ಆನೇಕಲ್ ಚುನಾವಣೆ: ಸಂಚಾರಿ ಜಾಗೃತಿ ದಳ
ಕ.ಪ್ರ.ವಾರ್ತೆ ಆನೇಕಲ್ಲು ಏ.13
ಆನೇಕಲ್ ವಿಧಾನ ಸಭಾ ಚುನಾವಣೆ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ನಡೆಯಲು ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಶಿವೇಗೌಡ ತಿಳಿಸಿದ್ದಾರೆ.
ಆನೇಕಲ್ ಪಟ್ಟಣ, ಕಸಬ, ಅತ್ತಿಬೆಲೆ ಹಾಗೂ ಸರ್ಜಾಪುರ ಹೋಬಳಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು 8 ಅಧಿಕಾರಿಗಳ ಸಂಚಾರಿ ಜಾಗೃತ ದಳವನ್ನು ನೇಮಿಸಲಾಗಿದೆ. ಪ್ರತಿ ತಂಡದಲ್ಲೂ ಒಬ್ಬ ಅಬಕಾರಿ ಅಧಿಕಾರಿ ಹಾಗೂ ನಾಲ್ವರು ಪೊಲೀಸರಿದ್ದು ಸ್ಥಳೀಯ ಪಿಡಿಒ ಅವರನ್ನು ಒಳಗೊಂಡಿರುತ್ತದೆ. ಹಾಗೂ ಈ ತಂಡದ ನೇತೃತ್ವವನ್ನು ಸ್ಥಳೀಯ ಅಧಿಕಾರಿಗೆ ನೀಡಲಾಗಿದೆ. ಈ ತಂಡವು ದಿನದ 24 ಗಂಟೆ ಮಾಹಿತಿ ಸ್ವೀಕಾರ ಹಾಗೂ ಕ್ರಮ ವಹಿಸಲು ಯೋಜಿತರಾಗಿದ್ದು ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬಹುದು ಎಂದಿದ್ದಾರೆ.
ಆನೇಕಲ್ ಕಸಬ: ತಾಲೂಕು ಪಂಚಾಯ್ತಿ ವಿಸ್ತರಣಾಧಿಕಾರಿ ಡಾ. ವೀರಭದ್ರಪ್ಪ, (98807 68148), ಪುರಸಭಾ ಮುಖ್ಯಾಧಿಕಾರಿ ಸುಮಾ, ಅಬಕಾರಿ ಉಪ ನಿರೀಕ್ಷಕ ಪುಟ್ಟರಂಗಯ್ಯ, ಮರಸೂರು ಪಿಡಿಒ ಮುರಳಿ ಹಾಗೂ ನಾಲ್ವರು ಪೊಲೀಸರು.
ಅತ್ತಿಬೆಲೆ ಹೋಬಳಿ: ಜವರೇಗೌಡ, ವಲಯ ಅರಣ್ಯಾಧಿಕಾರಿ (90084 73212), ವೀರಪ್ಪ, ಅಬಕಾರಿ ಉಪನಿರೀಕ್ಷಕ, ಜೋಸೇಫ್ ಪಿಡಿಒ ಚಂದಾಪುರ, ನಾಲ್ವರು ಪೊಲೀಸರು.
ಸರ್ಜಾಪುರ ಹೋಬಳಿ: ಪ್ರಸನ್ನ ಕುಮಾರ್ ಎಇಇ ಜಿಲ್ಲಾ ಪಂಚಾಯ್ತಿ(87624 07584) ನರಸಿಂಹರಾಜು ಅಬಕಾರಿ ಉಪನಿರೀಕ್ಷಕ, ಸೂರ್ಯನಗರ ಚಂದಾಪುರ, ಗಂಗಾಧರ್ ಪಿಡಿಒ ಸರ್ಜಾಪುರ ಹಾಗೂ ನಾಲ್ವರು ಪೊಲೀಸರು.
ಇದಲ್ಲದೇ ವಿವಿಧ ಇಲಾಖೆಗಳ ಜಾಗೃತ ದಳದವರು ಅಭ್ಯರ್ಥಿ ಹಾಗೂ ಪಕ್ಷದ ವೆಚ್ಚಗಳ ಬಗ್ಗೆ ನಿಗಾ ವಹಿಸಲು ಯೋಜಿತರಾಗಿದ್ದಾರೆ. ಅಭ್ಯರ್ಥಿಗಳು ಪ್ರಚಾರಕ್ಕಾಗಿ ಪರವಾನಗಿ ಪಡೆದು ನಿರ್ದಿಷ್ಟ ಸಮಯ ಹಾಗೂ ಸ್ಥಳವನ್ನು ನಮೂದಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದೂ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

