ಕೃಷ್ಣಬೈರೇಗೌಡ ಪರ ನಟಿ ರಮ್ಯಾ ಮತ್ತಿತರರ ಪ್ರಚಾರ
ಕ.ಪ್ರ.ವಾರ್ತೆ ಯಲಹಂಕ ಏ.24
ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡರ ಪರವಾಗಿ ಕೇರಳ ಮುಖ್ಯಮಂತ್ರಿ ಓಮನ್ ಚಾಂಡಿ, ಕೇಂದ್ರ ಸಚಿವ ಕೆ.ಸಿ.ವೇಣುಗೋಪಾಲ್ ಹಾಗೂ ಚಿತ್ರನಟಿ ರಮ್ಯಾ ಪ್ರಚಾರ ನಡೆಸಲಿದ್ದಾರೆ.
ವೇಣುಗೋಪಾಲ್ ಅವರು ಏ.25, ರಮ್ಯಾ 28 ಮತ್ತು ಓಮನ್ ಚಾಂಡಿ ಅವರು 29ರಂದು ಪ್ರಚಾರ ನಡೆಸಲಿದ್ದಾರೆ.
ಬೆಂಗಳೂರಿಗೆ ಕೆಟ್ಟ ಹೆಸರು: ಈ ಮಧ್ಯೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸುತ್ತಿರುವ ಕೃಷ್ಣಬೈರೇಗೌಡ ಬುಧವಾರ ಪ್ರಚಾರ ಸಭೆಯಲ್ಲಿ ಮಾತನಾಡಿ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರು ಏಷ್ಯಾದ ಐಟಿ ರಾಜಧಾನಿ ಎಂಬ ಹೆಗ್ಗಳಿಕೆ ಪಡೆದಿತ್ತು.ಆದರೆ, ಬಿಜೆಪಿ ದುರಾಡಳಿತದ ಬಳಿಕ ಈಗ ಗನರಕ್ಕೆ 'ಭಾರತದ ಭ್ರಷ್ಟಾಚಾರ ಮತ್ತು ಕಸದ ತೊಟ್ಟಿಗಳ ರಾಜಧಾನಿ' ಎಂಬ ಕೆಟ್ಟ ಹೆಸರು ಬಂದಿದೆ ಎಂದರು. ಜಕ್ಕೂರು ಥಣಿಸಂದ್ರ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಜಾಲ ಹೋಬಳಿಗಳಲ್ಲಿ ಕೃಷ್ಣಬೈರೇಗೌಡ ಬುಧವಾರ ಪ್ರಚಾರ ನಡೆಸಿದರು.
ಪ್ರತಿಯೊಬ್ಬರೂ ಮತ ಚಲಾಯಿಸಬೇಕು
ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟರೇ ತುಂಬಿ ತುಳುಕುತ್ತಿದ್ದಾರೆ. ಯೋಗ್ಯರನ್ನು ಹುಡುಕುವುದು ಕಷ್ಟದ ಕೆಲಸವಾಗಿದೆ. ಲೂಟಿ ಹೊಡೆದ ಹಣವನ್ನು ಚೆಲ್ಲಿ ಗೆದ್ದು ಹೋದವರು ಮತ್ತೆ ಲೂಟಿಗೆ ಇಳಿಯುತ್ತಿದ್ದಾರೆ. ಜನಪ್ರತಿನಿಧಿಗಳ ಆಸ್ತಿ ಪ್ರಮಾಣ ಚುನಾವಣೆಯಿಂದ ಚುನಾವಣೆಗೆ ಹೆಚ್ಚುತ್ತಿದೆ. ಚುನಾಯಿತ ಪ್ರತಿನಿಧಿಗಳಲ್ಲಿ ಜನಪರ ಕಾಳಜಿ, ಮತದಾರರ ಬಗ್ಗೆ ಗೌರವ, ಭಯ ಮೂಡುವಂತಾಗಲು ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಮತದಾನದ ಬಗ್ಗೆ ನಿರ್ಲಕ್ಷ್ಯ, ತಾತ್ಸಾರ ಬೇಡ. ಪ್ರತಿಶತ ನೂರರಷ್ಟು ಮತದಾನ ನಡೆದಾಗ ಭ್ರಷ್ಟಾಚಾರ ನಿಗ್ರಹಕ್ಕೆ ನಾಂದಿ ಹಾಡಲು ಸಾಧ್ಯ.
ಟಿ ಪ್ರಕಾಶ್ ಜಯರಾಮಯ, ವಿಶ್ವ ಚಾಂಪಿಯನ್ ಭಾರತ ಅಂಧರ ಕ್ರಿಕೆಟ್ ತಂಡದ ಆಟಗಾರ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

