ಬೆಂಗಳೂರು ಗ್ರಾಮಾಂತರ

ಅಕ್ರಮ ಮದ್ಯ ವಶ

Published On :

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ದೊಡ್‌ಡಬೆಳವಂಗಲ ಹೋಬಳಿಯ ಹುಲಿಕುಂಟೆ ಗ್ರಾಮದಲ್ಲಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಮೂರುವರೆ ಕೇಸು ಅಕ್ರಮ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳ ಮೂಲದ ಕೆಲವರು ವಾಸ ಮಾಡುತ್ತಿದ್ದ ಮನೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಬಾಟಲಿ ಮದ್ಯವನ್ನು ಸಂಗ್ರಹಿಸಿಡಲಾಗಿತ್ತು. ಮನೆಯವರ ವಿಚಾರಣೆ ನಡೆದಿದ್ದು, ಮದ್ಯದ ಸಂಗ್ರಹ ಉದ್ದೇಶ ಕುರಿತು ಮಾಹಿತಿ ಲಭ್ಯವಾಗಿಲ್ಲ.

ವಿಫಲ ಸಂಧಾನ: ನಡೆಯದ ಕರಗ
ಆನೇಕಲ್ಲು: ಬೆಂಗಳೂರು ದಕ್ಷಿಣ ಜಿಗಣಿಯಲ್ಲಿ ಹತ್ತಾರು ವರ್ಷಗಳಿಂದ ವೈಭವೋಪೇತವಾಗಿ ನಡೆಯುತ್ತಿದ್ದ ಕರಗ ಮಹೋತ್ಸವವು ಎರಡು ಕುಟುಂಬಗಳ ನಡುವಿನ ವೈಯುಕ್ತಿಕ ಕಾರಣಕ್ಕಾಗಿ ನಡೆಯದೇ ಜನರ ಕೋಪ ಹಾಗೂ ಶಾಪಕ್ಕೆ ಬಲಿಯಾಗಿದೆ.  ಭಾನುವಾರ ಬೆಳಗಿನ ಜಾವ ಜಿಗಣಿಯಲ್ಲಿ ನಡೆಯಬೇಕಿದ್ದ ಕರಗ ಮಹೋತ್ಸವವನ್ನು ಕಣ್ತುಂಬಿಸಿಕೊಳ್ಳಲು ಸಹಸ್ರಾರು ಜನ ರಾತ್ರಿಯಿಡೀ ಕಾದು ಕುಳಿತಿದ್ದರು.  ಜಿಗಣಿ ಪಟ್ಟಣವೇ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ವೈಭವಕ್ಕೆ ಸಾಕ್ಷಿಯಾಗಿತ್ತು. ಇನ್ನೇನು ಕರಗ ಹೊತ್ತ ದ್ರೌಪತಿ ದೇವಿ ದೇಗುಲದಿಂದ ಹೊರಬರುತ್ತಾರೆಂದು ಮಲ್ಲಿಗೆ ಮೊಗ್ಗುಗಳನ್ನು ಅಂಗೈಯ್ಯಲ್ಲಿ ತುಂಬಿಕೊಂಡು ಕಾದು ಕುಳಿತ ಜನರು ನಿರಾಸೆಯಾಗಿ ಕೈ ಚೆಲ್ಲಿ ಮನೆಗೆ ತೆರಳಬೇಕಾಯಿತು.

ರು. 9.30 ಲಕ್ಷ ನಗದು ವಶ
ರಾಮನಗರ: ಕನಕಪುರ ಕ್ಷೇತ್ರದ ಹೊನ್ನಿಗಾನಹಳ್ಳಿ ಚೆಕ್ ಪೋಸ್ಟ್‌ಬಳಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರು.9.30 ಲಕ್ಷ ನಗದನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದ್ದಾರೆ.

ಎರಡು ಸಂಚಾರಿ ವಾಹನ ಜಪ್ತಿ
ಕನಕಪುರ:  ಕನಕಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಂಗ್ರೆಸ್ ಪರವಾಗಿ ಸಾಕ್ಷ್ಯಚಿತ್ರಗಳ ಪ್ರದರ್ಶನ ನಡೆಸುತ್ತಿದ್ದ ಎರಡು ಸಂಚಾರಿ ವಾಹನಗಳನ್ನು ಚುನಾವಣಾಧಿಕಾರಿಗಳು ಜಫ್ತಿಮಾಡಿ ಪೊಲೀಸರಿಗೆ ನೀಡಿದ ಘಟನೆ ನಡೆದಿದೆ. ಶಾಸಕ ಡಿ.ಕೆ. ಶಿವಕುಮಾರ್ ತಮ್ಮ ಕ್ಷೇತ್ರಾಭಿವೃದ್ಧಿ ಸಾಧನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನರಿಗೆ ಪ್ರಚಾರ ಮಾಡುವ ಸಲುವಾಗಿ ನೆರೆಯ ಆಂಧ್ರ, ಮಹಾರಾಷ್ಟ್ರ, ಮಧ್ಯಪ್ರದೇಶಗಳಿಂದ ಒಟ್ಟಾರೆ ನಾಲ್ಕು ಬೃಹತ್ ಪರದೆಯ ಪ್ರದರ್ಶನ ವಾಹನಗಳನ್ನು ತರಿಸಿ ನಾಲ್ಕೈದು ದಿನಗಳಿಂದ ಹಳ್ಳಿಹಳ್ಳಿಗಳಲ್ಲಿ ಪ್ರಚಾರ ನಡೆಸಿದ್ದರು.  ಅವುಗಳಲ್ಲಿ ಎರಡು ವಾಹನಗಳಿಗೆ ಚುನಾವಣಾಧಿಕಾರಿಗಳ ಪರವಾನಗಿ ಇಲ್ಲದ ಕಾರಣ ಚುನಾವಣಾ ವಿಚಕ್ಷಣಾಧಿಕಾರಿಗಳು ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.