ಬೆಂಗಳೂರು ಗ್ರಾಮಾಂತರ

ಲೇಖನಿ ಬದಲು ಲಾಂಗು ಹಿಡಿಯುತ್ತಿರುವ ಯುವಜನತೆ: ಡಾ.ಆನಂದ ಗುರೂಜಿ

Published On :

ಮಾಲೂರು:  ಲೇಖನಿ ಮೂಲಕ ಶಿಕ್ಷಣ ಪಡೆದು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾಗಿದ್ದ ಯುವ ಜನತೆ ಐಷಾರಾಮಿ ಜೀವನಕ್ಕಾಗಿ ಲಾಂಗು ಮಚ್ಚುಗಳ ಮೂಲಕ ಅಡ್ಡದಾರಿ ಹಿಡಿದು ರಕ್ತ-ಸಿಕ್ತ ಜಗತ್ತನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ ಎಂದು ರಾಜ್ಯ ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಡಾ.ಆನಂದ ಗುರೂಜಿ ಹೇಳಿದರು.
ಪಟ್ಟಣದ ಸುಬ್ರಮಣ್ಯ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಕಾವಡಿ ಮಹೋತ್ಸವ ಅಂಗವಾಗಿ ಬುಧವಾರ ದೇವಾಲಯದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿ ಮಾತನಾದರು.
ಸಾಹಿತಿ ವೇಣು ಗೋಪಾಲ್ ವಹ್ನಿ ಮಾತನಾದರು. ಸುವರ್ಣ ಚಾನಲ್‌ನಲ್ಲಿ ಜ್ಯೋತಿಷ್ಯ ಕಾರ್ಯಕ್ರಮ ನಡೆಸಿಕೊಡುವ ಡಾ.ಆನಂದ್ ಗುರೂಜಿ  ಭಕ್ತಾದಿಗಳು ಕೇಳಿದ ಪ್ರಶ್ನೆ-ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಸಂಪಾದಕ ಎಂ.ಎಸ್.ಸುರೇಶ್ ಕುಮಾರ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ವಿ.ರವೀಂದ್ರ, ತಮಿಳುನಾಡಿನ ಸೆಂಗುಂದರ್ ಸಂಘದ ಮಣಿ, ತಾಲೂಕು ಸೆಂಗುಂದರ್ ಸಂಘದ ಅಧ್ಯಕ್ಷ ದೇವರಾಜ್ ಇದ್ದರು.
ಪೂರ್ಣಕುಂಭ ಸ್ವಾಗತ: ಪಟ್ಟಣಕ್ಕೆ ಆಗಮಿಸಿದ ಡಾ.ಆನಂದಗುರೂಜಿ ಅವರನ್ನು ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು. ಮಾರಿಕಾಂಬ ದೇಗುಲದಿಂದ ಸುಬ್ರಮಣ್ಯಸ್ವಾಮಿ ದೇಗುಲವರೆಗೆ ತೆರೆದ ಜೀಪಿನಲ್ಲಿ ಶ್ರೀಗಳನ್ನು ಕರೆ ತರಲಾಯಿತು.
ಬಿಬಿಎಂಪಿ ಹಿರಿಯ ಅಭಿಯಂತರ ಕೆ.ವೆಂಕಟೇಶ್, ದಾನಿ ನಾಗರಾಜ್, ರಾಮಪ್ಪ, ರವಿಚಂದ್ರ, ಬೆಮೆಲ್ ಗೋಪಾಲ್, ಕೃಷ್ಣಮೂರ್ತಿ, ಸೌಂದರ್, ನೂರಾರು ಮುಖಂಡರುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.