ನೆಲಮಂಗಲ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆ
ನೆಲಮಂಗಲ: ಸೋಂಪುರ ಹೋಬಳಿ ವ್ಯಾಪ್ತಿಯ ಅಗಳಕುಪ್ಪೆ ಗ್ರಾಮ ಪಂಚಾಯ್ತಿಗೆ ಸೇರಿದ ಲಕ್ಕೂರು ಗ್ರಾಮ ಪಂಚಾಯ್ತಿ ಮತಕ್ಷೇತ್ರ-1ಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆರೀಫ್ಖಾನ್ ಭರ್ಜರಿ ಜಯಗಳಿಸಿದ್ದಾರೆ.
ಲಕ್ಕೂರು ಕ್ಷೇತ್ರದ ಸದಸ್ಯ ಸೈಯದ್ ನಿಸಾರ್ ಅವರು ಅಪಘಾತದಲ್ಲಿ ನಿಧನ ಹೊಂದಿದ್ದರು. ಇವರ ನಿಧನದಿಂದ ತೆರವಾದ ಮತಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ 508 ಮತದ ಗೆಲವು ಸಾಧಿಸಿದ್ದಾರೆ.
ಪ್ರತಿ ಸ್ಪರ್ಧಿಗಲಾದ ಸನಾವುಲ್ಲಾ-208, ಫಜಲ್ ರೆಹಮಾನ್-07, ಸಫೀರ್ ಅಹಮದ್-62 ಮತ ಪಡೆದಿದ್ದಾರೆ. 4 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಹನುಮಾನಾಯಕ್ ತಿಳಿಸಿದ್ದಾರೆ.
ವಿಜಯಿ ಆರೀಫ್ಖಾನ್ ಅವರನ್ನು ತಾ.ಪಂ. ಮಾಜಿ ಉಪಾಧ್ಯಕ್ಷ ಬಸವರಾಜಪ್ಪ, ಅಗಳಕುಪ್ಪೆ ಗ್ರಾ.ಪಂ.ಅಧ್ಯಕ್ಷ ಎಲ್.ಎಸ್.ಪ್ರಕಾಶ್, ಮಾಜಿ ಅಧ್ಯಕ್ಷ ಖಲೀಂವುಲ್ಲಾ, ಕಾಂಗ್ರೇಸ್ ಮುಖಂಡ ಗೋವಿಂದರಾಜು, ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ದರಾಜು, ಕೃಷ್ಣಪ್ಪ ನೂತನ ಸದಸ್ಯರಿಗೆ ಶುಭ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

