್ಟಿ ಗ್ರಾಮದಲ್ಲಿ ಈಚೆಗೆ ಏಕಲ್ ವನ ಬಂಧು ಪರಿಷತ್ ಹಮ್ಮಿಕೊಂಡ ತಂದೆ-ತಾಯಿಗಳ ಪಾದ ಪೂಜೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮಹೇಶ ಜೀರಗಿ, ಆಚಾರ್ಯ ಸಂಸ್ಕೃತಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಗುರು ಗೌರವ ಮೂಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ರಕ್ಕಸಗಿ ಗ್ರಾಮಪಂಚಾಯಿತಿ ಸದಸ್ಯ ಚಂದನಗೌಡ ಪಾಟೀಲ, ಗ್ರಾಮದ ಹಿರಿಯರಾದ ಮುರಿಗೆಯ್ಯ ಗೌಡರ, ಸಕರಪ್ಪ ತೋಟಿಗೇರ, ಶರಣಪ್ಪ ಗುಡದಪ್ಪನವರ, ಸಿದ್ದಪ್ಪ ಬಡಿಗೇರ ಮತ್ತಿತರರು ವೇದಿಕೆಯಲ್ಲಿದ್ದರು. ಮೇಘಾ ಕುಂಬಾರ ಹಾಗೂ ಸಂಗಡಿಗರಿಂದ ಪ್ರಾರ್ಥನೆ ನಡೆಯಿತು. ಯಲ್ಲನಗೌಡ ಗೌಡರ ಸ್ವಾಗತಿಸಿದರು. ಮಹಾಂತೇಶ ವಾಲೀಕಾರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

