ಜಾಫರ್ ಜೆಡಿಎಸ್ ಸೇರಿದ್ರೆ ಡಿಸಿಎಂ ಹುದ್ದೆ
ಕುದೂರು ಜೆಡಿಎಸ್ ಅಲ್ಪಸಂಖ್ಯಾತರ ಸಮಾವೇಶದಲ್ಲಿ ಜಮೀರ್ ಆಹ್ವಾನ
ಕ.ಪ್ರ.ವಾರ್ತೆ ಮಾಗಡಿ ಏ.10
ಹಿರಿಯ ರಾಜಕೀಯ ಮುತ್ಸದ್ಧಿ, ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರು ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಜೆಡಿಎಸ್ಗೆ ಬರುವುದಾದರೆ ಶರೀಫ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಅವರ ಕನಸನ್ನು ನನಸು ಮಾಡುತ್ತೇವೆ ಎಂದು ಶಾಸಕ ಜಮೀರ್ ಅಹಮದ್ ಜಾಫರ್ ಶರೀಫ್ ಅವರಿಗೆ ಆಹ್ವಾನ ನೀಡಿದ್ದಾರೆ.
ಅವರು ತಾಲೂಕಿನ ಕುದೂರಿನಲ್ಲಿ ಬುಧವಾರ ಜೆಡಿಎಸ್ ಏರ್ಪಡಿಸಿದ್ದ ತಾಲೂಕು ಮಟ್ಟದ ಅಲ್ಪಸಂಖ್ಯಾತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಜಾಫರ್ ಶರೀಫ್ ಅವರು ಜವಾಹರಲಾಲ್ ನೆಹರು, ಇಂದಿರಾಗಾಂಧಿ ಅವರ ಕಾರು ಚಾಲಕನಾಗಿ ಅವಿರತವಾಗಿ ದುಡಿದು, ನಂತರ ಕಾಂಗ್ರೆಸ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇಂದ್ರ ಮಂತ್ರಿಯಾಗಿ ದುಡಿದಿದ್ದಾರೆ. ಅಂತಹವರಿದೆ ಕಾಂಗ್ರೆಸ್ ಇಂದು ಅನ್ಯಾಯ ಮಾಡಿದೆ. ಈಗ ಶರೀಫ್ ಮೊಮ್ಮಗನಿಗೆ ಬೆಂಗಳೂರಿನ ಹೆಬ್ಬಾಳದಿಂದ ಟಿಕೆಟ್ ನೀಡುವಂತೆ ಕಾಂಗ್ರೆಸ್ಗೆ ಅರ್ಜಿ ಸಲ್ಲಿಸಿದ್ದರೂ ಟಿಕೆಟ್ ನೀಡದೆ ಅನ್ಯಾಯ ಮಾಡಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತೊರೆದು ಅವರು ಜೆಡಿಎಸ್ಗೆ ಬರುವುದಾದರೆ ಅವರನ್ನು ಸ್ವಾಗತಿಸುವ ಮೂಲಕ ಉಪಮುಖ್ಯಮಂತ್ರಿ ಸ್ಥಾನ ನೀಡಲು ಎಚ್ಡಿಕೆ ಅವರಿಗೆ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.
ಜೆಡಿಎಸ್ನಲ್ಲಿ ಕುಮಾರಣ್ಣ, ಜಮೀರಣ್ಣ, ಚಲುವಣ್ಣ, ಪುಟ್ಟಣ್ಣ, ಬಾಲಣ್ಣ ಪಂಚ ಪಾಂಡವರಿದ್ದಂತೆ, ಅಲ್ಪಸಂಖ್ಯಾತರ ಜೆಡಿಎಸ್ ಸಾಕಷ್ಟು ಶ್ರಮಿಸಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ ಅವರಿಗೆ ಅಲ್ಪಸಂಖ್ಯಾರು ಬಹುಮತ ನೀಡುವ ಮೂಲಕ ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿದಷ್ಟು ಸಂತೋಷ ಪಡುತ್ತೇನೆ ಎಂದು ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರಲ್ಲಿ ಮತ ಯಾಚಿಸಿದರು.
ಶಾಸಕ ಎಚ್.ಸಿ. ಬಾಲಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದೇನೆ. ಗ್ರಾಮ ಪಂಚಾಯ್ತಿಯಿಂದ ಜಿಲ್ಲಾ ಪಂಚಾಯ್ತಿ ವರೆವಿಗೂ ಸ್ಥಾನಮಾನ ನೀಡಿ ಗೌರವಿಸಿದ್ದೇನೆ.
ಅಲ್ಪಸಂಖ್ಯಾತರ ಕಲ್ಯಾಣ್ಕಕಾಗಿ ನನ್ನ ತಾಯಿ ಹೆಸರಿನಲ್ಲಿದ್ದ 20 ಗುಂಟೆ ಜಮೀನನ್ನು ಉಚಿತವಾಗಿ ನೀಡಿದ್ದು, ಒಂದು ಕೋಟಿ ರು ವೆಚ್ಚದಲ್ಲಿ ಸುಂದರವಾದ ಶಾದಿ ಮಹಲ್ ನಿರ್ಮಾಣಕ್ಕಾಗಿ ಈಗಾಗಲೇ ರು.10 ಲಕ್ಷ ಮಂಜೂರಾತಿ ಮಾಡಿಸಿದ್ದೇನೆ. ಅಲ್ಪಸಂಖ್ಯಾತರು ಹೆಚ್ಚಿನ ಮತ ನೀಡುವ ಮೂಲಕ ಮತ್ತೊಮ್ಮೆ ನನ್ನನ್ನು ಶಾಸಕನ್ನಾಗಿ ಆಯ್ಕೆ ಮಾಡುವಂತೆ ಬಾಲಕೃಷ್ಣ ಮತಯಾಚಿಸಿದರು. ಇದೆ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರುಜೆಡಿಎಸ್ ಸೇರ್ಪಡೆಗೊಂಡರು.
ಜಿಪಂ ಅಧ್ಯಕ್ಷ ಮುದ್ದುರಾಜ ಯಾದವ್, ಸದಸ್ಯರಾದ ಎಂ.ಕೆ.ಧನಂಜಯ, ಹಂಸಕುಮಾರಿ, ತಾ.ಪಂ.ಅಧ್ಯಕ್ಷ ಬಿ.ಟಿ.ವೆಂಕಟೇಶ್, ಮಾಜಿ ಅಧ್ಯಕ್ಷ ಜಿ.ವಿ.ರಾಮಣ್ಣ, ಕುದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಹನುಮಂರಾಯಪ್ಪ, ಮಹಮದ್ ್ಯಾಸಿನ್, ತಾ.ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ತಾಲೂಕು ಜೆಡಿಎಸ್ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಇನಾಯಿತ್ ಉಲ್ಲಾ, ತಾಪಂ ಉಪಾಧ್ಯಕ್ಷೆ ಅನಿಸಾಖಾನ್, ಉದ್ದೀಶ್, ವೀರಪ್ಪ, ಫೈರೋಜ್, ನವಾಬ್, ಇಲಿಯಾಜ್, ಅಜಾಮ್ಪಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

