ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು'
ಕ.ಪ್ರ. ವಾರ್ತೆ ಮಾಗಡಿ ಏ.8
ಸುಲಭವಾಗಿ 10 ಮದುವೆ ಮಾಡಿ ಮುಗಿಸಬಹುದು, ಒಂದು ವಿಧಾನ ಸಭೆ ಚುನಾವಣೆಯನ್ನು ಮಾಡಿ ಮುಗಿಸುವುದು ಸುಲಭದ ಕೆಲಸವಲ್ಲ, ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಚುನಾವಣೆಯಲ್ಲಿ ಯಶಸ್ಸು ಕಾಣಲು ಸಾಧ್ಯ ಚುನಾವಣಾಧಿಕಾರಿ ವೈಶಾಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಮಾಗಡಿ ತಾಲೂಕು ಕಚೇರಿ ಸಭಾಂಗಣದಲ್ಲಿ ಎಂಸಿಸಿ ಮತ್ತು ಬಿಎಲ್ಓಗಳ ತುರ್ತು ಸಭೆಯಲ್ಲಿ ಮಾತನಾಡುತ್ತಾ ಸದಾಚಾರ ನೀತಿ ಸಂಹಿತೆ ಜಾರಿಯಿದ್ದು, ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕು. ಶಾಂತಿಯುತ ಮತದಾನಕ್ಕೆ ಸಂಪೂರ್ಣ ಸಕಲ ಸಿದ್ದತೆಯೊಂದಿಗೆ ಸಜ್ಜಾಗಬೇಕು.
ಅಧಿಕಾರಿಗಳು, ರಾಜಕಾರಿಣಿಗಳೊಂದಿಗೆ ಆತ್ಮೀಯತೆ ಬೇಡ, ಕರ್ತವ್ಯ ನಿಷ್ಠೆಯಿರಲಿ, ಚುನಾವಣೆಗೆ ನೀತಿ ಸಂಹಿತೆ ತಂಡಗಳು ರಾತ್ರಿ, ಹಗಲು ಎನ್ನದೆ ಅಭ್ಯರ್ಥಿಗಳ ಪ್ರಚಾರ, ಅಕ್ರಮ ಬಗ್ಗೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರಬೇಕು. ಚುನಾವಣೆ ಮುಗಿಯವವರೆವಿಗೂ ಅಧಿಕಾರಿಗಳು ಕ್ಷೇತ್ರ ಬಿಡುವಂತಿಲ್ಲ, ಕೇಂದ್ರ ಸ್ಥಾನದಲ್ಲೇ ಇರಬೇಕು.
ಕ್ಷೇತ್ರದಲ್ಲಿ ಬ್ಯಾನರ್, ಪೋಸ್ಟರ್, ಬ್ಯಾಡ್ಜ್ಗಳು ಎಲ್ಲೂ ಹಾಕುವಂತಿಲ್ಲ. ಎಲ್ಲಾದರೂ ಕಂಡು ಬಂದರೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿರ್ಭಯವಾಗಿ ಕರ್ತವ್ಯ ನಿರ್ವಹಿಸಿ, ಸಮಸ್ಯೆಯಾದರೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು.
ಮೂಲಸೌಕರ್ಯಗಳಿರಲಿ: ಕ್ಷೇತ್ರದಲ್ಲಿ 288 ಮತಗಟ್ಟೆಗಳಿದ್ದು, ಮತಕೇಂದ್ರಗಳಲ್ಲಿ ವಿದ್ಯುತ್, ಕುಡಿಯುವ ನೀರು ಶೌಚಾಲಯ, ಹಾಗು ರಸ್ತೆ ಉತ್ತಮ ಸ್ಥಿತಿಯಲ್ಲಿರುವಂತೆ ದುರಸ್ಥಿಪಡಿಸುವುದು, ಮತಯಂತ್ರಗಳ ಬಗ್ಗೆ ಪೂರ್ಣ ಮಾಹಿತಿ ಇರಲಿ, ಮತಕೇಂದ್ರಕ್ಕೆ ತೆರಳುವ ಮುನ್ನಾವೇ ಪರಿಶೀಲಿಸಿಕೊಳ್ಳಬೇಕು. ಯಂತ್ರಗಳು ಕೈಕೊಟ್ಟರೆ ಕೂಡಲೆ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಮತದಾನ ವೇಳೆ ಪ್ರತಿ 2 ಗಂಟೆಗಳಿಗೊಮ್ಮೆ ಚುನಾವಣಾಧಿಕಾರಿಗಳಿಗೆ ಮೊಬೈಲ್ ಮೂಲಕ ಮಾಹಿತಿ ನೀಡುತ್ತಿರಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಮತಕೇಂದ್ರದಿಂದ ಕನಿಷ್ಠ 200 ಮೀ. ಸಮೀಪದಲ್ಲಿ ಯಾವುದೇ ಚಟುವಟಿಕೆಗಳು ನಡೆಯದಂತೆ ಎಚ್ಚರವಹಿಸಬೇಕು. ಪೋಲೀಸ್ ಸಿಬ್ಬಂದಿಗಳು ಉತ್ತಮವಾಗಿ ಕರ್ತವ್ಯ ನಿರ್ವಹಿಸದರೆ ಯಾವುದೇ ಅಹಿತಕರ ಘಟನೆ ನಡೆಯಲ್ಲ. ಮತಕೇಂದ್ರಕ್ಕೆ ಮತದಾರರಿಗೆ ಯಂತ್ರದ ಬಗ್ಗೆ ಮಾಹಿತಿಯಿರಲಿ. ಬಹುತೇಕ ಗ್ರಾಮೀಣ ಭಾಗದಲ್ಲಿನ ಮತದಾರರಿಗೆ ಮತಯಂತ್ರಗಳ ಬಗ್ಗೆ ಅರಿವಿಲ್ಲ, ಅಧಿಕಾರಿಗಳು ಆಯಾ ಗ್ರಾಮೀಣ ಭಾಗಗಳಲ್ಲಿ ಸಂತೆಗಳಲ್ಲಿ ಮತಯಂತ್ರಗಳ ಬಗ್ಗೆ ಜನಜಾಗೃತಿ ಮೂಡಿಸಬೇಕು. ಕಡ್ಡಾಯ ಮತದಾನಕ್ಕೆ ಪ್ರೇರೇಪಿಸಬೇಕು ಎಂದರು.
ನಿಷಿದ್ಧ: ಗ್ರಾಮಲೆಕ್ಕಾಧಿಕಾರಿಗಳ ಸಹಾಯ ಪಡೆದು ತಿಂಡಿ ಊಟ, ಕಾಫಿ ಪಡೆಯಿರಿ. ಗ್ರಾಮದ ಮತದಾರರ ಮನೆಯ ಊಟವಾಗಲಿ, ರಾಜಕೀಯ ಮುಖಂಡರ ಅಭ್ಯರ್ಥಿಗಳು ನೀಡುವ ಮದ್ಯ ಮಾಂಸದ ಊಟವನ್ನಾಗಲಿ ಮತಗಟ್ಟೆ ಕೇಂದ್ರದ ಅಧಿಕಾರಿಗಳು ಸೇವಿಸುವಂತಿಲ್ಲ ಎಂದು ವೈಶಾಲಿ ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಡಾ. ಬಿ.ಆರ್. ಹರೀಶ್ ನಾಯಕ್, ತಾ.ಪಂ. ಇಓ ಕೆ.ಬಿ. ಅಕ್ಕೋಜಿ, ಜಿ.ಪಂ.ಎಇಇ ರವಿ ಎಸ್ ನೂರನ್, ಪುರಸಭೆ ಮುಖ್ಯಧಿಕಾರಿ ಆರ್.ಮಂಜುನಾಥ್, ಎಂಸಿಸಿ ಅಧಿಕಾರಿಗಳಾದ ಪಶು ಇಲಾಖೆಯ ಸಹಾಯಕ ನಿರ್ದೇಶಕ ಆರ್. ರಾಜಶೇಖರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಖ ಎಚ್.ಸಿ.ಕೃಷ್ಣಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕಿ ರೂಪಶ್ರೀ ರೆವಿನ್ಯೂ ಅಧಿಕಾರಿಗಳಾದ ಗುರುಲಿಂಗಯ್ಯ, ಮಹದೇವಯ್ಯ, ಮಹಾಲಿಂಗಯ್ಯ, ವಿಜಯಕುಮಾರ್ ಚುನಾವಣಾ ಶಿರಸ್ದೇದಾರ್ ಎನ್.ಶಿವಕುಮಾರ್, ಸುನೀಲ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

