ಬೆಂಗಳೂರು ಗ್ರಾಮಾಂತರ

ಮಹಿಳೆ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು

Published On :

ರಾಮನಗರ: ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಬೆಂಗಳೂರಿನ ಹೇರೋಹಳ್ಳೀ ಸಿಂಡಿಕೇಟ್ ಬ್ಯಾಂಕ್ ಕಾಲೋನಿ ಬಯಲು ಪ್ರದೇಶದಲ್ಲಿ 2 ತಿಂಗಳ ಹಿಂದೆ ಸಂಭವಿಸಿದ್ದ ಮಹಿಳೆ ಕೊಲೆ ಯತ್ನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.  ವೇಶ್ಯಾವಾಟಿಕೆ ಹಿನ್ನೆಲೆಯಲ್ಲಿ ನಡೆದ ಆ ಘಟನೆ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಕಳೆದ ಫೆ.4ರ ರಾತ್ರಿ ಹೇರೋಹಳ್ಳಿಯ ನಿರ್ಜನ ಪ್ರದೇಶದಲ್ಲಿ  ಅಪರಿಚಿತ ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಯತ್ನ ನಡೆದಿತ್ತು. ತೀವ್ರ ರಕ್ತಸ್ರಾವದೊಂದಿಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೀರ್ಘ ಕಾಲದ ಚಿಕಿತ್ಸೆ ಬಳಿಕ  ಚೇತರಿಸಿಕೊಂಡ ಆಕೆ ನೀಡಿದ ಮಾಹಿತಿ ಮೇರೆಗೆ ಆರೋಪಿ ಪತ್ತೆ ಹಚ್ಚಲಾಗಿದೆ. ಬೆಂಗಳೂರಿನ ಯಶವಂತಪುರದ ತಿಗಳರ ಪಾಳ್ಯದ ದೊರೆ ಅಲಿಯಾ ಕಪ್ಪಲ್(35) ಬಂಧಿತ ಆರೋಪಿ. ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ತಮಿಳುನಾಡು ಮೂಲದ ಆತ ಹಣ ನೀಡುವುದಾಗಿ ವೇಶ್ಯೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಲೈಂಗಿಕ ಸಂಪರ್ಕದ ಬಳಿಕ ಮಹಿಳೆಯರ ಬಳಿಯಿದ್ದ ನಗದು, ಮೊಬೈಲ್ ದೋಚುವ ಕೃತ್ಯದಲ್ಲಿ ತೊಡಗಿದ್ದ ಎನ್ನಲಾಗಿದೆ. ಮೊದಲ ಹಂತದಲ್ಲಿ ಗಾಯಾಳು ಹೆಸರನ್ನು ಮಾತ್ರವೇ ಬಹಿರಂಗಪಡಿಸಿದ್ದಳು. ಚೇತರಿಕೆ ನಂತರ ಘಟನೆಯ ಸಂಪೂರ್ಣ ವಿವರವನ್ನು ಪೊಲೀಸರಿಗೆ ತಿಳಿಸಿದ್ದು, ಆ ಮೇರೆಗೆ ಪ್ರಕರಣದ ಬೆನ್ನುಹತ್ತಿ ಆರೋಪಿ ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮರ್ಬ್ಯಾನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಡಿವೈಎಸ್ಪಿ ರಾಮಲಿಂಗಪ್ಪ ನೇತೃತ್ವದಲ್ಲಿ ಈ ಪ್ರಕರಣ ಪತ್ತೆಗೆ ಸಿಪಿಐಗಳಾದ ಕೃಷ್ಣಕುಮಾರ್, ಭಾಸ್ಕರ್ ಒಕ್ಕಲಿಗ, ಮಂಜುನಾಥ್, ಸಬ್ ಇನ್ಸ್‌ಪೆಕ್ಟರ್‌ಗಳಾದ ವಿರುಪಾಕ್ಷಸ್ವಾಮಿ, ರವಿ, ಪ್ರವೀಣ್ ಬಾಬು, ದೀಪಕ್, ಭಾಸ್ಕರ್, ಯೋಗಾನಂದ ಸೋನಾರ್, ವಸಂತಕುಮಾರ್ ಮತ್ತು ಸಿಬ್ಬಂದಿ ಶ್ರಮಿಸಿದ್ದಾರೆ ಎಂದರು.

ಕೊಲೆ ಪ್ರಕರಣ: ನಾಲ್ವರ ಬಂಧನ
ರಾಮನಗರ: ತಾಲೂಕಿನ ಬಿಡದಿಯಲ್ಲಿ ಕಳೆದ ತಿಂಗಳು ನಡೆದಿದ್ದ ಬಸ್ ಏಜೆಂಟ್ ಮೇಡನಹಳ್ಳಿ ಮಂಜ ಅಲಿಯಾಸ್ ಮಂಜುನಾಥನ ಕೊಲೆ ಪ್ರಕರಣ ಭೇದಿಸಿರುವ ಬಿಡದಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಬಿಡದಿಯ ಮಂಜುನಾಥ್ ಅಲಿಯಾಸ್ ಕಡ್ಲೆ ಮಂಜ, ಮೂಗ ಅಲಿಯಾಸ್ ಕುಮಾರ, ಚಲುವರಾಜ, ರಾಜೇಶ ಬಂಧಿತ ಆರೋಪಿಗಳು. ಕಳೆದ ಮಾ.26ರ ನಸುಕಿನಲ್ಲಿ ಮೇಡನಹಳ್ಳಿ ಮಂಜನನ್ನು ಕೊಲೆ ಮಾಡಲಾಗಿತ್ತು. ಕಡ್ಲೆ ಮಂಜ ಮತ್ತು ಕುಮಾರನಿಂದ ರು.20 ಸಾವಿರಕ್ಕೆ ಸುಫಾರಿ ಪಡೆದಿದ್ದ ಚಲುವರಾಜ, ರಾಜೇಶ ಬಿಡದಿಯ ಬುಷ್ರಾ ಹೋಟೆಲ್ ಬಳಿ ಮೇಡನಹಳ್ಳಿ ಮಂಜನನ್ನು ಕೊಲೆ ಮಾಡಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.