'ವೆಲ್ಫೇರ್ ಪಾರ್ಟಿ' ಅಭ್ಯರ್ಥಿಗಳ ಪಟ್ಟಿ ಪ್ರಕಟ
ಕ.ಪ್ರ.ವಾರ್ತೆ , ಬೆಂಗಳೂರು , ಏ.15
ಚುನಾವಣೆಯಲ್ಲಿ ಹಣ ಮತ್ತು ಹೆಂಡ ಹಂಚುವುದರ ವಿರೋಧಿ ನಿಲುವು ತಳೆದಿರುವ 'ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ' ಸೋಮವಾರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಇಬ್ರಾಹಿಂ ಅವರು, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಸೇರಿದಂತೆ 16 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದರು. ಈ ಬಾರಿ ಚುನಾವಣಾ ಆಯೋಗ ಹಿಂದೆಂದಿಗಿಂತಲೂ ಕಟ್ಟುನಿಟ್ಟಾಗಿ ಚುನಾವಣೆ ನಡೆಸುತ್ತಿದ್ದು, ಇದನ್ನು ನೋಡಿದರೆ, ಅಕ್ರಮಗಳನ್ನು ನಡೆಸುವವರಿಗೆ ಅವಕಾಶವಿಲ್ಲ. ಹೀಗಾಗಿ ನಮ್ಮಂಥ ಇತರ ಪಕ್ಷಗಳು ಗೆಲ್ಲುವುದಕ್ಕೆ ಉತ್ತಮ ವಾತಾವರಣವಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇದೇವೇಳೆ ಮಾತನಾಡಿದ ಬಿ.ಟಿ.ಲಲಿತನಾಯಕ್, ಎಲ್ಲಾ ಪಕ್ಷಗಳಲ್ಲೂ ಜೈಲು, ಜಾಮೀನು ಎನ್ನುವುದು ಸಹಜವಾಗಿದೆ. ಆದ್ದರಿಂದ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮುನ್ನ ಮೊದಲು ಜರಡಿ ಹಿಡಿಯಬೇಕಿದೆ. ಇಲ್ಲವಾದರೆ ಮುಂದೆ ಅಪಾಯ ಎದುರಿಸಬೇಕಾಗುತತ್ತದೆ ಎಂದರು. ಹಿಂದೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವಧಿಯಲ್ಲಿ ನನ್ನ ಚುನಾವಣೆ ಖರ್ಚಿಗೆ ಪಕ್ಷ ನೀಡಿದ ಮೊತ್ತ 2 ಲಕ್ಷ. ಅದರೊಂದಿಗೆ ನನ್ನಲ್ಲಿದ್ದ 1ಲಕ್ಷ ವೆಚ್ಚ ಮಾಡಿ ಗೆಲುವು ಸಾಧಿಸಿದ್ದೆ. ಆಗ ಅಭ್ಯರ್ಥಿಗಳು ಜನರಿಗೆ ಹಣ ನೀಡಲು ಹೆದರುತ್ತಿದ್ದರು. ಹಾಗೆಯೇ ಜನ ಕೂಡ ಹಣ ಪಡೆಯಲು ನಾಚುತ್ತಿದ್ದರು. ಆದರೆ, ಈಗ ಇಬ್ಬರಿಗೂ ನಾಚಿಕೆಯೂ ಇಲ್ಲ. ಭಯವೂ ಇಲ್ಲ. ಹೀಗಾಗಿ ಆಮಿಷ ಹೆಚ್ಚುತ್ತಿದೆ ಎಂದು ಹೇಳಿದರು. ಪಕ್ಷದ ಸಂಚಾಲಕ ಮುಸ್ತಫಾ ಬೇಗ್ ಹಾಜರಿದ್ದರು.
ಲಲಿತಾ ನಾಯಕ್ ಸೇರಿ 16 ಮಂದಿ ಕಣಕ್ಕೆ
ಮಲ್ಲೇಶ್ವರ ಬಿ.ಟಿ.ಲಲಿತಾ ನಾಯಕ್,
ಹೆಬ್ಬಾಳ ಮಹಮ್ಮದ್ ಇಬ್ರಾಹಿಂ
ಯಲಹಂಕ ಸಿ.ಕೆ.ಶಫಿಕ್ ಅಹಮ್ಮದ್
ಸರ್ವಜ್ಞನಗರ ಮುಫ್ತಿ ಶಕೀರ್ ಅಲಿ
ಚಿಕ್ಕನಾಯಕನಹಳ್ಳಿ ಹನುಮಂತ ರಾಮ ನಾಯಕ್
ಗುಲ್ಬರ್ಗಾ ಉತ್ತರ ಅಬ್ದುಲ್ ಹಮೀದ್ ಫರಾನ್
ಚಿತ್ತಾಪುರ ಧನಲಕ್ಷ್ಮೀ ರಾಠೋಡ್
ಬದಾಮಿ ತಜುದ್ದೀನ್ ಸಾಬ್
ಬಾಗಲಕೋಟೆ ನೀಲಾ ನಾಯಕ್
ನರಸಿಂಹರಾಜ ಮಹಮ್ಮದ್ ತಹೀರ್ ಅಲಿ
ಬಿಜಾಪುರ ನಗರ ಅಭಿವಿಕಾಸ್ ಪಿರ್ಜಾದೆ
ದೇವರ್ ಹಿಪ್ಪಗಿರಿ ಸಯ್ಯೀದ್ ಇರ್ಫಾನುಲ್ಲಾ ಮುನ್ಷಿ
ಬಸವನಬಾಗೇವಾಡಿ ನಜೀರ್ ಮಹಮದ್ ಹನೀಫ್ ದುಂದ್ಸಿ
ಕುದುರು ಕುಮಾರ್ನಾಯಕ್
ಬಸವ ಕಲ್ಯಾಣ ಸರದಾರ್ ಖಾನ್
ತುಮಕೂರು ತಜುದ್ದೀನ್ ಶರೀಫ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

