13ರಂದು ಎಸ್ಸಿ, ಎಸ್ಟಿ ಜೆಡಿಎಸ್ ಸಮಾವೇಶ
ಮಾಗಡಿ: ಏ.13 ರಂದು ಮಾಗಡಿ ಪಟ್ಟಣದ ಹೊಸಪೇಟೆ ಬಳಿ ಬೃಹತ್ ಎಸ್ಸಿ, ಎಸ್ಟಿ ಸಮಾವೇಶ ಏರ್ಪಡಿಸಿರುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಾಗಡಿ ಪಟ್ಟಣದ ಕಲ್ಯಗೇಟ್ನಲ್ಲಿ ಜೆಡಿಎಸ್ ನೂತನ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಮಹಿಳೆಯರೇ ಜೆಡಿಎಸ್ ಜೀವಾಳ.ಅವರ ಆಶೀರ್ವಾದಿಂದ ಈ ಬಾರಿ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸುವುದಾಗಿ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ಎಸ್ಸಿ, ಎಸ್ಟಿ ಸಮಾವೇಶವನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಉದ್ಘಾಟಿಸಲಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಮಾಜಿ ಶಾಸಕ ಅನ್ನದಾನಿ, ನಿವೃತ್ತ ಪೊಲೀಸ್ ಅಧಿಕಾರಿ ಸುಭಾಷ್ ಭರಣಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಏ.10ರಂದು ಕುದೂರಿನಲ್ಲಿ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಲಾಗುವುದು ಎಂದರು. ಇದೇ ವೇಳೆ ಪಕ್ಷದ ನೂತನ ಕಚೇರಿಯಲ್ಲಿ ಹೋಮ, ಹವನ, ಪೂರ್ಣಹುತಿ, ಪೂಜೆ ಕೈಂಕರ್ಯವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಮತ್ತು ರಾಧಾಬಾಲಕೃಷ್ಣ ನೆರವೇರಿಸಿದರು.ಆಗಮಿಕ ಗೋಪಾಲ್ ದೀಕ್ಷಿತ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಜಿಪಂ ಅಧ್ಯಕ್ಷ ಕೆ.ಮುದ್ದುರಾಜು ಯಾದವ್, ಸದಸ್ಯರಾದ ಎಂ.ಕೆ.ಧನಂಜಯ, ವಿಜಯಕುಮಾರ್, ಹಂಸಕುಮಾರಿ,ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ತಾಪಂ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಸದಸ್ಯರಾದ ಅರುಂಧತಿ ಚಿಕ್ಕಣ್ಣ, ಪೊಲೀಸ್ ರಾಮಣ್ಣ, ಜಿ.ವಿ.ರಾಮಣ್ಣ, ರೂಪೇಶ್ಕುಮಾರ್, ಜುಟ್ಟನಹಳ್ಳಿ ನಾಗರಾಜು, ಎಂ.ಆರ್. ಮಂಜುನಾಥ್, ನಾಗರಾಜು,ಇನಾಯಿತ್ ಉಲ್ಲಾ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

