ಕಾಂಗ್ರೆಸ್ ಗೆಲವಿಗೆ ಭಿನ್ನರ ತೊಡಕು
ಆನೇಕಲ್: ರಾಜ್ಯದಲ್ಲಿರುವಂತೆ ಆನೇಕಲ್ ವಿಧಾನ ಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್ ಅಲೆಯಿದ್ದು ಸ್ಥಳೀಯರನ್ನು ಗುರುತಿಸದಿರುವುದು ತೊಡಕಾಗಿ ಕಾಡಬಹುದೆಂದು ಟೌನ್ ಯುವ ಕಾಂಗ್ರೆಸ್ ಅಧ್ಯಕ್ಷ ಭರತ್ ತಿಳಿಸಿದ್ದಾರೆ.
ಯುವ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸತತ 5 ವರ್ಷಗಳಿಂದ ಸ್ಥಳೀಯವಾಗಿ ದುಡಿದಿರುವ ಮುಖಂಡರಿಗೆ ಬಿ ಫಾರಂ ನೀಡಬೇಕಿತ್ತು. ರಾಹುಲ್ ಗಾಂಧಿಯವರ ಯುವಕರಿಗೆ ಪ್ರೋತ್ಸಾಹ ಬರೀ ಮಾತಿನಲ್ಲಿ ಮಾತ್ರ ನಿಂತಿದೆ. ಒಮ್ಮೆ ಆನೇಕಲ್ಲು, ಮತ್ತೊಮ್ಮೆ ಅನ್ಯ ಕ್ಷೇತ್ರದಲ್ಲಿ ಪರಾಜಯಗೊಂಡ ವ್ಯಕ್ತಿಗೆ ಟಿಕೆಟ್ ನೀಡುವ ಬದಲು ಸಂಘಟನೆ, ಯುವ ಜನತೆಯ ಆಶಯಗಳಿಗೆ ಸ್ಪಂದಿಸುವ ಆನೇಕಲ್ ಕೇಶವ ಅಥವಾ ತಾಪಂ ಮಾಜಿ ಅಧ್ಯಕ್ಷ ಹಾಗೂ ಜಿಪಂ ಸದಸ್ಯ ಕೆ.ಸಿ. ರಾಮಚಂದ್ರ ಅವರಿಗೆ ನೀಡಬಹುದಿತ್ತು. ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರು ಮತ್ತೊಮ್ಮೆ ಅಂತಿಮ ಪಟ್ಟಿಯನ್ನು ಪರಾಮರ್ಶಿಸಬೇಕೆಂದು ಆಗ್ರಹಿಸಿದ ಅವರು ಯುವ ಜನತೆ ಭಿನ್ನ ಮತ ಚಟುವಟಿಕೆಯಲ್ಲಿ ತೊಡಗಿಕೊಳ್ಳುವ ಮುನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದರು. ಪದಾಧಿಕಾರಿಗಳಾದ ರಘು , ಶಿವಣ್ಣ, ಸಯ್ಯದ್, ಇಮ್ರಾನ್, ಕಾಂತರಾಜು, ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

