ವಾಂಬೆ ಕಾಲನಿ ಗುಡ್ಡದ ಮೇಲಿನ ಗಾಳಿಸುದ್ದಿ ತಂದ ವಿವಾದ
ಬಾಗಲಕೋಟೆ: ಬಾಗಲಕೋಟೆ ನವನಗರದ ಗುಡ್ಡದ ಮೇಲಿರುವ ವಾಂಬೆ ಕಾಲೋನಿಯ ಪಕ್ಕ ಇರುವ ಗುಡ್ಡದಲ್ಲಿ ದೇವರು ಪ್ರತ್ಯಕ್ಷವಾಗಿದೆ ಎಂಬ ಗಾಳಿ ಸುದ್ದಿ ನವನಗರದಲ್ಲಿ ಕಳೆದ ಎರಡು ದಿನಗಳಿಂದ ಹರದಾಡಿ ವಿವಾದ ಹುಟ್ಟುಹಾಕಿದೆ.
ಯಾರೋ ಕೀಡಿಗೇಡಿಗಳು ಶುಕ್ರವಾರ ರಾತ್ರಿ ವಾಂಬೇ ಕಾಲೋನಿಯ ಪಕ್ಕವಿರುವ ವಿಶಾಲವಾದ ಗುಡ್ಡದಲ್ಲಿ ಕಲ್ಲು ಮಣ್ಣು ಕೂಡಿಕೊಂಡಿರುವ ಜಾಗೆಯಲ್ಲಿ ಮಣ್ಣಿನ ಮೇಲೆ ಸುಣ್ಣ ಹಾಕಿ ಮಣ್ಣನ್ನು ಗೋರಿ ಆಕಾರದಲ್ಲಿ ನಿರ್ಮಾಣ ಮಾಡಿ ಅದರ ಮುಂದೆ ಸುಗಂದವುಳ್ಳ ಉದಬತ್ತಿ ಹಚ್ಚಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮಾಹಿತಿ ಪಡೆದ ನವನಗರದ ಪಿಎಸ್ಐ ಎಸ್,ಎಂ ಅವಜಿ ತಮ್ಮ ಸಿಬ್ಬಂದಿ ಜೊತೆ ಸೇರಿ ಘಟನಾ ಸ್ಥಳಕ್ಕೆ ತೆರಳಿದಾಗ ಅಲ್ಲಿ ಗೋರಿ ಆಕಾರದಲ್ಲಿ ಮಣ್ಣನ್ನು ಹಾಕಿ ಅದರ ಮೇಲೆ ಸುಣ್ಣ ಹಾಕಿದ್ದನ್ನು ಕಂಡ ಪೋಲಿಸರು ಅದನ್ನು ಸನಿಕೆ ಹಾಗೂ ಪಿಕಾಸಿಯಿಂದ ಅಗೆದಾಗ ಏನು ಸಿಗದಿದ್ದಾಗ ಅದನ್ನು ಅಲ್ಲಿಂದ ತೆರವು ಗೊಳಿಸಿದ್ದಾರೆ.
ಗಾಳಿಸುದ್ದಿ ವಿವಾದ ಹುಟ್ಟುಹಾಕಿದೆ: ಶನಿವಾರ ಬೆಳಗಿನಜಾವ ಮತ್ತೆ ಕಿಡಿಗೇಡಿಗಳು ತಮ್ಮ ಕೈಚಳಕ ತೋರಿಸಿ ಅದೇ ಸ್ಥಳದಲ್ಲಿ ಹಸಿರು ಬಟ್ಟೆ ಹಾಕಿ, ಅಗರಬತ್ತಿ ಹಚ್ಚಿದ್ದು ಮತ್ತೆ ಇದನ್ನು ನೊಡಲು ಜನ ತಂಡೋಪ ತಂಡವಾಗಿ ಆಗಮಿಸತೊಡಗಿತು. ಪುನಃ ನವನಗರದ ಪೋಲಿಸರು ಆ ಪ್ರದೇಶಕ್ಕೆ ತೆರಳಿ ಮಣ್ಣಿನ ಗುಂಪಿನ ಮೇಲೆ ಹಾಕಲಾಗಿದ್ದ ಹಸಿರು ಬಟ್ಟೆ ಹಾಗೂ ಉದಬತ್ತಿಯನ್ನು ತೆಗೆದುಹಾಕಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಘಟನೆಗೆ ಕಾರಣ ಎನ್ನಲಾದವರನ್ನು ಪೋಲಿಸರು ಹಿಂಬಾಲಿಸಿದಾಗ ರೋಗಬಂದತೆ ವರ್ತಿಸಿದ ಕಿಡಿಗೇಡಿಗಳು ನಮ್ಮ ಮೇಲೆ ಪೋಲಿಸರು ಹಲ್ಲೆ ಮಾಡಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ ಎಂದು ಗಾಳಿ ಸುದ್ದಿ ಹರಡಿಸುತ್ತಿದ್ದಾರೆ. ಗುಡ್ಡದ ಮೇಲಿಂದ ಓಡಿಹೋಗುತ್ತಿದ್ದ ಕಿಡಿಗೇಡಿಗಳನ್ನು ಪೋಲಿಸರು ಆಸ್ಪತ್ರೆಗೆ ಸೇರಿಸಿದ್ದಾರೆಂದು ತಿಳಿದು ಬಂದಿದೆ.
ಈ ಕುರಿತು ನವನಗರದ ಪಿಎಸ್ಐ ಎಸ್,ಎಂ ಅವಜಿ ಅವರನ್ನು 'ಕನ್ನಡಪ್ರಭ' ಸಂಪರ್ಕಿಸಿದಾಗ ಯಾರೂ ಕಿಡಿಗೇಡಿಗಳು ಗುಡ್ಡದ ಮೇಲೆ ಹಸಿರು ಬಣ್ಣದ ಬಟ್ಟೆ ಹಾಕಿ ಗೋರಿ ಆಕಾರದಲ್ಲಿ ಮಣ್ಣನ್ನು ಗುಂಪಾಗಿ ಮಾಡಿ ಅಲ್ಲಿ ಅಗರಬತ್ತಿ ಹಚ್ಚಿದ್ದು ಗಮನಕ್ಕೆ ಬಂದಿತ್ತು ಇದನ್ನು ಗಮನಿಸಲು ಸ್ಥಳಕ್ಕೆ ತೆರಳಿದಾಗ ಅಲ್ಲಿ ಜನ ಮರೋಳ ಜಾತ್ರೆ ಮರಳೋ ಎನ್ನುವಷ್ಟು ಜನ ಸೇರಿದ್ದರು. ಅಲ್ಲಿ ಪುಟಾಣಿ, ಮಾದಲಿ ಉದ್ಭವವಾಗುತ್ತಿದೆ ಎಂಬ ಸುದ್ದಿ ಹರಡಿಸುತ್ತಿದ್ದರು. ಸ್ಥಳದಲ್ಲಿ ತೆರಳಿದಾಗ ಅಲ್ಲಿ ಯಾವ ಮಾದಲಿಯಾಗಲಿ, ಪುಟಾಣಿ ಸೇರಿದಂತೆ ಮತ್ತಾವ ವಸ್ತುಗಳು ಅಲ್ಲಿ ಪತ್ತೆಯಾಗಲಿಲ್ಲ. ಕೆಲ ಕೋಮಿನ ಜನರು ಅಲ್ಲಿ ವಿನಾಕಾರಣ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆಂದು ಹೇಳಿದರು. ಈ ಬಗ್ಗೆ ವಾಂಬೇ ಕಾಲೋನಿಯ ಜನರನ್ನು ಪತ್ರಿಕೆ ಮಾತನಾಡಿಸಿದಾಗ ಇಲ್ಲಾ ಸಾರ್ ಅಲ್ಲಿ ಏನು ಇಲ್ಲಾ ಕೆಲ ಕಿಡಿಗೇಡಿಗಳು ಮಣ್ಣಿನಲ್ಲಿ ಸುಗಂದ ಮಿಶ್ರಿತ ತೈಲವನ್ನು ಬೀಸಾಕಿದ್ದು ಮಣ್ಣು ವಾಸನೆಯಿಂದ ಕೂಡಿದೆ ವಿನಹ ಇಲ್ಲಿ ಯಾವ ದೇವರು ಉದ್ಭವವಾಗಿಲ್ಲ. ವಿನಾಕಾರಣ ಶಾಂತವಿರುವ ನವನಗರದ ವಾಂಬೇ ಕಾಲೋನಿಯಲ್ಲಿ ಅಶಾಂತಿಯನ್ನು ಹರಡುಸುತ್ತಿರುವ ಕಿಡಿಗೇಡಿಗಳನ್ನು ಪೋಲಿಸರು ಬಂದಿಸಿಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

