ಅನಿತಾ ಕುಮಾರಸ್ವಾಮಿ ಪಾದಯಾತ್ರೆ, ಮತಯಾಚನೆ
ಚನ್ನಪಟ್ಟಣ: ಚನ್ನಪಟ್ಟಣದ ಜನತೆಗೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧ ವಿದ್ದು, ಪ್ರತಿಗ್ರಾಮಕ್ಕೆ ಭೇಟಿ ನೀಡಿದ ಸಮಯದಲ್ಲೂ ಹೃದಯಸ್ಪರ್ಶಿ ಸ್ವಾಗತ ನೀಡುವ ಮೂಲಕ ಚೈತನ್ಯ ತುಂಬುತ್ತಿದ್ದಾರೆ ಎಂದು ಅನಿತಾ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ತಾಲೂಕಿನ ಎಲಚಿಪಾಳ್ಯ, ಹುಚ್ಚಯ್ಯನದೊಡ್ಡಿ, ಗೆಂಡೆಕಟ್ಟೆ ದೊಡ್ಡಿ, ಕೆಂಚಪ್ಪಯ್ಯನ ದೊಡ್ಡಿ ಮೊದಲಾದ ಗ್ರಾಮಗಳ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಕಾರ್ಯಕರ್ತರ ವಿಶ್ವಾಸವೇ ನನ್ನ ಗೆಲುವಿನ ಶ್ರೀರಕ್ಷೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಜನತೆಗಾಗಿ ರಾಜಕಾರಣ ಮಾಡುತ್ತಿದೆ, ಕ್ಷೇತ್ರ ಜೆಡಿಎಸ್ ಭದ್ರ ಕೋಟೆಯಾಗಿದ್ದು, ನಾನಾಗಲಿ ನಮ್ಮ ಕುಟುಂಬದ ಸದಸ್ಯರಾಗಲಿ ಸ್ವಾರ್ಥ ಸಾಧನೆಗಾಗಿ ಪದೇ ಪದೆ ಪಕ್ಷ ಬದಲಿಸುವ ಜಾಯ ಮಾನದವರಲ್ಲ ಎಂದರು.
ಹತಾಶೆ ಹೇಳಿಕೆ ಸಲ್ಲದು: ರಾಜಕೀಯವಾಗಿ ಹತಾಶೆಗೆ ಒಳಗಾಗಿರುವ ವ್ಯಕ್ತಿಗಳು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದು, ಇಂತಹ ಹೇಳಿಕೆಗಳಿಂದ ಮತದಾರರನ್ನು ದಿಕ್ಕು ತಪ್ಪಿಸ ಬಹುದೆಂದು ಅವರು ನಂಬಿದ್ದರೆ ಅದು ಕೇವಲ ಭ್ರಮೆಯಷ್ಟೆ ಎಂದು ಯೋಗೇಶ್ವರ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದರು.
ಲಘುವಾಗಿ ಮಾತನಾಡುವುದನ್ನು ಬಿಟ್ಟು ಚುನಾವಣೆ ಎದುರಿಸ ಬೇಕು, ಬಾಯಿಗೆ ಬಂದಂತೆ ಮಾತನಾಡುವುದು ಯಾವುದೇ ರಾಜಕಾರಣಿಗೂ ಶೋಭೆ ತರುವುದಿಲ್ಲ ಎಂದರು.
ಮೇ.8ರಂದು ತಿಳಿಯುತ್ತೆ: ನಾನು ಡಂಗೂರ ಸಾರಿಸಿ ಊರಿಗೆ ಹೋಗ ಬೇಕೆಂದು ಹೇಳುತ್ತಿರುವ ಮಂದಿಗೆ ಜನತೆಯೇ ಉತ್ತರ ನೀಡುತ್ತಾರೆ. ಯಾರಿಗೆ ಜನ ಬಲವಿದೆ ಎಂಬುದು ಮೇ.8ರಂದು ಸಾಬೀತಾಗಲಿದೆ ಅಲ್ಲಿವರೆಗೆ ಕಾಯುವ ಸೌಜನ್ಯ ಅವರಿಗಿರಲಿ ಎಂದರು.
ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್, ಮುಖಂಡ ಸಿಂ.ಲಿಂ.ನಾಗರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ರಮೇಶ್, ವಕೀಲರ ಸಂಘದ ಅಧ್ಯಕ್ಷ ಹನುಮಂತು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

