ಸರಳ, ಸಾರ್ಥಕ ಜೀವನ ನಡೆಸಲು ಸಲಹೆ
ಇಳಕಲ್ಲ: ಮಹಿಳೆಯರು ಸರಳ ಹಾಗೂ ಸಾರ್ಥಕ ಜೀವನ ನಡೆಸುವುದನ್ನು ಕಲಿಯಬೇಕು. ಸರಳ ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ ಇದೆ ಎಂದು ನಗರದ ಖ್ಯಾತ ವೈದ್ಯೆ ಡಾ. ಅರುಣಾ ಅಕ್ಕಿ ಹೇಳಿದರು.
ಅವರು ಇಲ್ಲಿಯ ಜೇಸಿ ಶಾಲೆಯ ಸಭಾ ಭವನದಲ್ಲಿ ಶುಕ್ರವಾರ ಜೇಸಿಐ ಇಳಕಲ್ಲ ಸಂಸ್ಥೆ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಗರದ ಅತ್ಯುತ್ತಮ ಸೇಮಾ ಕಾರ್ಯಕರ್ತರು ಎಂಬ ಬಿರುದು ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನಾವು ಬದುಕುವುದನ್ನು ಕಲಿಯಬೇಕೆ ಹೊರತು ಗಳಿಸುವುದನ್ನು ಅಲ್ಲ. ಮಹಿಳೆ ಶಾಂತತೆಯಿಂದ ತನ್ನ ಸಂಸಾರ ಸಾಗಿಸಿದರೆ ಆ ಸಂಸಾರ ಸದಾ ಸುಖಿ ಸಂಸಾರವಾಗುವುದು. ಭಾರತೀಯ ಮಹಿಳೆಯರಿಗೆ ಜಗತ್ತಿನಲ್ಲಿ ಗೌರವವಿದೆ. ಭಾರತದಲ್ಲಿ ಅತ್ಯುತ್ತಮ ಯಾವುದೇ ಕಾರ್ಯ ಆಗುವಲ್ಲಿ ಮಹಿಳೆಯ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾರತಿಯ ಜೇಸಿ 24ರ ವಲಯ ನಿರ್ದೇಶಕಿ ಲೀಲಾ ಮಲ್ಲಿಕಾರ್ಜುನ ಮಾತನಾಡಿ, ನೋವು ಉಣ್ಣುತ್ತ ಬದುಕುವ ಕಾಲ ಇದಲ್ಲ. ಇಂದು ನಮ್ಮ ಎಳ್ಗೆಗೆ ನಾವೇ ಶಿಲ್ಪಿಗಳಾಗಬೇಕು ಎಂಬ ಆತ್ಮವಿಶ್ವಾಸ ನಮಲ್ಲಿರಬೇಕು ಎಂದರು.
ಇನ್ನೋರ್ವ ಅತಿಥಿ ವಿಜಯ ಮಹಾಂತೇಶ ಮಹಿಳಾ ಕಾಲೇಜಿನ ಹಿರಿಯ ಉಪನ್ಯಾಸಕಿ ಜಯಶ್ರೀ ಶೆಟ್ಟರ ಮಾತನಾಡಿ, ಜೀವನದಲ್ಲಿ ಸಾಧನೆ ಮಾಡಿದ ಅನೇಕ ಮಹಿಳೆಯರಿದ್ದಾರೆ. ಹಾಗೆಯೇ ಶೋಷಣೆ ಅನುಭವಿಸಿದ ಮಹಿಳೆರು ಇದ್ದಾರೆ. ಪುರುಷರು ಮಹಿಳೆರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಹಾಗೂ ನಾವು ಮಹಿಳೆಯನ್ನು ಗೌರವಿಸವುದರಿಂದ ಅವಳ ಜೀವನದ ದಾರಿಯೇ ಬದಲಾಗುತ್ತದೆ ಎಂದರು.
ಇಳಕಲ್ಲ ಜೇಸಿ ಸಂಸ್ಥೆ ಅಧ್ಯಕ್ಷ ಗಣೇಶ ಗದ್ದಿ ಅಧ್ಯಕ್ಷತೆ ವಹಸಿದ್ದರು. ಸಂಗಿತಾ ಗದ್ದಿ ವೇದಿಕೆಯಲ್ಲಿದ್ದರು. ರಾಘವಿ ಇಂದರಗಿ, ಕಾವ್ಯರೆಡ್ಡಿ, ವಿದ್ಯಾಶ್ರೀ ಗಂಜಿ ಅವರು ಪ್ರಾರ್ಥಿಸಿದರು. ಸಂಗಣ್ಣ ಗದ್ದಿ ಸ್ವಾಗತಿಸಿದರು. ಪಾಂಡುರಂಗ ಕುಲಕರ್ಣಿ ವಂದಿಸಿದರು. ಸ್ಮೀತಾ ಹಿರೇಮಠ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

