ಬಸ್ ಟಾಪ್‌ನಿಂದ ಬಿದ್ದು ಕ್ಲೀನರ್ ಸಾವು
ಕನಕಪುರ: ಕನಕಪುರ ತಾಲೂಕಿನ ಅಳ್ಳಿಮಾರನಹಳ್ಳಿ ಸಮೀಪ ಬಸ್ ಟಾಪ್‌ನಿಂದ ಕೆಳಗೆಬಿದ್ದು ಬಸ್‌ನ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ. ನತದೃಷ್ಟನನ್ನು ದೊಡ್ಡಾಲಹಳ್ಳಿ ಸಮೀಪದ ಹನುಮಂತನಗರದ ಶಿವಣ್ಣನ ಮಗ ಹಂಸರಾಜು(20) ಎಂದು ತಿಳಿದುಬಂದಿದೆ.
ರಾಮನಗರದಿಂದ ಕನಕಪುರಕ್ಕೆ ಬರುತ್ತಿದ್ದ ಲಕ್ಷ್ಮೀಟ್ರಾವಲ್ಸ್ ಬಸ್‌ನ ಕ್ಲೀನರ್ ಹಂಸರಾಜು ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ಪ್ರಯಾಣಿಗರ ಸಾಮಗ್ರಿಗಳನ್ನು ವಾಹನದ ಮೇಲ್ಭಾಗದಿಂದ ಇಳಿಸಿದ ನಂತರ ಚಲಿಸುತ್ತಿದ್ದ ಬಸ್‌ನಿಂದ ಒಳಗೆ ದೂರಲು ಯತ್ನಿಸಿ ಆಯತಪ್ಪಿ ಕೆಳಗೆಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕನಕಪುರ ಗ್ರಾಮಾಂತರ ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರಕ್ಷಕ ಉಪನಿರೀಕ್ಷಕ ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಬಸ್‌ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ನಂತರ ಶವವನ್ನು ವಾರಸುದಾರರಿಗೆ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

