ಸೋನಿಯಾ, ರಾಹುಲ್ ಆಣತಿಗೆ ಮಣಿದು ಸ್ಪರ್ಧೆ
ಕ.ಪ್ರ.ವಾರ್ತೆ ಕನಕಪುರ ಆ.6
ಕನಕಪುರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಮುಖಂಡರ ಸಭೆ ನಗರದ ಹೊರವಲಯದ ಅರಳಾಳು ಗ್ರಾಮದಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯಿತು.
ಸುಮಾರು ಮೂರು ಸಾವಿರಕ್ಕೂ ಹೆಚ್ಚುಮಂದಿ ಸಭೆಯಲ್ಲಿ ಪಾಲ್ಗೊಂಡು ಮುಂಬರುವ ಲೋಕಸಭಾ ಚುನಾವಣೆ ಬಗ್ಗೆ ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಕಾಂಗ್ರೆಸ್ ಮುಖಂಡರುಗಳಾದ ಡಿ.ಕೆ.ಸುರೇಶ್, ವಿಪ ಮಾಜಿ ಸದಸ್ಯ ಎಸ್. ರವಿ, ಕೆಪಿಸಿಸಿ ಸದಸ್ಯ ಹೊನ್ನಿಗನಹಳ್ಳಿ ಶ್ರೀಕಂಠು, ಸೂರನಹಳ್ಳಿ ಜಯರಾಂ, ವಿಜಯದೇವ್, ಕೆ.ಎನ್.ದಿಲೀಪ್, ತಾಪಂ ಮಾಜಿ ಅಧ್ಯಕ್ಷ ಪುರುಷೋತ್ತಮ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಮಧ್ಯಾಹ್ನ ಸುಮಾರು ಎರಡು ಗಂಟೆ ಕಾಲ ಸುರಿದ ಜಡಿಮಳೆಯಲ್ಲಿಯೂ ಕಾರ್ಯಕರ್ತರುಗಳಾರೂ ಸಭೆಯಿಂದ ಚದುರದೆ ತಲೆಯ ಮೇಲೆ ಕುರ್ಚಿಗಳನ್ನೇ ರಕ್ಷಣೆಯನ್ನಾಗಿರಿಸಿಕೊಂಡು ಶಾಸಕರ ಹಾಗೂ ಲೋಕಸಭಾ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಭಾಷಣವನ್ನು ಉತ್ಸಾಹದಿಂದ ಕೇಳಿದರು.
ಬೆಂಗ್ರಾ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಮಾತನಾಡುತ್ತಾ, ರಾಜಕಾರಣಕ್ಕೆ ಇಳಿಯುವುದು ನನಗೆ ಇಷ್ಟವಿರಲಿಲ್ಲ. ಬಿಳೀ ಬಟ್ಟೆಗಳನ್ನು ತೊಡುತ್ತಿರಲಿಲ್ಲ, ಕನಕಪುರ ಕ್ಷೇತ್ರದ ಅಭಿವೃದ್ಧಿಗಾಗಿ, ಜನರ ಸಮಸ್ಯೆಗಳನ್ನು ತಮ್ಮ ಸಹೋದರ, ಶಾಸಕ ಡಿಕೆಶಿ ಪರವಾಗಿ ಪರಿಹರಿಸುತ್ತಿದ್ದ ತಾವು, ಕಾಂಗ್ರೆಸ್ ಅಧಿನಾಯಕಿ ಸೋನಿಯಾಜಿ ಹಾಗೂ ರಾಹುಲ್ ಗಾಂಧಿಯವರ ಆಣತಿ ಮೇರೆಗೆ ಸ್ಪರ್ಧೆಗೆ ಇಳಿದಿರುವುದಾಗಿ ತಿಳಿಸಿದರು. ಜನರು ಆಶೀರ್ವದಿಸಿ ಗೆಲವನ್ನು ನೀಡಿದರೆ ಕನಕಪುರದಷ್ಟೇ ಗಮನವನ್ನು ಬೆಂಗ್ರಾ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳಿಗೂ ನೀಡುವುದರೊಂದಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸುವ ಭವರಸೆಯನ್ನು ಡಿ.ಕೆ.ಸುರೇಶ್ ವ್ಯಕ್ತಪಡಿಸಿದರು.
ಗೆಲವೇ ಗುರಿ: ಶಾಸಕ ಶಿವಕುಮಾರ್ ಮಾತನಾಡುತ್ತಾ, ತಮಿಳುನಾಡಿನ ಗಡಿಯಿಂದ ಮೊದಲ್ಗೊಂಡು ತುಮಕೂರು ಗಡಿಯವರೆಗೆ ಅಗಾಧ ವಿಸ್ತೀರ್ಣದ ಬೆಂಗ್ರಾ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸುವುದು ಅಭ್ಯರ್ಥಿಗಳಿಗೆ ಸುಲಭದ ಕೆಲಸವಲ್ಲ. ಎಲ್ಲಾ ತಾಲೂಕುಗಳ ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕಾಗುತ್ತದೆ. ಅನೇಕ ಕಡೆಗಳಲ್ಲಿ ನಾನು ಹಿಂದಿನ ವೈಮನಸ್ಯವನ್ನು ಮರೆತು ಮುಖಂಡರುಗಳೊಂದಿಗೆ ರಾಜಿಯಾಗಿ ಪಕ್ಷದ ಗೆಲವನ್ನೇ ಗುರಿಯಾಗಿರಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

