ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯಲ್ಲಿ ದಲಿತ ವೇದಿಕೆಯಿಂದ ಆಚರಣೆ

Published On :

ದೇವನಹಳ್ಳಿ: ದೇವನಹಳ್ಳಿ ತಾಲೂಕು ಕರ್ನಾಟಕ ದಲಿತ ವೇದಿಕೆಯಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಇಲ್ಲಿನ ಅಂಬೇಡ್ಕರ್  ಪ್ರತಿಮೆಗೆ ಹಾರ ಹಾಕಿ ಗೌರವ ಸಮರ್ಪಣೆ ಮಾಡುವ ಮೂಲಕ ಆಯೋಜಿಸಿದ್ದರು. ದಲಿತ ವೇದಿಕೆ ರಾಜ್ಯಾಧ್ಯಕ್ಷ ಹರಳೂರು ದೇವರಾಜ್  ಮಾತನಾಡಿ ಚುನಾವಣೆಗಳು ಬಂದಾಗ ಮಾತ್ರ ದಲಿತರನ್ನು ನಂಬಿಸಿ ಭರವಸೆಗಳನ್ನು ನೀಡಿ  ಮತಗಳನ್ನು ಪಡೆದು ಅಧಿಕಾರಕ್ಕೆ ಬರುತ್ತಾರೆ. ದಲಿತರನ್ನು ಹೀನಾಯವಾಗಿ ಕಾಣುವ ರಾಜಕೀಯ ಪಕ್ಷಗಳಿಗೆ ಈ ಬಾರಿ ನಡೆಯುವ ಚುನಾವಣೆಯಲ್ಲಿ ದಲಿತ ಮತ್ತು ಹಿಂದುಳಿದ ಜನರ ಪರವಾಗಿ ಕೆಲಸ ಮಾಡುವ ಸೂಕ್ತ ಅಭ್ಯರ್ಥಿಗಳನ್ನು ಗೆಲ್ಲಿಸಲು ವೇದಿಕೆ ಕಾರ್ಯಕರ್ತರಿಗೆ ಸೂಚಿಸಿದರಲ್ಲದೆ ಡಾ.ಅಂಬೇಡ್ಕರ್ ಕನಸು ನನಸಾಗಬೇಕಿದೆ ಎಂದರು. ರಾಜ್ಯ ಖಜಾಂಚಿ ಇ.ನರಸಿಂಹಯ್ಯರವರು ಮಾತನಾಡಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ  ರಂಗನಾಥಪುರ ರಮೇಶ್, ಸಾವುಕನಹಳ್ಳಿ ದೊಡ್ಡರಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಬಿಜ್ಜವಾರ ಮುನಿಯಪ್ಪ, ತಾಲೂಕು ಅಧ್ಯಕ್ಷರಾದ ದೊಡ್ಡಚೀಮನಹಳ್ಳಿ ಆಂಜಿನಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.